ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಹಬ್ಬದಲ್ಲಿ ಹಿಂದೂಗಳನ್ನೇ ಮರೆತ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 14: ದೀಪಾವಳಿ ಹಬ್ಬ ಮುಗಿದ ಒಂದು ವಾರದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ. ಆದರೆ, ಅವರ ಟ್ವೀಟ್ ಟ್ವಿಟ್ಟಿಗರ ಟ್ರಾಲ್‌ಗೆ ಗುರಿಯಾಗಿದೆ.

ಏಕೆಂದರೆ, ಟ್ರಂಪ್ ಕೋರಿರುವ ಶುಭಾಶಯದಲ್ಲಿ ಹಿಂದೂಗಳ ಉಲ್ಲೇಖವೇ ಇಲ್ಲ. ಒಂದು ಟ್ವೀಟ್ ಮಾಡಿದ್ದ ಟ್ರಂಪ್, ಅದನ್ನು ಅಳಿಸಿ ಹಾಕಿ ಮತ್ತೊಂದು ಟ್ವೀಟ್ ಮಾಡಿದ್ದರು ಅದರಲ್ಲಿಯೂ ಟ್ರಂಪ್ ಹಿಂದೂಗಳನ್ನು ಬಿಟ್ಟು ಉಳಿದ ಧರ್ಮಗಳನ್ನು ಉಲ್ಲೇಖಿಸಿದ್ದಾರೆ.

ಮೊದಲ ಟ್ವೀಟ್‌ನಲ್ಲಿ 'ದೀಪಾವಳಿ ಬೌದ್ಧರು, ಸಿಖ್ಖರು ಮತ್ತು ಜೈನರು ಆಚರಿಸುವ ಹಬ್ಬ' ಎಂದು ಟ್ರಂಪ್ ಬರೆದುಕೊಂಡಿದ್ದರು. ಅದರಲ್ಲಿ ಈ ಹಬ್ಬವನ್ನು ಪ್ರಮುಖವಾಗಿ ಆಚರಿಸುವ ಹಿಂದೂಗಳನ್ನು ಹೆಸರಿಸಿರಲಿಲ್ಲ. ಅದಕ್ಕೆ ಅಲ್ಲಿ ಟೀಕೆಗಳು ವ್ಯಕ್ತವಾದವು.

ಇದು ಟ್ರಂಪ್ ಅವರು ಮಾಡಿದ ದೀಪಾವಳಿ ಭಾಷಣವನ್ನು ಟ್ವೀಟ್ ಮಾಡುವಲ್ಲಿ ಆದ ಪ್ರಮಾದ ಎಂದು ಹೇಳಲಾಗಿದೆ.

ಟ್ರಂಪ್ ಅವರ ಭಾಷಣದ ಎರಡನೆಯ ಭಾಗವನ್ನು ಮೊದಲನೆಯ ಟ್ವೀಟ್ ಆಗಿ ಬಳಸಿಕೊಳ್ಳಲಾಗಿತ್ತು. ಬಳಿಕ ಅದನ್ನು ಅಳಿಸಿ ಹಾಕಲಾಯಿತು. ಎರಡನೆಯ ಟ್ವೀಟ್‌ನಲ್ಲಿಯೂ ಹಿಂದೂಗಳನ್ನು ಉಲ್ಲೇಖ ಮಾಡಿರಲಿಲ್ಲ. ನಂತರ ಮೂರನೇ ಟ್ವೀಟ್ ಮಾಡಲಾಯಿತು.

ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ!ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ!

ಈ ಟ್ವೀಟ್‌ಗಳ ನಡುವಿನ ಒಂದು ಗಂಟೆಯ ಅಂತರ ಟ್ವಿಟ್ಟರ್‌ನಲ್ಲಿ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಲು ಸಾಕಾಯಿತು.

Array

ದೀಪಾವಳಿ ಆಚರಣೆ

ಇಂದು ನಾವು ದೀಪಾವಳಿ ಆಚರಿಸುವ ಸಲುವಾಗಿ ಸೇರಿದ್ದೆವು. ಬೌದ್ಧರು, ಸಿಖ್ಖರು ಮತ್ತು ಜೈನರು ಅಮೆರಿಕ ಮತ್ತು ಜಗತ್ತಿನೆಲ್ಲೆಡೆ ಆಚರಿಸುವ ಹಬ್ಬ ಎಂದು ಟ್ರಂಪ್ ಹೇಳಿದ್ದರು.

ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ

ಬೆಳಕಿನ ಹಬ್ಬ

ಆ ಟ್ವೀಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಟ್ರಂಪ್, 'ದೀಪಾವಳಿಯ ಹಬ್ಬವನ್ನು ಆಚರಿಸುವುದು ನನಗೆ ಬಹುದೊಡ್ಡ ಗೌರವವಾಗಿದೆ. ಇದು ಹಿಂದೂಗಳ ಬೆಳಕಿನ ಹಬ್ಬ. ಬಹಳ ಬಹಳ ವಿಶೇಷ ಜನರೊಂದಿಗೆ!' ಎಂದು ಬರೆದಿದ್ದಾರೆ.

ಶಿಮ್ಲಾ ಜನ ಖುಷಿಯಿಂದ ಹಬ್ಬ ಮಾಡ್ತಾರೆ, ಮರುದಿನವೇ ಕಲ್ಲಿನಿಂದ ಹೊಡ್ಕೊತಾರೆ ಶಿಮ್ಲಾ ಜನ ಖುಷಿಯಿಂದ ಹಬ್ಬ ಮಾಡ್ತಾರೆ, ಮರುದಿನವೇ ಕಲ್ಲಿನಿಂದ ಹೊಡ್ಕೊತಾರೆ

ಧರ್ಮ ಏಕೆ ಉಲ್ಲೇಖಿಸುತ್ತೀರಿ

ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ ನೋಡಿ ಖುಷಿಯಾಯಿತು. ಆದರೆ, ಯಾವುದೇ ಜಾತಿ ಅಥವಾ ಧರ್ಮವನ್ನು ಏಕೆ ಉಲ್ಲೇಖ ಮಾಡುತ್ತೀರಿ? ಆದರೆ, ನೀವು ಉಲ್ಲೇಖ ಮಾಡಿದಾಗಿನಿಂದ... ಹೇಳುತ್ತೇನೆ, ನೀವು ಹಿಂದೂಗಳನ್ನೇ ಮರೆತಿದ್ದೀರಿ. ಇದು ಅವರ ಅತಿ ದೊಡ್ಡ ಹಬ್ಬ ಎಂದು ವಿಕಾಸ್ ವರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆ

ಹಿಂದೂಗಳ ಹೆಸರಿರಲಿಲ್ಲ

ಟ್ರಂಪ್ ಅವರ ಟ್ವಿಟ್ಟರ್ ಅಕೌಂಟ್ ಮಾಡಿದ ದೀಪಾವಳಿ ಟ್ವೀಟ್ ನಲ್ಲಿ ಹಿಂದೂಗಳನ್ನು ಹೆಸರಿಸಿರಲಿಲ್ಲ. ಅದನ್ನು ಅಳಿಸಿ ಮತ್ತೆ ಅದನ್ನೇ ಬೇರೆ ಲಿಂಕ್‌ನೊಂದಿಗೆ ಪೋಸ್ಟ್ ಮಾಡಲಾಯಿತು. ಆದರೆ ಅದರಲ್ಲಿಯೂ ಹಿಂದೂಗಳಿಲ್ಲ? ಎಂದು ಟಾಮ್ ಫಿಲಿಪ್ಸ್ ಟ್ವೀಟ್ ಮಾಡಿದ್ದಾರೆ.

ಫೋಟೊಗಾಗಿ ಆಚರಣೆ

ದೀಪಾವಳಿ ಕಳೆದ ವಾರ ಇದ್ದಿದ್ದು. ಆದರೆ, ನೀವು ಫೋಟೊದ ಸಲುವಾಗಿ ಕ್ರಿಸ್ ಮಸ್ ಅನ್ನು ಜನವರಿಯಲ್ಲಿ ಬೇಕಾದರೂ ಆಚರಿಸಬಹುದು ಎಂದು ಬಿಸ್ಟರ್ಡಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
American President Donald Trump tweets on Diwali a week after festival, described as 'holiday observed by Buddhists, Sikhs and Jains'. He forget to mention Hindus in the second tweet also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X