ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಮತ್ತೊಮ್ಮೆ ಮುಖಭಂಗ! ಹಿಂಸಾಚಾರ ಸತ್ಯದ ಬಹಿರಂಗ

|
Google Oneindia Kannada News

ಬೇಕೆ ಬೇಕು ನ್ಯಾಯ ಬೇಕು, ಅನ್ಯಾಯ ಅನ್ಯಾಯ ಟ್ರಂಪ್‌ಗೆ ಅನ್ಯಾಯ ಅಂತೆಲ್ಲಾ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರಚಾಟ ನಡೆಸಿದ್ದನ್ನು ನಾವು ನೋಡಿದ್ದೇವೆ. ಹಾಗೇ ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸಾಚಾರವನ್ನೂ ನಡೆಸಿದ್ದರು. ಆದರೆ ಹಿಂಸಾಚಾರ ನಡೆಸಿದವರ ಬಂಡವಾಳ ನಿಧಾನವಾಗಿ ಬಯಲಾಗುತ್ತಿದೆ.

ಅಂದಹಾಗೆ ಕ್ಯಾಪಿಟಲ್ ಹಿಲ್ ಹಿಂಸಾಚಾರದ ವೇಳೆ ಟ್ರಂಪ್ ಪರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಅಧ್ಯಕ್ಷೀಯ ಚುನಾವಣೆಗೆ ಮತವನ್ನೇ ಹಾಕಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಚುನಾವಣೆಯಲ್ಲಿ ಮತ ಹಾಕದಿದ್ದರೂ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತಾ ಆರೋಪ ಮಾಡಿದ್ದರು.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

ಅಲ್ಲದೆ ಹಿಂಸೆಗೆ ಪ್ರಚೋದನೆ ನೀಡಿ ಗಲಭೆ ಎಬ್ಬಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಜನವರಿ 6ರಂದು ಟ್ರಂಪ್ ವೈಟ್‌ಹೌಸ್ ಎದುರು ನಿಂತು ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದು ಟ್ರಂಪ್ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸಿತ್ತು. ಬಳಿಕ ವೈಟ್‌ಹೌಸ್‌ನಿಂದ 3 ಕಿಲೋ ಮೀಟರ್ ದೂರ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು.

 ಟ್ರಂಪ್‌ಗೆ ಮತ್ತೊಮ್ಮೆ ಮುಖಭಂಗ..!

ಟ್ರಂಪ್‌ಗೆ ಮತ್ತೊಮ್ಮೆ ಮುಖಭಂಗ..!

ಈಗಾಗಲೇ ಟ್ರಂಪ್ ಹಲವು ಬಾರಿ ಮುಖಭಂಗ ಅನುಭವಿಸಿದ್ದಾರೆ. ಅಲ್ಲದೆ ಬಂಧನದ ಭೀತಿಯೂ ಟ್ರಂಪ್‌ಗೆ ಕಾಡುತ್ತಿದೆ. ಇಷ್ಟೆಲ್ಲದರ ನಡುವೆ ಟ್ರಂಪ್‌ಗೆ ಬೆಂಬಲ ಸೂಚಿಸಲು ಬಂದು ಹಿಂಸಾಚಾರ ನಡೆಸಿದ್ದವರಿಗೆ ಮತ ಹಾಕುವುದು ಕೂಡ ಗೊತ್ತಾಗಿಲ್ಲವೇ ಎಂಬುದು ಎದುರಾಳಿಗಳ ಪ್ರಶ್ನೆಯಾಗಿದೆ. ಕ್ಯಾಪಿಟಲ್ ಹಿಲ್ ಮೇಲಿನ ಹಿಂಸಾಚಾರದ ಬಳಿಕ ಅಮೆರಿಕದಲ್ಲಿ ಸಂಸದರು ಪಕ್ಷ ಮರೆತು ಒಂದಾಗಿದ್ದರು. ಸ್ವತಃ ಟ್ರಂಪ್ ಪಕ್ಷದವರು ಕೂಡ ಟ್ರಂಪ್ ವಿರುದ್ಧ ಧ್ವನಿ ಎತ್ತಿದ್ದರು. ಇದೆಲ್ಲದರ ಪರಿಣಾಮ ಜೋ ಬೈಡನ್ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ದಿನ ಟ್ರಂಪ್ ವೈಟ್‌ಹೌಸ್ ಬಿಟ್ಟು ಕುಟುಂಬ ಸಮೇತ ಎಸ್ಕೇಪ್ ಆಗಿದ್ದರು.

