ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಬೆಂಬಲಿಗರಿಂದ ಮಹಾ ಹಿಂಸಾಚಾರಕ್ಕೆ ಮೊದಲೇ ನಡೆದಿತ್ತಾ ಸ್ಕೆಚ್..?

|
Google Oneindia Kannada News

ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಯುವುದಕ್ಕೆ ಮೊದಲು ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನಿಖಾ ಸಂಸ್ಥೆ FBI ಅಧಿಕಾರಿಗಳಿಗೆ ಸುಳಿವು ನೀಡಿತ್ತು ಎಂಬ ಅಂಶ ಬಯಲಾಗಿದೆ. ಟ್ರಂಪ್ ಬೆಂಬಲಿಗ ಪಡೆ ಹಿಂಸಾಚಾರಕ್ಕೆ ಮೊದಲೇ ಸ್ಕೆಚ್ ಹಾಕಿತ್ತು ಎಂಬುದು ಜಾರ್ಜಿಯಾ ತನಿಖಾಸಂಸ್ಥೆ ಹೇಳಿಕೆಯಿಂದ ಗೊತ್ತಾಗಿದೆ.

ಡೊನಾಲ್ಡ್ ಟ್ರಂಪ್ ಬೆಂಬಲಿಗರ ಹಿಂಸಾಚಾರದ ಬಿರುಗಾಳಿಗೆ ಅಮೆರಿಕದ ಕ್ಯಾಪಿಟಲ್ ಹಿಲ್ ಮಾತ್ರವಲ್ಲದೆ, ಇಡೀ ಅಮೆರಿಕದ ರಾಜಕೀಯ ನಲುಗಿ ಹೋಗಿದೆ. ಆದ್ರೆ ಈ ಹೊತ್ತಲ್ಲೇ ಅಮೆರಿಕದ ತನಿಖಾ ಸಂಸ್ಥೆಗಳು ಸ್ಪಷ್ಟ ಎಚ್ಚರಿಕೆ ರವಾನಿಸಿವೆ. ಮತ್ತೊಮ್ಮೆ ಟ್ರಂಪ್ ಬೆಂಬಲಿಗರಿಂದ ಹಿಂಸೆ ನಡೆದರೂ ನಡೆಯಬಹುದೆಂದು ಎಚ್ಚರಿಕೆ ಕೊಟ್ಟಿವೆ.

ಜನವರಿ 6ರಂದು ಅಮೆರಿಕದ ಸಂಸತ್ ಇರುವ ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಮೆರೆಡಿತ್ ಎಂಬಾತನ ಬಂಧನದಿಂದ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಆರೋಪಿ ಮೆರೆಡಿತ್ ಬಳಿ ಗನ್ ಸೇರಿದಂತೆ, ಸುಮಾರು 1 ಸಾವಿರ ಸುತ್ತು ಗುಂಡು ವಶಕ್ಕೆ ಪಡೆಯಲಾಗಿದೆ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

ಮೆರಿಡಿತ್ ಕ್ಯಾಪಿಟಲ್ ಹಿಲ್ ದಾಳಿಯಲ್ಲಿ ಭಾಗವಹಿಸಿದ್ದೂ ಅಲ್ಲದೆ, ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಈ ಕುರಿತು ಮೆಸ್ಸೇಜ್ ಕೂಡ ಕಳಿಸಿದ್ದ ಮೆರೆಡಿತ್. ಮೆಸ್ಸೇಜ್ ಆಧಾರದಲ್ಲಿ ಎಫ್‌ಬಿಐ ಅಧಿಕಾರಿಗಳು ವಾಷಿಂಗ್ಟನ್‌ನಲ್ಲಿ ಮೆರೆಡಿತ್‌ ಬಂಧಿಸಿದ್ದರು. ತನ್ನ ಹೋಟೆಲ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಮೆರೆಡಿತ್‌ ಬಂಧನವಾಗಿತ್ತು. ಈತನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಕಂಡುಬಂದಿದ್ದು, ಗನ್ ಹಾಗೂ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಹುಚ್ಚ ಎಂದು ಸುಳ್ಳು ಹೇಳಿದ್ರಾ..?

