ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಇನ್ನೂ ಸಿಕ್ಕಿಲ್ಲ ರಿಲೀಫ್, ಮುಂದೆ ಕಾದಿದೆಯಾ ಮಾರಿ ಹಬ್ಬ..?

|
Google Oneindia Kannada News

ಬೀಸೋ ದೊಣ್ಣೆಯಿಂದ ಬಚಾವ್ ಆದ್ರೆ ಸಾವಿರ ವರ್ಷ ಆಯಸ್ಸು ಎಂಬ ಮಾತಿದೆ. ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್‌ಗೆ ಈ ಮಾತು ಅನ್ವಯಿಸುತ್ತದೆ. ಕ್ಯಾಪಿಟಲ್ ಹಿಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಟ್ರಂಪ್ ವಿರುದ್ಧ ಮಂಡನೆಯಾಗಿದ್ದ ವಾಗ್ದಂಡನೆ ಪ್ರಕ್ರಿಯೆಯಲ್ಲಿ ಟ್ರಂಪ್ ಬಚಾವ್ ಆಗಿದ್ದಾರೆ. ಈಗಾಗಲೇ ಕೆಳಮನೆಯಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾಗಿತ್ತು. ಇನ್ನು ಅಮೆರಿಕ ಸಂಸತ್‌ನ ಮೇಲ್ಮನೆ ಅಂದರೆ ಸೆನೆಟ್ ಇದಕ್ಕೆ ಒಪ್ಪಿಗೆ ಸೂಚಿಸಬೇಕಿತ್ತು.

ಆದರೆ ಟ್ರಂಪ್ ವಿರುದ್ಧ ವಾಗ್ದಂಡನೆ ಜಾರಿಗೆ 3ನೇ 2ರಷ್ಟು ಮತ ಬೇಕಿತ್ತು. ಅಂದರೆ ಸೆನೆಟ್‌ನ ಒಟ್ಟು ಸದಸ್ಯ ಬಲ 100ರಲ್ಲಿ, 67 ಸದಸ್ಯರು ಟ್ರಂಪ್ ವಿರುದ್ಧ ಮತ ಹಾಕಬೇಕಿತ್ತು. ಆದರೆ ಟ್ರಂಪ್ ವಿರುದ್ಧ ಕೇವಲ 57 ಮತಗಳು ಚಲಾವಣೆಗೊಂಡವು ಹಾಗೂ ಟ್ರಂಪ್ ಪರ 43 ಸದಸ್ಯರು ಮತಹಾಕಿ ಮಾಜಿ ಅಧ್ಯಕ್ಷನ ಬೆನ್ನಿಗೆ ನಿಂತರು. ಈ ಮೂಲಕ 2ನೇ ಬಾರಿಗೂ ಟ್ರಂಪ್ ವಾಗ್ದಂಡನೆ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕಾರದಿಂದ ಕೆಳಗಿಳಿದ ಬಳಿಕ ಟ್ರಂಪ್‌ಗೆ ಎದುರಾಗಿದ್ದ ದೊಡ್ಡ ಗಂಡಾಂತರ ತೊಲಗಿದೆ.

 ಟ್ರಂಪ್ ಜಸ್ಟ್ ಮಿಸ್..!

ಟ್ರಂಪ್ ಜಸ್ಟ್ ಮಿಸ್..!

ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಲಾದ ವಾಗ್ದಂಡನೆ ನಿರ್ಣಯದ ಬಗ್ಗೆ ಬರೋಬ್ಬರಿ 4 ದಿನಗಳ ಕಾಲ ವಿಚಾರಣೆ ನಡೆಯಿತು. 4ನೇ ದಿನವಾದ ನಿನ್ನೆ ಅಂತಿಮವಾಗಿ ಟ್ರಂಪ್ ವಾಗ್ದಂಡನೆ ಪ್ರಕ್ರಿಯೆಗೆ ಮತಹಾಕಿದ ಅಮೆರಿಕದ ಸೆನೆಟರ್‌ಗಳು, ಟ್ರಂಪ್‌ಗೆ ಬುದ್ಧಿ ಕಲಿಸುವ ಆಲೋಚನೆಯಲ್ಲಿದ್ದರು. ಹೀಗಾಗಿ ಸ್ವತಃ ಟ್ರಂಪ್‌ ಪಕ್ಷವಾದ ರಿಪಬ್ಲಿಕನ್ ಪಾರ್ಟಿಯ 7 ಸೆನೆಟರ್‌ಗಳು ಟ್ರಂಪ್ ವಿರುದ್ಧ ಮತ ಹಾಕಿದ್ದರು. ಆದರೆ ಇನ್ನೂ 10 ಮತಗಳ ಅವಶ್ಯಕತೆ ಇತ್ತು. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಎಷ್ಟೇ ಪರಿಶ್ರಮಪಟ್ಟರೂ ಅದು ಸಾಧ್ಯವಾಗದೆ ಟ್ರಂಪ್ ಬಚಾವ್ ಆದರು. ಈ ಮೂಲಕ ಎರಡೆರಡು ಬಾರಿ ವಾಗ್ದಂಡನೆ ವಿರುದ್ಧ ಗೆದ್ದು ಬೀಗಿದ್ದಾರೆ ಟ್ರಂಪ್.

ವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ಅನಾಥರಾಗಿದ್ದ ಮಾಜಿ ಅಧ್ಯಕ್ಷ ಟ್ರಂಪ್

ಅನಾಥರಾಗಿದ್ದ ಮಾಜಿ ಅಧ್ಯಕ್ಷ ಟ್ರಂಪ್

ಅತ್ತ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಹಾಗೂ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದ್ಕಡೆ ಟ್ರಂಪ್ ಪರವಾಗಿ ಬೆನ್ನಿಗೆ ನಿಂತು, ನೇರವಾಗಿ ಧ್ವನಿ ಎತ್ತುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಆದರೆ ಕೆಲವರು ಮಾತ್ರ ಟ್ರಂಪ್‌ಗೆ ಒಳಗೊಳಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದರು. ಅದರಲ್ಲಿ ರಿಪಬ್ಲಿಕನ್ ಪಕ್ಷದ 7 ಸೆನೆಟರ್‌ಗಳು ಮಾತ್ರ ಟ್ರಂಪ್ ವಿರುದ್ಧ ಬಹಿರಂಗವಾಗಿ ಕೆಂಡ ಕಾರಿದ್ದರು. 'ಆತ ಏನು ಮಾಡಿದ್ದ ಅಂತಾ ಗೊತ್ತು' ಎಂದು ನೇರಾನೇರ ವಾಗ್ದಳಿ ನಡೆಸಿದ್ದರು. ಅದರಲ್ಲೂ ಹಿಂಸಾಚಾರ ನಡೆಯುವ ವೇಳೆ ರಿಪಬ್ಲಿಕನ್ ಪಕ್ಷದ ಸೆನೆಟರ್‌ ಜೊತೆ ಟ್ರಂಪ್ ನಡೆಸಿದ್ದ ಫೋನ್ ಸಂಭಾಷಣೆ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಟ್ರಂಪ್‌ಗೆ ಅನ್ಯಾಯವಾಗಿದೆ ಅಂತಾ ಆರೋಪಿಸಿ ಟ್ರಂಪ್ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರಚಾಟ ನಡೆಸುತ್ತಾ ಅಮೆರಿಕ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಬೆಂಬಲಿಗರು ಹಿಂಸಾಚಾರ ನಡೆಯುವುದಕ್ಕೆ ಮುನ್ನ ಟ್ರಂಪ್ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎಂಬ ಆರೋಪ ಅಮೆರಿಕ ಸಂಸದರದ್ದು. ಈ ಕಾರಣಕ್ಕೆ ಟ್ರಂಪ್ ವಿರುದ್ಧ ವಾಗ್ದಂಡನೆಯಾಗಲಿ ಎಂದು ಪಟ್ಟು ಹಿಡಿದಿದ್ದರು ಡೆಮಾಕ್ರಟಿಕ್ ಪಕ್ಷದ ಸದಸ್ಯರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷ ರಿಪಬ್ಲಿಕನ್ ಪಾರ್ಟಿಯ ಸದಸ್ಯರ ಬೆಂಬಲ ಇತ್ತು. ಕೆಳಮನೆಯಲ್ಲಿ ಗೆದ್ದು, ಸೆನೆಟ್‌ನಲ್ಲಿ ಹೋರಾಡಿದರು ಟ್ರಂಪ್‌ಗೆ ಶಿಕ್ಷೆ ವಿಧಿಸಲು ಆಗಲಿಲ್ಲ.

ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..!ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..!

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು.

ಟ್ರಂಪ್ ಮುಂದಿನ ಆಯ್ಕೆ ಏನು..?

ಟ್ರಂಪ್ ಮುಂದಿನ ಆಯ್ಕೆ ಏನು..?

ಈಗ ಎದ್ದಿರುವ ಟ್ರಿಲಿಯನ್ ಡಾಲರ್ ಪ್ರಶ್ನೆ ಇದು. ಏಕೆಂದರೆ ಟ್ರಂಪ್ ಈಗಾಗಲೇ ವಾಗ್ದಂಡನೆ ಯುದ್ಧ ಗೆದ್ದು ಬೀಗಿದ್ದಾರೆ. 57-43ರ ಅಂತರದಲ್ಲಿ ಸೆನೆಟ್‌ನಲ್ಲಿ ಟ್ರಂಪ್ ಬಚಾವ್ ಆಗಿದ್ದಾರೆ. ಹೀಗಾಗಿ ಟ್ರಂಪ್ ಮುಂದಿರುವ ಆಯ್ಕೆಗಳು ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಷ್ಟಕ್ಕೂ ಇದು ಕೇವಲ ವಾಗ್ದಂಡನೆ ಪ್ರಕ್ರಿಯೆ ಅಷ್ಟೇ. ಟ್ರಂಪ್ ವಿರುದ್ಧ ಅಮೆರಿಕದ ಕೋರ್ಟ್‌ಗಳಲ್ಲಿ ಬಾಕಿ ಇರುವ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪೈಕಿ ಹಲವು ಪ್ರಕರಣಗಳು ಕ್ರಿಮಿನಲ್ ಲೆಕ್ಕದಲ್ಲಿ ಓಡುತ್ತಿವೆ. ಹೀಗಾಗಿ ಟ್ರಂಪ್ ಈಗಲೂ ಸಂಕಷ್ಟದಿಂದ ಬಚಾವ್ ಆಗಿಲ್ಲ. ಜಸ್ಟ್ ಒಂದು ರಿಲೀಫ್ ಸಿಕ್ಕಿದೆ ಅಷ್ಟೇ.

English summary
Trump won impeachment war. But former president Donald Trump still have big problems with court cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X