• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಎಡವಟ್ಟಿನಿಂದಲೇ ವೈಟ್‌ಹೌಸ್ ಕೊರೊನಾ ಹಾಟ್‌ಸ್ಪಾಟ್ ಆಗಿದೆ: ಒಬಾಮಾ

|

''ನಾನು ಕೂಡ ವೈಟ್‌ಹೌಸ್‌ನಲ್ಲಿ ವಾಸ ಮಾಡಿದ್ದೀನಿ. ಸುಮಾರು ವರ್ಷಗಳ ಕಾಲ ಅಲ್ಲೇ ತಂಗಿದ್ದೀನಿ. ಅಷ್ಟಕ್ಕೂ ವೈಟ್‌ಹೌಸ್‌ನಲ್ಲಿ ಶಿಸ್ತು ಇರುತ್ತದೆ, ಟ್ರಂಪ್ ಶಿಸ್ತು ಪಾಲನೆ ಮಾಡಿದ್ದರೆ ಇಂದು ವೈಟ್‌ಹೌಸ್ 'ಕೊರೊನಾ' ಹಾಟ್‌ಸ್ಪಾಟ್ ಆಗುತ್ತಿರಲಿಲ್ಲ'' ಎಂದು ಒಬಾಮಾ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಬಿಡೆನ್ ಪರ ಮತಬೇಟೆ ಮುಂದುವರಿಸಿದ್ದು, ಫ್ಲೋರಿಡಾ ರಾಜ್ಯದ ಒರ್ಲ್ಯಾಂಡೊ ನಗರದಲ್ಲಿ ಆಯೋಜಿಸಿದ್ದ ಕ್ಯಾಂಪೇನ್‌ನಲ್ಲಿ ಒಬಾಮಾ ಟ್ರಂಪ್ ವಿರುದ್ಧ ಹರಿಹಾಯ್ದರು. ಟ್ರಂಪ್ ಮಾಡಿದ ಎಡವಟ್ಟುಗಳು ಒಂದೆರಡಲ್ಲ, ಅವರ ತಪ್ಪಿನಿಂದಲೇ ಅಮೆರಿಕ ಇವತ್ತು ಇಂತಹ ಸಮಸ್ಯೆ ಎದುರಿಸುವಂತಾಗಿದೆ. ಅಧಿಕೃತ ನಿವಾಸದಲ್ಲಿಯೂ ಟ್ರಂಪ್ ಶಿಸ್ತು ಪಾಲಿಸಿಲ್ಲ, ಇಂದು ಅಮೆರಿಕ ಕೊರೊನಾ ಕೂಪದಲ್ಲಿ ಬಿದ್ದು ವಿಲವಿಲನೆ ಒದ್ದಾಡಲು ಟ್ರಂಪ್‌ರ ನೀತಿ ಹಾಗೂ ಕ್ರಮಗಳೇ ಕಾರಣ ಎಂದಿದ್ದಾರೆ ಒಬಾಮಾ.

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ

ಕಳೆದ ಒಂದು ವಾರದಿಂದಲೂ ಒಬಾಮಾ ಬಿಡೆನ್ ಪರ ಇದೇ ರೀತಿ ನಿರಂತರವಾಗಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಮತಬೇಟೆಗೆ ಇಳಿದಿದ್ದಾರೆ. ಒಬಾಮಾ ಹೀಗೆ ಕ್ಯಾಂಪೇನ್ ವೇದಿಕೆಯನ್ನು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಳ್ಳುತ್ತಿದ್ದು, ಹಾಲಿ ಅಧ್ಯಕ್ಷ ಟ್ರಂಪ್ ಮಾಡಿರುವ ತಪ್ಪುಗಳನ್ನ ಒಂದೊಂದಾಗಿ ಒಬಾಮಾ ವಿವರಿಸುತ್ತಿದ್ದಾರೆ.