ಹುಚ್ಚ ಎಂದು ಸುಳ್ಳು ಹೇಳಿದ್ರಾ..?

ಮೆರೆಡಿತ್‌ FBI ಕೈಯಲ್ಲಿ ಲಾಕ್ ಆಗುತ್ತಿದ್ದಂತೆ ಆತನ ಪರವಾಗಿ ಸುಳ್ಳಿನ ಸರಮಾಲೆ ಪೋಣಿಸಿದ ಆರೋಪ ಬಲವಾಗಿ ಕೇಳಿಬಂದಿದೆ. ಆರೋಪಿ ಮೆರೆಡಿತ್‌ ಮಾನಸಿಕ ಅಸ್ವಸ್ತ ಎಂಬಂತೆ ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. FBI ಮೆರೆಡಿತ್‌ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಿದ್ದು, ಅದರಲ್ಲಿನ ಅಂಶಗಳು ಬೆಚ್ಚಿಬೀಳಿಸುತ್ತಿವೆ. ಇಷ್ಟಾದರೂ ಮೆರೆಡಿತ್‌ ಹುಚ್ಚ ಎಂದು ಆತನನ್ನ ಬಚಾವ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಮೆರೆಡಿತ್‌ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನ ಟಾರ್ಗೆಟ್ ಮಾಡಿದ್ದ ಎಂಬುದು ಆತ ಕಳಿಸಿದ್ದ ಟೆಕ್ಸ್ಟ್ ಮೆಸ್ಸೇಜ್‌ನಿಂದ ಸ್ಪಷ್ಟವಾಗಿದೆ. ಹೀಗಾಗಿ ಇಡೀ ಅಮೆರಿಕದಲ್ಲಿ ಸದ್ಯ ಹೈಅಲರ್ಟ್ ಘೋಷಿಸಲಾಗಿದೆ. ರಾಜ್ಯಗಳ ಅಧಿವೇಶನ ನಡೆಯುವ ಕಟ್ಟಡಗಳ ಕಿಟಕಿಗಳನ್ನ ಲಾಕ್ ಮಾಡಿ, ಹಲಗೆಗಳಿಂದ ರಕ್ಷಣೆ ನೀಡಲಾಗುತ್ತಿದೆ. ಮತ್ತೊಂದು ಗಲಭೆ ನಡೆಯುವ ಮುನ್ನ ಅಮೆರಿಕ ಅಲರ್ಟ್ ಆಗಿದೆ.

ಅಮೆರಿಕ ಕೊರೊನಾ: ಅತ್ತ ಸೋಂಕಿತರ ಸಾವು, ಇತ್ತ ಪ್ರಜಾಪ್ರಭುತ್ವಕ್ಕೆ ಕಂಟಕ..!ಅಮೆರಿಕ ಕೊರೊನಾ: ಅತ್ತ ಸೋಂಕಿತರ ಸಾವು, ಇತ್ತ ಪ್ರಜಾಪ್ರಭುತ್ವಕ್ಕೆ ಕಂಟಕ..!

ಸ್ಪೀಕರ್ ಕಚೇರಿಯೇ ಟಾರ್ಗೆಟ್ ಆಗಿತ್ತಾ..?

ಸ್ಪೀಕರ್ ಕಚೇರಿಯೇ ಟಾರ್ಗೆಟ್ ಆಗಿತ್ತಾ..?

