ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತೊಲಗುತ್ತಿದೆ.. ತೊಲಗುತ್ತಿದೆ.. ಟ್ರಂಪ್ ಹೇಳಿಕೆಗೆ ತೀವ್ರ ಆಕ್ರೋಶ

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕೊನೆಯ ಡಿಬೆಟ್‌ನಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಕೊರೊನಾ ಕುರಿತು ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ನಾನು ಹೇಳುತ್ತಾ ಬಂದಿದ್ದೀನಿ ಕೊರೊನಾ ತೊಲಗುತ್ತಿದೆ, ಕೊರೊನಾ ತೊಲಗುತ್ತಿದೆ ಅಂತಾ. ಕೊರೊನಾ ಇನ್ನು ಮುಂದೆ ಇರಲು ಸಾಧ್ಯವಿಲ್ಲ ಎಂದು ಟ್ರಂಪ್ ಉದ್ಘರಿಸಿದ್ದರು. ಆದರೆ ಟ್ರಂಪ್ ಹೀಗೆ ಹೇಳಿ ಒಂದು ದಿನ ಕಳೆಯುವುದರ ಒಳಗೆ ಅಮೆರಿಕದಲ್ಲಿ ಮತ್ತೊಮ್ಮೆ ಕೊರೊನಾ ಬಿರುಗಾಳಿ ಎದ್ದುಬಿಟ್ಟಿದೆ.

ಅಮೆರಿಕ ಕಾಲಮಾನದ ಪ್ರಕಾರ ಗುರುವಾರ ಡಿಬೆಟ್ ನಡೆದಿದ್ದರೆ, ಶುಕ್ರವಾರ ಕೊರೊನಾ ದೊಡ್ಡ ಶಾಕ್ ಕೊಟ್ಟಿದೆ. ಶುಕ್ರವಾರ ಒಂದೇ ದಿನ ಅಮೆರಿಕದಲ್ಲಿ ಬರೋಬ್ಬರಿ 83,010 ಜನರಿಗೆ 'ಕೊರೊನಾ' ಕನ್ಫರ್ಮ್ ಆಗಿದೆ. ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 87 ಲಕ್ಷದ ಗಡಿ ದಾಟಿದೆ. ಹಾಗೇ 903 ಅಮೆರಿಕನ್ನರು ನಿನ್ನೆ ಕೊರೊನಾಗೆ ಬಲಿಯಾಗಿ, ಒಟ್ಟು ಸಾವಿನ ಸಂಖ್ಯೆ 2 ಲಕ್ಷ 29 ಸಾವಿರಕ್ಕೆ ತಲುಪಿದೆ. ಆದರೆ ಟ್ರಂಪ್ ಡಿಬೆಟ್‌ನಲ್ಲಿ ಇದನ್ನು ಅಲ್ಲಗಳೆದಿದ್ದರು. ಕೊರೊನಾ ತೊಲಗುತ್ತಿದೆ ಬಿಡಿ ಎಂದಿದ್ದರು. ಇದು ಅಮೆರಿಕ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಅಧ್ಯಕ್ಷರ ವರ್ತನೆ ವಿರುದ್ಧ ಅಲ್ಲಿನ ಮಾಧ್ಯಮಗಳು ಟೀಕಾಪ್ರಹಾರ ನಡೆಸುತ್ತಿವೆ.

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಕೆಲವು ಹೇಳಿಕೆಗಳಿಂದ ಹಲವು ವಿವಾದ..!

ಟ್ರಂಪ್‌ಗೂ ಹಾಗೂ ಕೊರೊನಾ ವಿವಾದಗಳಿಗೂ ಅವಿನಾಭಾವ ಸಂಬಂಧ ಇರುವಂತೆ ಕಾಣುತ್ತಿದೆ. ಏಕೆಂದರೆ ಟ್ರಂಪ್ ಹೀಗೆ ಕೊರೊನಾ ವಿಚಾರವಾಗಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಕೊರೊನಾ ಕುರಿತು ಟ್ರಂಪ್ ಕೊಟ್ಟ ಹೇಳಿಕೆಗಳು ಭಾರಿ ವಿವಾದ ಸೃಷ್ಟಿ ಮಾಡಿದ್ದವು. ಅದರಲ್ಲೂ ಕ್ರಿಮಿ ನಾಶಕ ವಿಷವನ್ನು ಕೊರೊನಾ ಸೋಂಕಿತರ ದೇಹಕ್ಕೆ ಚುಚ್ಚಬಹುದು ಅಥವಾ ನೇರಳಾತೀತ ಕಿರಣಗಳನ್ನು ಸೋಂಕಿತರ ದೇಹದ ಮೇಲೆ ಬಿಟ್ಟರೆ ಕೊರೊನಾ ಸಾಯುತ್ತೆ ಎಂದಿದ್ದ ಮಿ.ಟ್ರಂಪ್ ಊಹೆಗಳು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದು ಸಾಕಾಗಿಲ್ಲವೇನೋ ಎಂಬಂತೆ ಟ್ರಂಪ್ ಈಗ ಮತ್ತೆ ಕೊರೊನಾ ವಿಚಾರವಾಗಿ ವಿವಾದ ಎಬ್ಬಿಸಿದ್ದಾರೆ. ಎಲೆಕ್ಷನ್ ಡಿಬೆಟ್ ವೇಳೆ ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಭಾವದ ಬಗ್ಗೆ ಪ್ರಶ್ನೆ ಎದ್ದಾಗ, ಕೊರೊನಾ ತೊಲಗುತ್ತಿದೆ ಎನ್ನುವ ಮೂಲಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಅಬ್ಬಬ್ಬಾ.. ಎಡವಟ್ಟು ಒಂದಾ.. ಎರಡಾ..!