1 ಲಕ್ಷ ಸಣ್ಣ ಉದ್ದಿಮೆಗಳು ಮುಚ್ಚಿವೆ

1 ಲಕ್ಷ ಸಣ್ಣ ಉದ್ದಿಮೆಗಳು ಮುಚ್ಚಿವೆ

2.25 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ‘ಕೊರೊನಾ'ಗೆ ಬಲಿಯಾಗಿದ್ದಾರೆ, ಇಷ್ಟೇ ಅಲ್ಲ 1 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ದಿಮೆಗಳು ಮುಚ್ಚಿ ಹೋಗಿವೆ. ಇದು ಅಮೆರಿಕದಲ್ಲಿ ಎದುರಾಗಿರುವ ತುರ್ತು ಪರಿಸ್ಥಿತಿ ಬಿಂಬಿಸುವ ಜೊತೆಗೆ ಅನಿವಾರ್ಯ ಕ್ರಮಗಳನ್ನು ಆಹ್ವಾನಿಸಿದೆ. ಆದರೆ ಟ್ರಂಪ್‌ಗೆ ಈ ಬಗ್ಗೆ ಚಿಂತೆ ಇದ್ದಂತಿಲ್ಲ. ಅಮೆರಿಕದಲ್ಲಿ ವೈರಸ್ ಯಾವ ಪರಿ ಅಟ್ಟಹಾಸ ಮೆರೆಯುತ್ತಿದೆ ಎಂದರೆ, ಅಷ್ಟು ಸುಲಭವಾಗಿ ನಾವು ಚೇತರಿಸಿಕೊಳ್ಳಲು ಆಗುವುದಿಲ್ಲ. ಆದರೆ ಟ್ರಂಪ್‌ಗೆ ಇದ್ಯಾವುದರ ಬಗ್ಗೆಯೂ ಯೋಚನೆಯೇ ಇಲ್ಲ ಎಂದಿದ್ದಾರೆ ಬರಾಕ್ ಒಬಾಮಾ. ಅಮೆರಿಕ ಎದುರಿಸುತ್ತಿರುವ ಕೊರೊನಾ ಪರಿಸ್ಥಿತಿ ಬಗ್ಗೆ ಮಾತನಾಡುವ ಮಾಧ್ಯಮಗಳ ವಿರುದ್ಧವೇ ಟ್ರಂಪ್ ಅಸಮಾಧಾನ ಹೊರಹಾಕುತ್ತಿದ್ದಾರೆ. ಮೊದಲಿನಿಂದಲೇ ಅಲರ್ಟ್ ಆಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಈಗ ತಮ್ಮೆಲ್ಲಾ ಕೋಪವನ್ನು ಮಾಧ್ಯಮಗಳ ವಿರುದ್ಧ ಟ್ರಂಪ್ ಪ್ರದರ್ಶಿಸುತ್ತಿದ್ದಾರೆ ಎಂದಿದ್ದಾರೆ ಒಬಾಮಾ.

