ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಸರ್ಕಸ್..?

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 31: ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಪ್ರಯತ್ನ ಮುಂದುವರಿಸಿದ್ದಾರೆ. ಅಮೆರಿಕದಲ್ಲಿ ಡೆಡ್ಲಿ ಕೊರೊನಾ ಸೋಂಕಿಗೆ ಲಕ್ಷಾಂತರ ಜನ ಬಲಿಯಾಗಿರುವ ಸಂದರ್ಭದಲ್ಲೇ ಟ್ರಂಪ್ ಹೇಳಿಕೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಚುನಾವಣೆ ಮುಂದೂಡುವ ಪ್ರಸ್ತಾವನೆಗೆ ಸಮರ್ಥನೆ ನೀಡಿರುವ ಟ್ರಂಪ್, ನಕಲಿ ಮತದಾನ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕಿದೆ ಎಂದಿದ್ದಾರೆ.

ಮೇಲ್-ಇನ್ ಮತದಾನದಿಂದ 2020ರ ಚುನಾವಣೆ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಮತ್ತು ಮೋಸದ ಚುನಾವಣೆಯಾಗಿ ಉಳಿಯಲಿದೆ. ಅಲ್ಲದೆ ಅಮೆರಿಕಕ್ಕೆ ಮುಜುಗರ ಉಂಟುಮಾಡಲಿದೆ. ಇದೆಲ್ಲವನ್ನೂ ಪರಿಗಣಿಸಿ ಜನರು ಸೂಕ್ತ ರೀತಿಯಲ್ಲಿ ಮತ್ತು ಸುರಕ್ಷಿತವಾಗಿ ಮತ ಚಲಾಯಿಸುವವರೆಗೂ ಚುನಾವಣೆ ಮುಂದಕ್ಕೆ ಹಾಕಬಹುದೇ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!

ನವೆಂಬರ್ 3 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ರನ್ನು ಎದುರಿಸಲಿದ್ದಾರೆ. ಈಗಾಗಲೇ ನಿಗದಿಯಾಗಿರುವ ಚುನಾವಣೆ ಮುಂದಕ್ಕೆ ಹಾಕುವ ಅಧಿಕಾರವನ್ನು ಟ್ರಂಪ್‌ ಹೊಂದಿಲ್ಲ. ಹೀಗಾಗಿ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳು ಕಡಿಮೆ. ಆದರೂ ಪ್ರಯತ್ನ ಬಿಡದ ಟ್ರಂಪ್, ಚುನಾವಣೆ ಮುಂದಕ್ಕೆ ಹಾಕುವ ಕುರಿತು ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಹೇಳಿಕೆಗೆ ಭಾರಿ ವಿರೋಧ..!

ಟ್ರಂಪ್ ಹೇಳಿಕೆಗೆ ಭಾರಿ ವಿರೋಧ..!

ಅಕಸ್ಮಾತ್ ಈ ಚುನಾವಣೆಯನ್ನು ಮುಂದೂಡಿದ್ದೇ ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇರುವ ಶತಮಾನಗಳ ಸಂಪ್ರದಾಯಿಕ ಇತಿಹಾಸ ಮುರಿದಂತಾಗಲಿದೆ. ಒಂದ್ಕಡೆ ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಹೊತ್ತಲ್ಲೇ ಅಧ್ಯಕ್ಷೀಯ ಚುನಾವಣೆ ಮುಂದೂಡಿದರೆ ಮತ್ತೊಂದು ವಿಪತ್ತು ಖಚಿತ ಅಂತಾ ರಾಜಕೀಯ ತಜ್ಞರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವೈರಸ್‌ ದಾಳಿಯಿಂದ ನಲುಗಿರುವ ಅಮೆರಿಕದಲ್ಲಿ ಟ್ರಂಪ್ ಹೇಳಿಕೆ ಉದ್ವಿಗ್ನತೆ ಸೃಷ್ಟಿಸುತ್ತದೆ. ಅಲ್ಲದೆ, ದೇಶವನ್ನು ಪಕ್ಷಪಾತ ರಾಜಕೀಯದ ಕೂಪಕ್ಕೆ ದೂಡುವ ಸಾಧ್ಯತೆ ಹೆಚ್ಚು ಎಂಬ ಆರೋಪಗಳು ಕೇಳಿಬಂದಿವೆ. ಮೇಲ್-ಇನ್ ಮತದಾನವನ್ನು ಬಳಸುವುದು ವಂಚನೆಗೆ ಕಾರಣವಾಗುತ್ತದೆ ಎಂಬ ಟ್ರಂಪ್ ಸಮರ್ಥನೆಗೆ ಸಾಕ್ಷ್ಯವೇ ಇಲ್ಲ ಎಂದು ವಿಪಕ್ಷ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಸಮೀಕ್ಷೆಗಳನ್ನು ಕಂಡು ಟ್ರಂಪ್‌ಗೆ ಭಯವಾಯ್ತಾ..?

ಸಮೀಕ್ಷೆಗಳನ್ನು ಕಂಡು ಟ್ರಂಪ್‌ಗೆ ಭಯವಾಯ್ತಾ..?

