ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದ ಡೊನಾಲ್ಡ್ ಟ್ರಂಪ್

|
Google Oneindia Kannada News

Recommended Video

ನಿಮಗೆ ಶಾಂತಿ ಬೇಕು ಅಂದ್ರೆ ಹೀಗೆ ಮಾಡಿ ಎಂದ ಟ್ರಂಪ್. | Donald Trump | Oneindia Kannada

ವಾಷಿಂಗ್ಟನ್, ಸೆಪ್ಟೆಂಬರ್ 25: ಚೀನಾ ವಿರುದ್ಧ ಟ್ರಂಪ್ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಭವಿಷ್ಯವು ಜಾಗತಿಕ ವಾದಗಳಿಗೆ ಸೇರಿಲ್ಲ, ಆದರೆ ದೇಶಪ್ರೇಮಿಗಳಿಗೆ ಭವಿಷ್ಯ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ.ಪ್ರತಿಯೊಂದು ಕ್ಷೇತ್ರದಲ್ಲೂ ಅಮೆರಿಕ ಮುಂದುವರೆದಿದೆ. ನಮ್ಮ ನಾಗರಿಕರ ಆಸೆ ಮತ್ತು ಕನಸ್ಸನ್ನು ಈಡೇರಿಸುವತ್ತ ನಾವು ಗಮನ ಹರಿಸಿದ್ದೇವೆ ಎಂದು ಹೇಳಿದರು.

ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್ಮೋದಿ 'ಭಾರತದ ಪಿತಾಮಹ' ಎಂದ ಡೊನಾಲ್ಡ್ ಟ್ರಂಪ್

ಶಾಂತಿ ಬೇಕಿದ್ದರೆ ನಿಮ್ಮ ದೇಶ ನಾಗಕರಿಕರನ್ನು ಪ್ರೀತಿಸಿ ಹಾಗೂ ನೆರೆ ಹೊರೆ ದೇಶಗಳ ಜೊತೆ ಸೌಹಾರ್ದತೆಯಿಂದ ಇರಿ ಎಂದು ಟ್ರಂಪ್ ಹೇಳುವ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಚೀನಾದ ವಾಣಿಜ್ಯ ದುರುಪಯೋಗವನ್ನು ಸಹಿಸಿಕೊಂಡ ಸಮಯ ಮುಗಿದಿದೆ ಎಂದರ ಟ್ರಂಪ್ , ಚೀನಾ ಜಾಗತಿಕ ವಾಣಿಜ್ಯ ಸಂಘಟನೆಗೆ ಪ್ರವೇಶಿಸಿದ ಬಳಿಕ ಅಮೆರಿಕ 60 ಸಾವಿರ ಕಾರ್ಖಾನೆಗಳನ್ನು ಕಳೆದುಕೊಂಡಿದೆ. ಜಾಗತಿಕವಾಗಿ ಇದು ಇದು ಎಲ್ಲಾ ದೇಶಗಳಲ್ಲೂ ಆಗಿದೆ ಇನ್ನಾದರೂ ಬದಲಾವಣೆ ಕಾಣಬೇಕಿದೆ ಎಂದು ಹೇಳಿದರು.

 ಟ್ರಂಪ್ ಭಾರತಕ್ಕೆ ಒಳ್ಳೆಯ ಸ್ನೇಹಿತ ಎಂದ ಮೋದಿ

ಟ್ರಂಪ್ ಭಾರತಕ್ಕೆ ಒಳ್ಳೆಯ ಸ್ನೇಹಿತ ಎಂದ ಮೋದಿ

ಹ್ಯೂಸ್ಟನ್ ಗೆ ಬಂದಿದ್ದಕ್ಕಾಗಿ ಟ್ರಂಪ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ, ಅವರು ನ್ನ ಸ್ನೇಹಿತರು. ಆದರೆ ಅವರು ಭಾರತಕ್ಕೆ ಯಾವಾಗಲೂ ಒಳ್ಳೆಯ ಸ್ನೇಹಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಸಮಾವೇಶಕ್ಕೆ ಬಂದಿದ್ದು ನಿಜಕ್ಕೂ ಖುಷಿ ತಂದಿದೆ.ಡೊನಾಲ್ಡ್ ಟ್ರಂಪ್ ನನಗೆ ಮಾತ್ರವಲ್ಲ ಇಡೀ ಭಾರತಕ್ಕೆ ಸ್ನೇಹಿತ ಎಂದು ಬಣ್ಣಿಸಿದ್ದಾರೆ.

