• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

|

ಅಮೆರಿಕದಲ್ಲಿ ಚುನಾವಣಾ ಕಾವು ರಂಗೇರುತ್ತಿರುವ ಸಂದರ್ಭದಲ್ಲೇ, ಕ್ಯಾಲಿಫೋರ್ನಿಯ ಕಾಡ್ಗಿಚ್ಚಿನ ವಿಚಾರವೂ ಪ್ರಚಾರದ ಅಜೆಂಡಾ ಆಗಿ ಬದಲಾಗಿದೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ರಂಪ್ ನೀಡಿದ್ದ ಹೇಳಿಕೆಗೆ ಕ್ಯಾಂಪೇನ್ ವೇಳೆ ಪ್ರತಿಕ್ರಿಯಿಸಿರುವ ಜೋ ಬಿಡೆನ್, ಟ್ರಂಪ್‌ರನ್ನು 'ಕಿಚ್ಚು ಹಚ್ಚುವವನು' ಎಂದಿದ್ದಾರೆ.

ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು ಭೀಕರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಹವಾಮಾನ ವೈಪರಿತ್ಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಹೊತ್ತಲ್ಲೇ ಟ್ರಂಪ್ ನೀಡಿದ್ದ ಹೇಳಿಕೆ ವಿಜ್ಞಾನಿಗಳು ಹಾಗೂ ಪರಿಸರ ಪ್ರಿಯರನ್ನು ಕೆರಳಿ ಕೆಂಡವಾಗಿಸಿತ್ತು.

ಹವಾಮಾನ ವೈಪರೀತ್ಯದ ಬಗ್ಗೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ: ಟ್ರಂಪ್

ಹವಾಮಾನ ವೈಪರಿತ್ಯದ ಕುರಿತು ಸಂವಾದವೊಂದರಲ್ಲಿ ಮಾತನಾಡಿದ್ದ ಟ್ರಂಪ್, ವಾತಾವರಣ ತಣ್ಣಗಾಗುತ್ತಿದೆ. ಕಾದು ನೋಡಿ, ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದಾರೆ. ಈ ಮೂಲಕ ವಿಜ್ಞಾನಿಗಳಿಗೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜ್ಞಾನವೇ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು.

ಟ್ರಂಪ್ ಹೇಳಿಕೆಗೆ ತಮ್ಮದೇ ಧಾಟಿಯಲ್ಲಿ ಉತ್ತರ ಕೊಟ್ಟಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಬಿಡೆನ್, ಟ್ರಂಪ್ ಕಿಚ್ಚು ಹಚ್ಚುವ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.

 ಹಾಲಿವುಡ್ ನಾಡು ಈಗ ಅಕ್ಷರಶಃ ನರಕ

ಹಾಲಿವುಡ್ ನಾಡು ಈಗ ಅಕ್ಷರಶಃ ನರಕ

ಕ್ಯಾಲಿಫೋರ್ನಿಯ ನೋಡಲು ಥೇಟ್ ನರಕವಾಗಿ ಬದಲಾಗಿದೆ. ಅಲ್ಲಿ ಎಲ್ಲವೂ ಸುಟ್ಟು ಕರಕಲಾಗಿ ಹೋಗಿದೆ. 4 ಸಾವಿರಕ್ಕೂ ಹೆಚ್ಚು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದ್ದರೆ, ಇನ್ನೂ ಸಾವಿರಾರು ಮನೆಗಳು ಭಸ್ಮವಾಗುವ ಸ್ಥಿತಿಯಲ್ಲಿವೆ. ಲಕ್ಷಾಂತರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೂ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ಕೆನ್ನಾಲಿಗೆ ಕ್ಯಾಲಿಫೋರ್ನಿಯ ಅರಣ್ಯದಲ್ಲಿ ವೇಗವಾಗಿ ಹಬ್ಬುತ್ತಿದೆ. 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹೊತ್ತಿದ್ದು, 28 ಭಾಗಗಳಲ್ಲಿ ಬೆಂಕಿ ಹಿಡಿತಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ‘ಹಾಲಿವುಡ್ ನಾಡು' ಅಂತಲೇ ಖ್ಯಾತಿ ಪಡೆದಿರುವ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯ ಈಗ ಅಕ್ಷರಶಃ ನರಕವಾಗಿ ಬದಲಾಗಿದೆ.

ಟ್ರಂಪ್‌ಗೆ ಗುನ್ನಾ ಕೊಡತ್ತಾ ಕಾಡ್ಗಿಚ್ಚು..?

ಟ್ರಂಪ್‌ಗೆ ಗುನ್ನಾ ಕೊಡತ್ತಾ ಕಾಡ್ಗಿಚ್ಚು..?