ಟ್ರಂಪ್ ಚುನಾವಣೆಗೂ ಮುನ್ನ ನಡೆದಿರುವ ಸಮೀಕ್ಷೆಗಳ ವರದಿ ಕಂಡು ಬೆಚ್ಚಿಬಿದ್ದಿದ್ದಾರೆ. ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೇ ಟ್ರಂಪ್ ಹಿಂದುಳಿದಿದ್ದಾರೆ, ಹೀಗಾಗಿಯೇ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಇದೆ. ಬಿಡೆನ್ ಭಾರಿ ಮುನ್ನಡೆ ಕಾಯ್ದುಕೊಂಡಿವುದು ಟ್ರಂಪ್‌ ಕಂಗಾಲಾಗುವಂತೆ ಮಾಡಿದೆ. ಟ್ರಂಪ್ ವಿರುದ್ಧ ಜನಾಭಿಪ್ರಾಯ ಬಂದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮತದಾರರ ಪೈಕಿ, ಫ್ಲೋರಿಡಾ ರಾಜ್ಯದಲ್ಲಿ ಬಿಡೆನ್‌ಗೆ 51% ಜನಬೆಂಬಲ ಸಿಕ್ಕಿದ್ದರೆ, ಟ್ರಂಪ್‌ಗೆ 46% ಸಪೋರ್ಟ್ ಸಿಕ್ಕಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಅರಿಜೋನಾ ಸ್ಟೇಟ್‌ನಲ್ಲಿ ಬಿಡೆನ್ ಪರ 49% ಸಪೋರ್ಟ್

ಅರಿಜೋನಾ ಸ್ಟೇಟ್‌ನಲ್ಲಿ ಬಿಡೆನ್ ಪರ 49% ಸಪೋರ್ಟ್

ಅರಿಜೋನಾ ಸ್ಟೇಟ್‌ನಲ್ಲಿ ಬಿಡೆನ್ ಪರ 49% ಸಪೋರ್ಟ್ ಇದ್ದರೆ, ಟ್ರಂಪ್‌ಗೆ 45%ರಷ್ಟು ಜನಬೆಂಬಲ ಬಂದಿದೆ. ಮಿಚಿಗನ್‌ ರಾಜ್ಯದಲ್ಲೂ ಬಿಡೆನ್ ಮುಂದಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 52% ರಷ್ಟು ಮತದಾರರ ಒಲವು ಗಳಿಸಿದ್ದಾರೆ. ಇದು ಸಹಜವಾಗಿ ಟ್ರಂಪ್‌ಗೆ ಸೋಲುವ ಭೀತಿ ಮೂಡಿಸಿದೆ. ಅಷ್ಟಕ್ಕೂ ಟ್ರಂಪ್ ಹಿನ್ನಡೆ ಕಾಯ್ದುಕೊಂಡಿರುವ ರಾಜ್ಯಗಳೇ ಅಮೆರಿಕ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಚುನಾವಣೆ ಮುಂದೂಡುವ ಐಡಿಯಾ ಟ್ರಂಪ್‌ರದ್ದು ಎಂಬ ಆರೋಪ ಕೇಳಿಬರುತ್ತಿದೆ.

ಸ್ವಪಕ್ಷೀಯರಲ್ಲೇ ಟ್ರಂಪ್‌ ನಿರ್ಧಾರಕ್ಕೆ ವಿರೋಧ..!

ಸ್ವಪಕ್ಷೀಯರಲ್ಲೇ ಟ್ರಂಪ್‌ ನಿರ್ಧಾರಕ್ಕೆ ವಿರೋಧ..!

ಚುನಾವಣೆ ಮುಂದೂಡುವ ಟ್ರಂಪ್ ಪ್ರಸ್ತಾವನೆಗೆ ಅವರ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಟ್ರಂಪ್ ಸರ್ಕಾರ ಎಡವಿದೆ. ಇದು ಮಾಸುವ ಮೊದಲೇ ಚುನಾವಣೆ ಮುಂದೂಡಲು ಮುಂದಾದರೆ ಜನಾಕ್ರೋಶ ಹೆಚ್ಚಾಗುವುದು ಖಚಿತ. ಹೀಗಾಗಿ ನಿಗದಿಯಂತೆ ಚುನಾವಣೆ ನಡೆದುಬಿಡಲಿ ಎಂದು ಟ್ರಂಪ್‌ಗೆ ಸ್ವಪಕ್ಷೀಯರೇ ಸಲಹೆ ನೀಡಿದ್ದಾರೆ. ಇನ್ನೇನು ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಇಷ್ಟೆಲ್ಲಾ ತಿಕ್ಕಾಟ ನಡೆಯುತ್ತಿರುವುದು ಸಹಜವಾಗಿಯೇ ದೊಡ್ಡಣ್ಣನ ನಾಡಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗುವ ಮುನ್ಸೂಚನೆ ನೀಡುತ್ತಿದೆ. ಈ ವಿಚಾರದಲ್ಲಿ ಟ್ರಂಪ್ ವಿರೋಧಿಗಳು ಪಕ್ಷವನ್ನೂ ಮರೆತು ಒಂದಾಗುವ ಸಾಧ್ಯತೆಗಳು ದಟ್ಟವಾಗಿವೆ.

ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!

English summary
President Donald Trump suggested that the United States would need to delay the election. Trump claiming that mail-in voting would make results fraudulent election in history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X