• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಂಡತಿಯನ್ನೇ ಕೊಲೆ ಮಾಡಿ ಟ್ರಂಪ್‌ಗೆ ವೋಟ್ ಹಾಕಿದ ಕಿರಾತಕ..!

|
Google Oneindia Kannada News

ವಾಷಿಂಗ್ಟನ್, ಮೇ 18: ಜಗತ್ತಲ್ಲಿ ಎಂತೆಂಥ ವಿಕೃತ ವ್ಯಕ್ತಿಗಳನ್ನೋ ನೋಡಿರುತ್ತೀರ, ಆದರೆ ಇಲ್ಲೊಬ್ಬ ಅವರನ್ನೆಲ್ಲಾ ಮೀರಿಸಿದ ಕ್ರೂರಿ ಇದ್ದಾನೆ. ಆತನ ಹೆಸರು ಬ್ಯಾರಿ ಮಾಫ್ಯೂ ಅಂತಾ, ಮೂಲತಃ ಅಮೆರಿಕದ ಕೆಂಟಕಿ ರಾಜ್ಯದ ಮೇಸ್‌ವಿಲ್ ಸಿಟಿ ನಿವಾಸಿ ಈತ. ತನ್ನ ಹೆಂಡತಿಯನ್ನೇ ಕೊಂದು, ಬಳಿಕ ಆಕೆಯ ವೋಟ್‌ನ ಟ್ರಂಪ್‌ಗೆ ಹಾಕಿದ್ದನಂತೆ. ಸುಜೇನ್ ಮಾಫ್ಯೂ ಜೊತೆ ಮದುವೆಯಾಗಿದ್ದ ಬ್ಯಾರಿ ಮಾಫ್ಯೂ ಎಲ್ಲರಂತೆ ಜೀವನ ನಡೆಸಿಕೊಂಡು ಇದ್ದಿದ್ದರೆ ಆತ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

ಬೈಕ್ ಜೊತೆ ಹೊರಗೆ ತೆರಳಿದ್ದ ಸುಜೇನ್ ಮಾಫ್ಯೂ ಮನೆಗೆ ಮರಳಿ ಬಂದಿರಲಿಲ್ಲ. ಈ ಬಗ್ಗೆ ಸ್ವತಃ ಸುಜೇನ್‌ಳ ಪತಿ ಬ್ಯಾರಿ ಪೊಲೀಸರಿಗೆ ದೂರು ನೀಡಿದ್ದ. ಮೇಸ್‌ವಿಲ್ ಪೊಲೀಸ್ ಪಡೆ ತನಿಖೆ ನಡೆಸುವಾಗ ಬ್ಯಾರಿ ಮಾಫ್ಯೂ ಮೇಲೆ ಅನುಮಾನ ಬಂದಿದೆ. ಕಡೆಗೆ ನಾಲ್ಕು ಕಜ್ಜಾಯ ಕೊಟ್ಟು ಆ ಕೊಲೆಗಾರ ಪತಿಯನ್ನು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದ. ಸುಜೇನ್ ಮಾಫ್ಯೂಳನ್ನ ತಾನೇ ಕೊಂದೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಈ ಘಟನೆ ಬಳಿಕ ಪೊಲೀಸರಿಗೆ ಮತ್ತೊಂದು ಶಾಕ್ ಸಿಕ್ಕಿತ್ತು.

ಹೆಂಡತಿ ವೋಟ್ ತಾನೇ ಹಾಕಿದ್ದ

ಹೆಂಡತಿ ವೋಟ್ ತಾನೇ ಹಾಕಿದ್ದ

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ರ ಅಪ್ಪಟ ಅಭಿಮಾನಿಯಾಗಿದ್ದ ಬ್ಯಾರಿ, ಟ್ರಂಪ್ ಮತ್ತೊಮ್ಮೆ ಗೆಲ್ಲಲಿ ಎಂಬ ಆಶಯ ಹೊಂದಿದ್ದ. ಇದೇ ಕಾರಣಕ್ಕೆ ತನ್ನ ಹೆಂಡತಿಯನ್ನ ತಾನೇ ಕೊಲೆ ಮಾಡಿದ್ದರೂ, ಆಕೆಯ ಮತ ಕೂಡ ಇವನೇ ಹಾಕಿದ್ದ. ಆದರೆ ವಿಚಾರಣೆ ವೇಳೆ ಇದು ಮೇಸ್‌ವಿಲ್ ಪೊಲೀಸರಿಗೆ ತಿಳಿದಿದ್ದು, ತಕ್ಷಣ ಎಫ್‌ಬಿಐಗೆ ವಿಷಯ ಮುಟ್ಟಿಸಿದ್ದಾರೆ. ಇನ್ನು ಎಫ್‌ಬಿಐ ಅಧಿಕಾರಿಗಳು ಬ್ಯಾರಿಯನ್ನ ರಿಪೇರಿ ಮಾಡಿದಾಗ ತನ್ನ ಮತ್ತೊಂದು ಪಾಪ ಕೃತ್ಯ ಒಪ್ಪಿಕೊಂಡಿದ್ದಾನೆ. ಹೆಂಡತಿಯನ್ನ ಸಾಯಿಸಿದ ಬಳಿಕ ನಾನೇ ಆಕೆಯ ಮತವನ್ನ ಅಂಚೆ ಮತದ ಮೂಲಕ ಟ್ರಂಪ್‌ಗೆ ಹಾಕಿದೆ ಎಂದಿದ್ದಾನೆ.