ಒಂದುಕಡೆ ಕೊರೊನಾ ಸೋಂಕು ಕೊಡುತ್ತಿರುವ ಪೆಟ್ಟು, ಮತ್ತೊಂದ್ಕಡೆ ಕುಸಿಯುತ್ತಿರುವ ಆರ್ಥಿಕತೆ. ಇದಿಷ್ಟೂ ಅಮೆರಿಕ ಎಂಬ ದೈತ್ಯ ದೇಶವನ್ನೇ ಕಂಗಾಲಾಗಿಸಿದೆ. ಇಂತಹ ಹೊತ್ತಲ್ಲೇ ಅಧ್ಯಕ್ಷೀಯ ಚುನಾವಣೆ ಎದುರಾಗಿದೆ. ಅದರಲ್ಲೂ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚು ಇನ್ನೂ ಕೆಲವು ತಿಂಗಳು ಹಿಡಿತಕ್ಕೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆ ಮೇಲೂ ಕಾಡ್ಗಿಚ್ಚಿನ ಪರಿಣಾಮ ವ್ಯತಿರಿಕ್ತವಾಗಲಿದ್ದು, ಟ್ರಂಪ್‌ ಸರ್ಕಾರದ ವಿರುದ್ಧ ಜನಾಕ್ರೋಶ ಮೊಳಗುವ ಸಾಧ್ಯತೆ ದಟ್ಟವಾಗಿದೆ.

ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!

ಇತಿಹಾಸದಲ್ಲೇ ಭೀಕರ ಕಾಡ್ಗಿಚ್ಚು

ಇತಿಹಾಸದಲ್ಲೇ ಭೀಕರ ಕಾಡ್ಗಿಚ್ಚು

ಈಗ ಹಬ್ಬಿರುವ ಬೆಂಕಿ ಕ್ಯಾಲಿಫೋರ್ನಿಯದ ಇತಿಹಾಸದಲ್ಲೇ ಅತ್ಯಂತ ಭೀಕರ ಕಾಡ್ಗಿಚ್ಚು ಎನ್ನಲಾಗಿದೆ. ಇಲ್ಲಿ ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಎದುರಾಗುವುದು ಮಾಮೂಲಿ. ಆದರೆ ಈ ಬಾರಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಿ ಹೋಗಬೇಕು ಎಂಬುದೇ ತೋಚುತ್ತಿಲ್ಲ. ನೂರಾರು ಕಿಲೋಮೀಟರ್ ಪ್ರದೇಶದಲ್ಲಿ ಬೆಂಕಿ ಹಬ್ಬಿದೆ. ಮತ್ತೊಂದ್ಕಡೆ ಕಾಡ್ಗಿಚ್ಚು ನಂದಿಸಲು ಸುಮಾರು 15 ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದಾರೆ. ಜನರ ಜೊತೆಗೆ ಸಾವಿರಾರು ಪ್ರಾಣಿಗಳು ಕೂಡ ಬೆಂಕಿಯಲ್ಲಿ ಬೆಂದು ಹೋಗುತ್ತಿವೆ.

 ಪ್ರತಿದಿನ 25 ಮೈಲು ಕಾಡು ಭಸ್ಮ

ಪ್ರತಿದಿನ 25 ಮೈಲು ಕಾಡು ಭಸ್ಮ

ಕ್ಯಾಲಿಫೋರ್ನಿಯದಲ್ಲಿ ನಿತ್ಯ 25 ಮೈಲಿಗಳಷ್ಟು ಕಾಡು ಭಸ್ಮವಾಗುತ್ತಿದ್ದು, ಕೆನ್ನಾಲಿಗೆಗೆ ಸಿಲುಕಿ ಹತ್ತಾರು ಮಂದಿ ಅಸುನೀಗಿದ್ದಾರೆ. ಕಾಡು ಭಸ್ಮವಾಗುತ್ತಿರುವ ಹಿನ್ನೆಲೆ ಸ್ಯಾನ್ ಫ್ರಾನ್ಸಿಸ್ಕೊ ಸೇರಿದಂತೆ ಅಮೆರಿಕದ ಪಶ್ಚಿಮ ತೀರದ ನಗರಗಳಲ್ಲಿ ಗಾಳಿ ವಿಷವಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಸಿಗದಷ್ಟು ಕೆಟ್ಟಗಾಳಿ ಇಲ್ಲಿ ಹಬ್ಬಿದೆ. ದಟ್ಟವಾದ ಹೊಗೆ ಹಾಗೂ ಮಂಜು ಸೇರಿ ‘ಫಾಗ್' ನಿರ್ಮಾಣವಾಗಿದ್ದು, ಇಲ್ಲಿ ಸೂರ್ಯನ ಬೆಳಕು ಕೂಡ ಭೂಮಿಗೆ ತಗುಲುತ್ತಿಲ್ಲ. ಹೀಗಾಗಿ ಕ್ಯಾಲಿಫೋರ್ನಿಯ ಮತ್ತು ಅಕ್ಕಪಕ್ಕದ ರಾಜ್ಯಗಳ ಕೆಲ ನಗರಗಳಲ್ಲಿ ಹಗಲು ಕೂಡ ಕತ್ತಲಿನ ರೀತಿ ಭಾಸವಾಗುತ್ತಿದೆ. ಸವಾರರು ಹಗಲಿನಲ್ಲೂ ಹೆಡ್‌ಲೈಟ್ ಹಾಕಿ ವಾಹನ ಓಡಿಸುವಂತಾಗಿದೆ.