ಸ್ಪೀಕರ್ ಕಚೇರಿಯೇ ಟಾರ್ಗೆಟ್..?

ಸ್ಪೀಕರ್ ಕಚೇರಿಯೇ ಟಾರ್ಗೆಟ್..?

ಟ್ರಂಪ್‌ಗೆ ಬೈಡನ್‌ಗಿಂತ ದೊಡ್ಡ ಶತ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇಬ್ಬರ ಜಗಳ ತಾರಕಕ್ಕೇರಿದ್ದೂ ಉಂಟು. ಸ್ಪೀಕರ್ ನ್ಯಾನ್ಸಿ ಪೆಲೋಸಿ ಧೈರ್ಯವಂತ ಹೆಣ್ಣುಮಗಳು. ನ್ಯಾನ್ಸಿಗೆ ಟ್ರಂಪ್ ಕಂಡರೆ ಆಗೋದೆ ಇಲ್ಲ. ಟ್ರಂಪ್ ಮಾಡುತ್ತಿದ್ದ ಎಡವಟ್ಟು ಹಾಗೂ ಅದರಿಂದ ಅಮೆರಿಕ ಎದುರಿಸುತ್ತಿದ್ದ ಸಮಸ್ಯೆ ಕಂಡು ಕೆಂಡವಾಗಿದ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ಟ್ರಂಪ್ ವಿರುದ್ಧ ಹಕ್ಕುಚ್ಯುತಿಯನ್ನೂ ಮಂಡಿಸಿದ್ದರು. ಕೆಳಮನೆಯಲ್ಲಿ ಅದು ಗೆದ್ದಿದ್ದರೂ, ಸೆನೆಟ್‌ನಲ್ಲಿ ಅದು ಸೋತಿತ್ತು. ಇದೀಗ 2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾಗಿದ್ದು, ಅದು ಅಂತಿಮ ಹಂತದಲ್ಲಿದೆ. ಮತ್ತೊಂದ್ಕಡೆ ಜನವರಿ 6ರಂದು ಟ್ರಂಪ್ ಗ್ಯಾಂಗ್ ನಡೆಸಿದ್ದ ಹಿಂಸಾಚಾರದಲ್ಲಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ತೀವ್ರ ಹಾನಿಗೀಡಾಗಿತ್ತು.

ಟ್ರಂಪ್ ಬೆಂಬಲಿಗರಿಂದ ಮಹಾ ಹಿಂಸಾಚಾರಕ್ಕೆ ಮೊದಲೇ ನಡೆದಿತ್ತಾ ಸ್ಕೆಚ್..?ಟ್ರಂಪ್ ಬೆಂಬಲಿಗರಿಂದ ಮಹಾ ಹಿಂಸಾಚಾರಕ್ಕೆ ಮೊದಲೇ ನಡೆದಿತ್ತಾ ಸ್ಕೆಚ್..?

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

ಟ್ರಂಪ್ ಟ್ವಿಟ್ಟರ್ ಖಾತೆ ಬಂದ್ ಮಾಡಿಸಿದ್ದು ವಕೀಲೆ ವಿಜಯ ಗದ್ದೆಟ್ರಂಪ್ ಟ್ವಿಟ್ಟರ್ ಖಾತೆ ಬಂದ್ ಮಾಡಿಸಿದ್ದು ವಕೀಲೆ ವಿಜಯ ಗದ್ದೆ

ಹಲವು ಬಾರಿ ದಾಳಿ ನಡೆದಿದೆ

ಹಲವು ಬಾರಿ ದಾಳಿ ನಡೆದಿದೆ

1814ರ ನಂತರ 1835ರಲ್ಲಿಯೂ ಕ್ಯಾಪಿಟಲ್ ಹಿಲ್ ಮೇಲೆ ಅಟ್ಯಾಕ್ ಆಗಿತ್ತು. ಅಂದಿನ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಹತ್ಯೆ ಮಾಡಲು ಸಂಚು ಹೂಡಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿದೆ. ಆದರೆ ಇದೀಗ ಟ್ರಂಪ್ ಬೆಂಬಲಿಗರು ನಡೆಸಿರುವ ದಾಳಿ ಅಮೆರಿಕದ ಮಾನ ಹರಾಜು ಹಾಕಿದೆ. ಹಾಗೇ ಈ ದಾಳಿ ಅಮೆರಿಕ ಇತಿಹಾಸದ ಪುಟ ಸೇರಿದೆ.

''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ

English summary
Investigation revealed that thousands of Trump supporters didn’t vote in presidential election. But they where alleged on election process and involved in violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X