ಟ್ರಂಪ್ ಬೆಂಬಲಿಗರ ಬಗ್ಗೆ ಆಕ್ರೋಶ

ಟ್ರಂಪ್ ಬೆಂಬಲಿಗರ ಬಗ್ಗೆ ಆಕ್ರೋಶ

ಟ್ರಂಪ್ 2020ರ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದರು. ಜೋ ಬೈಡನ್ ಭಾರಿ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಬೈಡನ್ ಗೆದ್ದ ನಂತರ ಟ್ರಂಪ್ ಸಿಕ್ಕಾಪಟ್ಟೆ ಕಿರಿಕಿರಿ ಮಾಡಿ, ಬೈಡನ್ ಮೋಸ ಮಾಡಿ ಗೆದ್ದಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಈಗ ಟ್ರಂಪ್ ಬೆಂಬಲಿಗ ಹೆಂಡತಿಯನ್ನೇ ಸಾಯಿಸಿ, ಆಕೆಯ ವೋಟ್‌ನ ಟ್ರಂಪ್‌ಗೆ ಹಾಕಿದ್ದಾನೆ. ಈ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾನೆ. ಮೋಸದ ಮೂಲಕ ಮತವನ್ನ ಟ್ರಂಪ್‌ಗೆ ಹಾಕಿದ್ದಾನೆ. ಹೀಗಾಗಿ ಟ್ರಂಪ್ ವಿರುದ್ಧ ಜೋ ಬೈಡನ್ ಬೆಂಬಲಿಗರು ತಿರುಗಿಬಿದ್ದಿದ್ದಾರೆ.

ಹತ್ತಾರು ಕೇಸ್ ಬಿತ್ತು..!

ಹತ್ತಾರು ಕೇಸ್ ಬಿತ್ತು..!

ಮೊದಲಿಗೆ ತನ್ನ ಹೆಂಡತಿಯನ್ನು ಕೊಂದು ಮರ್ಡರ್ ಕೇಸ್‌ನಲ್ಲಿ ಬುಕ್ ಆಗಿದ್ದ ಬ್ಯಾರಿ ಮಾಫ್ಯೂ ವಿರುದ್ಧ ಈಗ ಹತ್ತಾರು ಕೇಸ್‌ಗಳು ಬಿದ್ದಿವೆ. ನಕಲಿ ಮತದಾನ ಮಾಡಿದ ಬೆನ್ನಲ್ಲೇ ಬ್ಯಾರಿಗೆ ಶನಿ ಬೆನ್ನತ್ತಿದಂತಾಗಿದೆ. ಎಫ್‌ಬಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನ ಚುರುಕುಗೊಳಿಸಿದೆ. ಮತ್ತೊಂದು ಕಡೆ ಬ್ಯಾರಿಯ ಮೃತ ಪತ್ನಿ ಸುಜೇನ್ ಮಾಫ್ಯೂಳ ಶವ ಕೂಡ ಪತ್ತೆಯಾಗಿಲ್ಲ. ಇವನ ಕೃತ್ಯಗಳು ಕೋರ್ಟ್‌ನಲ್ಲಿ ಸಾಬೀತಾದರೆ, ಬ್ಯಾರಿ ಮಾಫ್ಯೂ ಸಾಯುವವರೆಗೂ ಜೈಲು ಕಂಬಿಗಳ ಹಿಂದೆಯೇ ಬದುಕಬೇಕಾಗಿ ಬರುತ್ತದೆ.

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು. ಆದರೆ ಈಗ ಒಬ್ಬೊಬ್ಬರೇ ಟ್ರಂಪ್ ಬೆಂಬಲಿಗರು ಮೋಸದ ಮತ ಹಾಕಿ ಜೈಲುಪಾಲಾಗುತ್ತಿದ್ದಾರೆ.

English summary
Trump supporter in Maysville killed her wife and cast her vote to Trump, he now arrested under murder charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X