ಟ್ರಂಪ್‌ಗೆ ಬೈಡನ್‌ಗಿಂತ ದೊಡ್ಡ ಶತ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇಬ್ಬರ ಜಗಳ ತಾರಕಕ್ಕೇರಿದ್ದೂ ಉಂಟು. ಸ್ಪೀಕರ್ ನ್ಯಾನ್ಸಿ ಪೆಲೋಸಿ ಧೈರ್ಯವಂತ ಹೆಣ್ಣುಮಗಳು. ನ್ಯಾನ್ಸಿಗೆ ಟ್ರಂಪ್ ಕಂಡರೆ ಆಗೋದೆ ಇಲ್ಲ. ಟ್ರಂಪ್ ಮಾಡುತ್ತಿದ್ದ ಎಡವಟ್ಟು ಹಾಗೂ ಅದರಿಂದ ಅಮೆರಿಕ ಎದುರಿಸುತ್ತಿದ್ದ ಸಮಸ್ಯೆ ಕಂಡು ಕೆಂಡವಾಗಿದ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ಟ್ರಂಪ್ ವಿರುದ್ಧ ಹಕ್ಕುಚ್ಯುತಿಯನ್ನೂ ಮಂಡಿಸಿದ್ದರು. ಕೆಳಮನೆಯಲ್ಲಿ ಅದು ಗೆದ್ದಿದ್ದರೂ, ಸೆನೆಟ್‌ನಲ್ಲಿ ಅದು ಸೋತಿತ್ತು. ಇದೀಗ 2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾಗಿದೆ. ಇನ್ನೇನು ಸೆನೆಟ್‌ನಲ್ಲಿ ಅದು ವಿಚಾರಣೆಗೆ ಬರಲಿದೆ. ಟ್ರಂಪ್ ವಿರುದ್ಧ ಇಷ್ಟು ದೊಡ್ಡ ಹೋರಾಟ ಸಂಘಟಿಸಿದ ಕೀರ್ತಿ ನ್ಯಾನ್ಸಿ ಪೆಲೋಸಿ ಅವರಿಗೆ ಸಲ್ಲುತ್ತದೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ

ಟ್ರಂಪ್ ಓಡಿಸಿ ಎಂದು ಚಲಾವಣೆಗೊಂಡಿದೆ

ಟ್ರಂಪ್ ಓಡಿಸಿ ಎಂದು ಚಲಾವಣೆಗೊಂಡಿದೆ

ಕೆಳಮನೆ ಸದಸ್ಯ ಪಡೆ ಟ್ರಂಪ್ ವಿರುದ್ಧದ ವಾಗ್ದಂಡನೆ ಅಂದರೆ ಇಂಪೀಚ್‌ಮೆಂಟ್ (Impeachment)ಗೆ ಅನುಮೋದನೆ ನೀಡಿ, ಸಹಿ ಮಾಡಿದ್ದಾರೆ. 232 ಮತಗಳು ಟ್ರಂಪ್ ಓಡಿಸಿ ಎಂದು ಚಲಾವಣೆಗೊಂಡರೆ 197 ಮತಗಳು ಟ್ರಂಪ್ ಪರ ಚಲಾವಣೆಯಾದವು. ಈ ಮೂಲಕ ಭಾರಿ ಅಂತರದಲ್ಲಿ ಟ್ರಂಪ್ ವಿರುದ್ಧ ಸಂಸದರು ಗೆಲುವು ಕಂಡಿದ್ದಾರೆ. ಪ್ರಕ್ರಿಯೆ ನಂತರ ಸೆನೆಟ್‌ಗೆ ವಾಗ್ದಂಡನೆ ಪ್ರಕ್ರಿಯೆ ವರ್ಗಾವಣೆಯಾಗಿದ್ದು, ಅಲ್ಲೂ ಕೂಡ ವೋಟಿಂಗ್ ನಡೆದು ಅಂತಿಮ ತೀರ್ಪು ಹೊರಬೀಳಲಿದೆ.

English summary
Georgia Bureau of Investigation revealed the trump supporter’s violence plan before it happens. And GBI also informed about chances of violence to FBI early.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X