ಕ್ಯಾಲಿಫೋರ್ನಿಯ ಕರಾವಳಿಯಲ್ಲಿ ಹೊಂಜು, ಕಾಣೆಯಾದ ಸೂರ್ಯ

ಮಾಜಿ ಅಧ್ಯಕ್ಷ ಒಬಾಮಾಗೆ ಆತಂಕ

ಮಾಜಿ ಅಧ್ಯಕ್ಷ ಒಬಾಮಾಗೆ ಆತಂಕ

ಕ್ಯಾಲಿಫೋರ್ನಿಯಗೆ ಎದುರಾಗಿರುವ ಭೀಕರ ಸ್ಥಿತಿ ಬಗ್ಗೆ ಇಡೀ ಜಗತ್ತೇ ಮರುಗುತ್ತಿದೆ. ಅದರಲ್ಲೂ ಅಮೆರಿಕದ ರಾಜಕಾರಣಿಗಳು ಟ್ರಂಪ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹೀಗೆ ಒಬಾಮಾ ಕೂಡ ಕಾಡ್ಗಿಚ್ಚಿನ ಕುರಿತು ಟ್ವೀಟ್ ಮಾಡಿದ್ದು, ಇದು ಹವಾಮಾನ ಬದಲಾವಣೆಯ ಭೀಕರ ಮುನ್ಸೂಚನೆ ಎಂದಿದ್ದಾರೆ. ಅಲ್ಲದೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ಒಬಾಮಾ ನೀಡಿದ್ದಾರೆ.

  ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ | Oneindia Kannada
  ಆಸ್ಟ್ರೇಲಿಯಾಗಿಂತ ಭೀಕರ ಪರಿಸ್ಥಿತಿ..?

  ಆಸ್ಟ್ರೇಲಿಯಾಗಿಂತ ಭೀಕರ ಪರಿಸ್ಥಿತಿ..?

  ಕಳೆದವರ್ಷ ಆಸ್ಟ್ರೇಲಿಯಾದಲ್ಲಿ ಹೊತ್ತಿದ್ದ ಕಾಡ್ಗಿಚ್ಚು ಹಲವು ತಿಂಗಳುಗಳ ಕಾಲ ಉರಿದಿತ್ತು. ಹತ್ತಾರು ಲಕ್ಷ ಎಕರೆ ಕಾಡು ಭಸ್ಮವಾಗಿ, ಕಾಂಗರೂ ನಾಡಲ್ಲಿ ಲೆಕ್ಕವಿಲ್ಲದಷ್ಟು ಜೀವ ಸಂಕುಲವೂ ನಾಶವಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಆಸ್ಟ್ರೇಲಿಯಾಗಿಂತಲೂ ಭೀಕರ ಸ್ಥಿತಿ ಎದುರಾಗುವ ಸಂಭವವಿದೆ.

  ಪಾರ್ಟಿ ಮಾಡಲು ಹೋಗಿ ಕಾಡಿಗೆ ಬೆಂಕಿ ಇಟ್ಟರು..!

  ಹವಾಮಾನ ವರದಿ ಪ್ರಕಾರ ಸದ್ಯದಲ್ಲಿ ಮಳೆಯಾಗುವ ಮುನ್ಸೂಚನೆಯೂ ಇಲ್ಲ. ಗಾಳಿಯ ವೇಗ ಬೇರೆ ಹೆಚ್ಚುತ್ತಿರುವುದು ಕಾಡ್ಗಿಚ್ಚು ಮತ್ತಷ್ಟು ಹರಡಿಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ನಮಗೆ ಸಹಾಯ ಮಾಡಿ ಅಂತಾ ಅಮೆರಿಕ ಸರ್ಕಾರ ಆಸ್ಟ್ರೇಲಿಯಾದ ಅಗ್ನಿಶಾಮಕ ಇಲಾಖೆ ಮೊರೆ ಹೋಗಿದೆ. ಅದೆಷ್ಟೇ ಪ್ರಯತ್ನಪಟ್ಟರೂ ಪ್ರಕೃತಿಯ ಎದುರು ಮನುಷ್ಯನ ಆಟ ನಡೆಯುವುದಿಲ್ಲ ಎಂಬುದಕ್ಕೆ ಕ್ಯಾಲಿಫೋರ್ನಿಯದ ಕಾಡ್ಗಿಚ್ಚು ತಾಜಾ ಉದಾಹರಣೆಯಾಗಿದೆ.

  English summary
  California's wildfire has also become a matter of US presidential election. Democratic party leaders targeting the Trump based on California's wildfire issue.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X