ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ವೆಬ್‌ಸೈಟ್ ಹ್ಯಾಕ್, ಬೆಂಬಲಿಗರಿಗೆ ಬಿಗ್ ಶಾಕ್

|
Google Oneindia Kannada News

ಟ್ರಂಪ್‌ಗೆ ಶಕುನ ಸರಿಯಿಲ್ಲ ಅಂತಾ ಕಾಣುತ್ತೆ. ಏಕೆಂದರೆ ಚುನಾವಣೆಗೆ ಕೌಂಟ್‌ಡೌನ್ ಆರಂಭವಾದ ಬೆನ್ನಲ್ಲೇ ಮೇಲಿಂದ ಮೇಲೆ ಟ್ರಂಪ್‌ಗೆ ಸಂಕಷ್ಟಗಳು ಎದುರಾಗುತ್ತಿವೆ. ಈಗ ಡೊನಾಲ್ಡ್ ಟ್ರಂಪ್ ಎಲೆಕ್ಷನ್ ಕ್ಯಾಂಪೇನ್ ವೆಬ್‌ಸೈಟ್ ಹ್ಯಾಕ್ ಆಗಿದೆ. ಕ್ರಿಪ್ಟೋಕರೆನ್ಸಿ ವಂಚಕರು ಅಂದರೆ ಬಿಟ್‌ಕಾಯಿನ್ ರೀತಿ ವ್ಯವಹಾರ ನಡೆಸುವ ಕಿರಾತಕರು ಟ್ರಂಪ್ ವೆಬ್‌ಗೆ ಕನ್ನ ಹಾಕಿದ್ದಾರೆ.

ವೆಬ್ ಹ್ಯಾಕ್ ಮಾಡಿದ್ದೂ ಅಲ್ಲದೆ ತರಲೆ ಕೆಲಸ ಮಾಡಿದ್ದಾರೆ. ಟ್ರಂಪ್ ವೆಬ್ ಹ್ಯಾಕ್ ಆದ ಬಳಿಕ ಟ್ರಂಪ್ ವಿರುದ್ಧವೇ ಸುದ್ದಿ ಹರಡಿರುವ ಹ್ಯಾಕರ್‌ಗಳು, ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಪ್ರತಿದಿನ ನಕಲಿ ಸುದ್ದಿಗಳನ್ನು ಹರಡಿದ್ದಾರೆ. ಜಗತ್ತಿಗೆ ಸತ್ಯ ತಿಳಿಯಲು ಅವಕಾಶ ನೀಡುವ ಸಮಯ ಇದು ಎಂದು ಬರೆದುಕೊಂಡಿದ್ದಾರೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

ವೆಬ್ ಹ್ಯಾಕ್ ವಿಷಯ ಬಹಿರಂಗವಾಗಿದ್ದು ಕೂಡ ಅನಿರೀಕ್ಷಿತವಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಟ್ರಂಪ್ ವೆಬ್‌ಸೈಟ್‌ನಲ್ಲಿ ವಾತಾವರಣ ಬದಲಾವಣೆಗೆ ಸಂಬಂಧಪಟ್ಟ ಲೇಖನ ಹುಡುಕಲು ಮುಂದಾಗಿದ್ದರು. ಗೇಬ್ರಿಯಲ್ ಲೊರೆಂಜೊ ಗ್ರೆಶ್ಲರ್ ಎಂಬುವವರಿಗೆ ವೆಬ್ ಹ್ಯಾಕ್ ಆಗಿರುವುದು ಗೊತ್ತಾಗಿದ್ದು, ತಕ್ಷಣ ಅದರ ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಹ್ಯಾಕರ್ಸ್‌ ಟ್ರಂಪ್ ವೆಬ್‌ಸೈಟ್ ಅನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.

 ಟ್ರಂಪ್ ಪರ ವಕ್ತಾರರು ಹೇಳಿದ್ದೇನು..?

ಟ್ರಂಪ್ ಪರ ವಕ್ತಾರರು ಹೇಳಿದ್ದೇನು..?

ಘಟನೆಯಿಂದ ಟ್ರಂಪ್‌ ಪ್ರಚಾರದ ಹೊಣೆ ಹೊತ್ತಿರುವ ತಂಡಕ್ಕೆ ಆಘಾತವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಟ್ರಂಪ್ ಚುನಾವಣಾ ಪ್ರಚಾರ ಉಸ್ತುವಾರಿ, ವೆಬ್‌ಸೈಟ್ ಹ್ಯಾಕ್ ಆಗಿದ್ದು ನಿಜ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಹ್ಯಾಕ್ ಆಗುವುದರ ಹಿಂದೆ ಯಾರಿದ್ದಾರೆ ಎಂಬುದನ್ನ ನಾವು ಸದ್ಯದಲ್ಲೇ ಪತ್ತೆಹಚ್ಚುತ್ತೇವೆ ಎಂದಿದ್ದಾರೆ. ಹ್ಯಾಕ್ ಬಳಿಕ ಟ್ರಂಪ್ ವಿರುದ್ಧ ಬರೆದುಕೊಂಡಿರುವ ಸಾಲುಗಳು ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ರಂಪ್ ಬೆಂಬಲಿಗರ ನಿದ್ದೆಗೆಡಿಸಿದೆ.