 ಇರಾನ, ಪಾಕಿಸ್ತಾನಕ್ಕೂ ಪರೋಕ್ಷವಾಗಿ ಚಾಟಿ ನೀಡಿದ ಟ್ರಂಪ್

ಇರಾನ, ಪಾಕಿಸ್ತಾನಕ್ಕೂ ಪರೋಕ್ಷವಾಗಿ ಚಾಟಿ ನೀಡಿದ ಟ್ರಂಪ್

ನಿಮಗೆ ಶಾಂತಿ ಬೇಕಿದ್ದರೆ, ನಿಮ್ಮ ದೇಶವನ್ನು ಪ್ರೀತಿಸಿ ಹಾಗೂ ನೆರೆ ಹೊರೆ ದೇಶಗಳ ಜೊತೆ ಸೌಹಾರ್ದತೆಯಿಂದ ನಡೆದುಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ, ಇರಾನ್ ವಿರುದ್ಧಚೂ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಅಮೆರಿಕದ ಸ್ವಾತಂತ್ರ್ಯ ಹಾಗೂ ಸಾರ್ವಜನಿಕಭೌಮತೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ, ಅಮೆರಿಕ ವಿಶ್ವದ ಪ್ರಬಲ ರಾಷ್ಟ್ರ. ಈಗ ಉಂಟಾಗಿರುವ ಜಾಗತಿಕ ಆರ್ಥಿಕ ಹಿನ್ನಡೆಯನ್ನು ಸರಿಪಡಿಸಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಮೋದಿ-ದೆವೊರಾ ಮಾತುಕತೆಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಮೋದಿ-ದೆವೊರಾ ಮಾತುಕತೆ

 ಇಂಡೋ-ಅಮೆರಿಕ ಹೂಡಿಕೆ ಒಪ್ಪಂದ

ಇಂಡೋ-ಅಮೆರಿಕ ಹೂಡಿಕೆ ಒಪ್ಪಂದ

ಭಾರತ ಹಾಗೂ ಅಮೆರಿಕದ ನಡುವೆ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಇಂಧನ ವಿಭಾಗದಲ್ಲಿ ಭಾರತ ಹಾಗೂ ಅಮೆರಿಕ 49 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ ಹಾಗೂ ಭಾರತ ನಡುವೆ ವ್ಯಾಪಾರ ಅಭಿವೃದ್ಧಿ ಸಂಬಂಧ ಶಕ್ತಿ ವಿಭಾಗದಲ್ಲಿ 49 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆ ಒಪ್ಪಂದದ ಬಗ್ಗೆ ಬಹಳ ಸಂತಸವಿದೆ. ಇದರಿಂದ 60 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವ್ಯಾಪಾರಾಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.

 ಮೋದಿ ಫಾದರ್ ಆಫ್ ಇಂಡಿಯಾ ಎಂದ ಟ್ರಂಪ್

ಮೋದಿ ಫಾದರ್ ಆಫ್ ಇಂಡಿಯಾ ಎಂದ ಟ್ರಂಪ್

ಭಾರತದ ಪ್ರಧಾನಿ ನರೇಂದ್ರ ಮೋದಿ ಫಾದರ್ ಆಫ್ ಇಂಡಿಯಾ ಎಂದು ಡೊನಾಲ್ಡ್ ಟ್ರಂಪ್ ಉದ್ಘರಿಸಿದ್ದಾರೆ.ಭಾರತಕ್ಕಾಗಿ ನರೇಂದ್ರ ಮೋದಿ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಹಾಗೂ ಅನುಕರಣೀಯ ಎಂದು ಮೋದಿಯನ್ನು ಹಾಡಿಹೊಗಳಿದ್ದಾರೆ.

English summary
US President’s latest flurry of tweets includes warning to Beijing not to retaliate after he raised tariffs on Chinese imports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X