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ

ಟ್ರಂಪ್‌ಗೆ ಸಣ್ಣ ವಿಷಯವೂ ಅರ್ಥವಾಗಲ್ಲ

ಕೆಲದಿನಗಳ ಹಿಂದೆ ಮಿಯಾಮಿ ನಗರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲೂ ಒಬಾಮಾ ಹೀಗೆ ಟ್ರಂಪ್ ವಿರುದ್ಧ ಗರಂ ಆಗಿದ್ದರು. ಅಮೆರಿಕ ಅಧ್ಯಕ್ಷರ ಸ್ಥಾನದಲ್ಲಿ ಹಿಂದೆಂದೂ ಟ್ರಂಪ್ ರೀತಿಯ ವ್ಯಕ್ತಿಯನ್ನ ನೋಡಿಲ್ಲ ಎನ್ನುವ ಮೂಲಕ ಬರಾಕ್ ಒಬಾಮಾ ಅಧ್ಯಕ್ಷೀಯ ಚುನಾವಣೆಗೆ ಕಿಚ್ಚು ಹಚ್ಚಿದ್ದರು. ಅಲ್ಲದೆ ಟ್ರಂಪ್‌ಗೆ ಸಣ್ಣ ವಿಚಾರಗಳು ಕೂಡ ಅರ್ಥವಾಗಲ್ಲ, ಕೋಪ ಮಾತ್ರ ಬೇಗ ಬಂದುಬಿಡುತ್ತೆ. ಮಾಧ್ಯಮ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಸುಖಾಸುಮ್ಮನೆ ಟ್ರಂಪ್ ಕೋಪ ಮಾಡಿಕೊಳ್ಳುತ್ತಾರೆ. ಟ್ರಂಪ್ ನಡೆಗೆ ಅರ್ಥ ಇದೆಯಾ ಎನ್ನುತ್ತಾ ಮಿಯಾಮಿ ಪ್ರಚಾರ ಸಭೆಯಲ್ಲಿ ಒಬಾಮಾ ಟ್ರಂಪ್‌ರ ಕಾಲೆಳೆದಿದ್ದರು.

ಟ್ರಂಪ್ ಚೀನಾ ಪರ ನಿಂತಿದ್ದಾರೆ, ಒಬಾಮಾ ಗಂಭೀರ ಆರೋಪ

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಒಬಾಮಾ ಹಾಗೂ ಟ್ರಂಪ್ ನಡುವಿನ ವಾಗ್ದಾಳಿ ಇಂದು ನಿನ್ನೆಯದಲ್ಲ. ಅದಕ್ಕೆ ಬರೋಬ್ಬರಿ 4 ವರ್ಷಗಳ ಇತಿಹಾಸವಿದೆ. ಇಬ್ಬರ ನಡುವೆ ಬೆಂಕಿಯುಂಡೆಯಂತಹ ಪದಬಳಕೆಗೆ ಬಲವಾದ ಕಾರಣವಿದೆ. ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಒಬಾಮಾ ತಮ್ಮ ಆಡಳಿತದಲ್ಲಿ ‘ಒಬಾಮಾ ಕೇರ್' ಎಂಬ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದರು. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿಯೇ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ‘ಒಬಾಮಾ ಕೇರ್' ಯೋಜನೆಗೆ ಬ್ರೇಕ್ ಹಾಕಿದ್ದರು. ಇದು ಟ್ರಂಪ್ ಮತ್ತು ಒಬಾಮಾ ಮಧ್ಯೆ ವಾಗ್ದಾಳಿಗೆ ದಾರಿಮಾಡಿಕೊಟ್ಟಿತ್ತು. ‘ಕೊರೊನಾ' ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿರುವುದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. ‘ಒಬಾಮಾ ಕೇರ್'ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂಬುದು ವಿಪಕ್ಷ ನಾಯಕರ ಆರೋಪ.

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

ಕೆಲದಿನಗಳ ಹಿಂದೆ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಒಬಾಮಾ ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಅಲ್ಲದೆ ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಟ್ರಂಪ್ ವಿರುದ್ಧ ಪ್ರಚಾರ ಕಣದಲ್ಲಿ ಅಬ್ಬರಿಸಲು ಒಬಾಮಾ ಮುಂದಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾ

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದ್ದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಒಬಾಮಾ ತಿಳಿಸಿದ್ದರು.

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಒಬಾಮಾ ಹೀಗೆ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಇದೇ ರೀತಿ ಟ್ರಂಪ್‌ಗೆ ಬೆವರಿಳಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಬಳಿಕ ಒಬಾಮಾ ಇದೀಗ ಮತ್ತೆ ಟ್ರಂಪ್ ವಿರುದ್ಧ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ.

English summary
Obama harshly criticized President Trump's response to the corona pandemic. Obama said because of Trump mistakes, White House become a corona hot zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X