ಟ್ರಂಪ್‌ಗೆ ಈ ರೀತಿ ಶಾಕ್ ಮೊದಲನೇಲ್ಲ

ಟ್ರಂಪ್‌ಗೆ ಈ ರೀತಿ ಶಾಕ್ ಮೊದಲನೇಲ್ಲ

ಡೊನಾಲ್ಡ್ ಟ್ರಂಪ್‌ಗೆ ಈ ರೀತಿ ಶಾಕ್ ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ರೀತಿ ಅನುಭವ ಆಗಿದೆ. ಡಚ್‌ನ ಭದ್ರತಾ ಸಂಶೋಧಕರೊಬ್ಬರು ಟ್ರಂಪ್‌ ಟ್ವಿಟ್ಟರ್ ಖಾತೆಗೆ ಲಾಗ್‌ಇನ್ ಆಗಿದ್ದರು. ಟ್ರಂಪ್ ಪಾಸ್‌ವರ್ಡ್ ಊಹೆ ಮಾಡಿದ್ದ ಅವರು, ಲಾಗಿನ್ ಆಗಿಬಿಟ್ಟಿದ್ದರು. ಅಲ್ಲದೆ ಅಮೆರಿಕದ 'ಸಿಇಆರ್‌ಟಿ' ಎಂಬ ಸೈಬರ್ ಭದ್ರತಾ ಘಟಕಕ್ಕೆ ಈ ಕುರಿತು ಮೆಸ್ಸೇಜ್ ಕೂಡ ಕಳುಹಿಸಿದ್ದರು. ಆದರೆ ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್‌ ಆಗಿದ್ದನ್ನ ಒಪ್ಪಿಕೊಳ್ಳದ ಟ್ರಂಪ್, ನನ್ನ ಟ್ವಿಟ್ಟರ್ ಅಕೌಂಟ್‌ಗೆ ಹಾನಿಯಾಗಿಲ್ಲ. ನನ್ನ ಅಕೌಂಟ್ ಹ್ಯಾಕ್ ಮಾಡಲು 197 IQ ಬೇಕು ಎಂದಿದ್ದರು.

ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!

ಅಮೆರಿಕ ಸರ್ಕಾರಿ ಕಂಪ್ಯೂಟರ್‌ಗಳೇ ಹ್ಯಾಕ್..!

ಅಮೆರಿಕ ಸರ್ಕಾರಿ ಕಂಪ್ಯೂಟರ್‌ಗಳೇ ಹ್ಯಾಕ್..!

ಕಳೆದ ವಾರ ಅಮೆರಿಕದಲ್ಲಿ ವಿಚಿತ್ರ ಘಟನೆ ನಡೆದಿತ್ತು. ಖುದ್ದು ಅಮೆರಿಕದ ಫೆಡರಲ್ ಅಧಿಕಾರಿಗಳು ಹಲವು ರಾಜ್ಯಗಳ ಸರ್ಕಾರಿ ಕಂಪ್ಯೂಟರ್‌ಗಳು ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ರಷ್ಯಾ ನಮ್ಮ ಮೇಲೆ ಸೈಬರ್ ದಾಳಿ ಮಾಡಿದೆ ಎಂದು ಫೆಡರಲ್ ಅಧಿಕಾರಿಗಳು ಆರೋಪಿಸಿದ್ದರು.

ರಷ್ಯಾದ ನುರಿತ ಹ್ಯಾಕರ್‌ಗಳ ತಂಡವು ಅಮೆರಿಕದ ವಿವಿಧ ವಲಯಗಳನ್ನು ಟಾರ್ಗೆಟ್ ಮಾಡಿದೆ ಎಂದು ಅಮೆರಿಕ ಆರೋಪಿಸಿತ್ತು. ಈಗಾಗಲೇ ಅಮೆರಿಕ ಮತದಾರರ ಮಾಹಿತಿ ಕದ್ದಿರುವ ಆರೋಪ ರಷ್ಯಾ ಮೂಲದ ಹ್ಯಾಕರ್‌ಗಳ ಮೇಲಿದೆ. ಈ ನಡುವೆ ನೀರು ಸರಬರಾಜು ಕೇಂದ್ರಗಳು, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗಿತ್ತು.

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಕಳೆದ ವಾರ ಆರೋಪಿಸಿತ್ತು.

ಕೋರ್ಟ್ ತೀರ್ಪಿನ ವಿರುದ್ಧವೇ ಡೊನಾಲ್ಡ್ ಟ್ರಂಪ್ ಆಕ್ರೋಶಕೋರ್ಟ್ ತೀರ್ಪಿನ ವಿರುದ್ಧವೇ ಡೊನಾಲ್ಡ್ ಟ್ರಂಪ್ ಆಕ್ರೋಶ

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಬಿಡೆನ್ ಕೊಟ್ಟ ವಾರ್ನಿಂಗ್ ಏನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶತ್ರುದೇಶಗಳು ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂದು ಡಿಬೆಟ್ ವೇಳೆ ಬಿಡೆನ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಅಮೆರಿಕ ತಂಟೆಗೆ ಬಂದವರಿಗೆ ಮುಂದಿದೆ ಮಾರಿಹಬ್ಬ ಎಂಬ ಮುನ್ಸೂಚನೆ ಬಿಡೆನ್‌ರಿಂದ ಸಿಕ್ಕಿತ್ತು. ಬಿಡೆನ್ ಈ ರೀತಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಷ್ಯಾ ಹ್ಯಾಕರ್ಸ್ ಕೃತ್ಯ ಬಟಾಬಯಲಾಗಿದೆ. ರಷ್ಯಾ ಮೂಲದ ಹ್ಯಾಕರ್‌ಗಳ ಬಗ್ಗೆ ಬಿಡೆನ್ ಸಹಿತವಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹಲವು ವರ್ಷಗಳಿಂದ ನಾನಾ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಮಧ್ಯೆ ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂಬಂಧಿಸಿದ ವೆಬ್‌ಸೈಟ್ ಕೂಡ ಹ್ಯಾಕ್ ಆಗಿರುವುದು ಆಘಾತ ಕೊಟ್ಟಿದೆ.

English summary
Trump website hacked just 6 days before the US presidential election. Trump campaign website hackers have posted derogatory comments against Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X