ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಾತ್ಮಕ ಟ್ವೀಟ್ ಮಾಡಿ, ಡಿಲೀಟ್ ಮಾಡಿದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜೂನ್ 29: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಪ್ಪು-ಬಿಳಿಯ ಜನಾಂಗೀಯ ಗಲಾಟೆ ತಾರಕಕ್ಕೇರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಏತನ್ಮಧ್ಯೆ ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕ್ ಪಕ್ಷದಿಂದ ಮುಂದಿನ ಅಭ್ಯರ್ಥಿಯಾಗಿಯೂ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಟ್ವೀಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಕಳೆದ ಒಂದೆರೆಡು ತಿಂಗಳುಗಳಿಂದ ಅಮೆರಿಕದ ಸಾಕಷ್ಟು ಭಾಗಗಳಲ್ಲಿ ಕಪ್ಪು ಹಾಗೂ ಬಿಳಿಯ ಜನಾಂಗದ ನಡುವೆ ಗಲಾಟೆಗಳು ನಡೆಯುತ್ತಲೇ ಇದೆ.

Donald Trump

ರಿಪಬ್ಲಿಕ್ ಪಕ್ಷ ಹಾಗೂ ಡೊನಾಲ್ಡ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ನೇತೃತ್ವದಲ್ಲಿ ಕಪ್ಪು ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೊನಾವೈರಸ್ ಭಯದ ನಡುವೆಯೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಿಲಿಟರಿ ನಿಯೋಜಿಸುವುದಾಗಿ ಪ್ರತಿಭಟನಾಕಾರರಿಗೆ ಕಟ್ಟೆಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್ಮಿಲಿಟರಿ ನಿಯೋಜಿಸುವುದಾಗಿ ಪ್ರತಿಭಟನಾಕಾರರಿಗೆ ಕಟ್ಟೆಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಇದಕ್ಕೆ ಪ್ರತಿಯಾಗಿ ಬಿಳಯರು ಕೂಡ ಕೆಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ಟ್ರಂಪ್ ಪರವಾಗಿ ಪ್ರಚಾರವನ್ನು ಕೂಡ ಮಾಡುತ್ತಿದ್ದಾರೆ. ಇಂತಹುದರಲ್ಲೇ ಒಬ್ಬ ವ್ಯಕ್ತಿ ತನ್ನ ವಾಹನದಲ್ಲಿ ಟ್ರಂಪ್ 2020 ಎಂದು ಬರೆದುಕೊಳ್ಳುವುದರ ಜೊತೆಗೆ, ಟ್ರಂಪ್‌ಗೆ ಬೆಂಬಲ ಸೂಚಿಸಿ ಹೋಗುತ್ತಿರುವಾಗ ವೈಟ್ ಪವರ್ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಶೇರ್ ಮಾಡಿಕೊಂಡಿದ್ದರು.

ಹಾಗೆಯೇ ಈ ವಿಡಿಯೋದಲ್ಲಿ ಪ್ರತಿಭಟನೆ ನಡೆಸುತ್ತಿದ್ದವನು 'ದೇರ್ ಯು ಗೋ ವೈಟ್ ಪವರ್ ಡಿಡ್ ಯು ಹಿಯರ್ ದಟ್' ಎಂದು ಹೇಳಿ ಕೂಗಿದ್ದ ಅದೇ ವಿಡಿಯೋವನ್ನು ಟ್ರಂಪ್ ಶೇರ್ ಮಾಡಿಕೊಂಡಿದ್ದರು. ಜೂನ್ 28ರಂದು ಬೆಳಗ್ಗೆ 7.30ರ ಸುಮಾರಿಗೆ ಈ ವಿಡಿಯೋ ಶೇರ್ ಮಾಡಲಾಗಿತ್ತು. ಆದರೆ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು.

ಅಧ್ಯಕ್ಷರೇ ನೇರವಾಗಿ ಈ ರೀತಿಯ ಜನಾಂಗೀಯ ಗಲಾಟೆಗಳಿಗೆ ಪ್ರಚೋದನೆ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಪ್ರತಿಪಕ್ಷಗಳು ಕೂಡ ಟ್ರಂಪ್ ವಿರುದ್ಧ ಟೀಕೆಯನ್ನು ವ್ಯಕ್ತಪಡಿಸಿದರು. ಹೀಗಾಗಿ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ವಿಡಿಯೋ ಟ್ರಂಪ್ ಖಾತೆಯಿಂದ ಮಾಯವಾಗಿದೆ.

ಆದರೆ ಈ ಬಗ್ಗೆ ಶ್ವೇತಭವನದ ಅಧಿಕಾರಿಗಳು ಭಿನ್ನ ರಾಗ ಹಾಕುತ್ತಿದ್ದಾರೆ. ನಾವು ಇಂತಹ ಯಾವುದೇ ಟ್ವೀಟನ್ನೇ ನೋಡಿಲ್ಲ, ಟ್ವೀಟ್ ಮಾಡಿರುವುದೇ ಸುಳ್ಳು ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಟ್ರಂಪ್ ಇನ್ನು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

English summary
US President Donald Trump Sunday shared a video of a stand-off between anti-Trump protesters and his supporters in which a man chants "white power" -- before deleting it amid an outcry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X