ಅಬ್ಬಬ್ಬಾ.. ಎಡವಟ್ಟು ಒಂದಾ.. ಎರಡಾ..!

ಕೊರೊನಾ ಸೋಂಕಿನ ಬಗ್ಗೆ ಸಾಕಷ್ಟು ಅಜಾಗರೂಕ ವರ್ತನೆ ತೋರಿದ್ದ ಟ್ರಂಪ್‌ಗೆ ಮಹಾಮಾರಿ ವಕ್ಕರಸಿತ್ತು. ಆಗಲೂ ಕೊರೊನಾ ಬಗ್ಗೆ ತಮ್ಮ ಅಸಡ್ಯ ಬಿಡದ ಅಮೆರಿಕ ಅಧಕ್ಷ ಟ್ರಂಪ್, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅಭಿಮಾನಿಗಳ ಭೇಟಿಗೆ ಹೊರಗೆ ಬಂದಿದ್ದರು. ಕಾರಿನಲ್ಲಿ ಕೂತು, ತಮ್ಮ ಸಿಬ್ಬಂದಿ ಜೊತೆಗೆ ಟ್ರಂಪ್ ಹೊರಗಡೆ ವಿಸಿಟ್ ಕೊಟ್ಟು ಹೋಗಿದ್ದರು. ಇದು ಟ್ರಂಪ್ ವಿರುದ್ಧದ ಆಕ್ರೋಶ ಹೆಚ್ಚಾಗುವಂತೆ ಮಾಡಿತ್ತು. ಅದರಲ್ಲೂ ಈ ಘಟನೆ ನಂತರ ಸಾಂಕ್ರಾಮಿಕ ರೋಗಗಳ ತಜ್ಞರು, ಟ್ರಂಪ್ ಜೊತೆ ಕಾರಿನಲ್ಲಿ ಕೂತಿದ್ದ ಅಧಿಕಾರಿಗಳನ್ನು ತಕ್ಷಣ ಕ್ವಾರಂಟೈನ್ ಮಾಡಿ ಎಂದು ಆಗ್ರಯಿಸಿದ್ದರು.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು.

ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ದೈಹಿಕ ಅಂತರ ಕಾಪಾಡದ ಅಮೆರಿಕದ ನಾಯಕರ ವಿರುದ್ಧ ವಿಶ್ವವೇ ಗರಂ ಆಗಿದೆ.

Recommended Video

ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada
ಬೈಬಲ್ ವಾಕ್ಯದಂತೆ ಅವರು ಪರಿಗಣಿಸುತ್ತಾರೆ

ಬೈಬಲ್ ವಾಕ್ಯದಂತೆ ಅವರು ಪರಿಗಣಿಸುತ್ತಾರೆ

ಟ್ರಂಪ್ ವಿರುದ್ಧ ಏನನ್ನೇ ಹೇಳಿದರೂ ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರುವುದಿಲ್ಲ. ಏಕೆಂದರೆ ಟ್ರಂಪ್‌ಗೆ ಅಂತಹ ಫ್ಯಾನ್ ಫಾಲೋವರ್ಸ್ ಇದ್ದಾರೆ. ಟ್ರಂಪ್ ಏನೇ ಹೇಳಿದರೂ ಅದನ್ನು ಬೈಬಲ್ ವಾಕ್ಯದಂತೆ ಅವರು ಪರಿಗಣಿಸುತ್ತಾರೆ ಹಾಗೂ ಅದನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಟ್ರಂಪ್‌ಗೆ ಕಾಡುತ್ತಿರುವ ಚಿಂತೆ ಪ್ರಬುದ್ಧ ಮತದಾರರದ್ದು. ಈಗಾಗಲೇ ಟ್ರಂಪ್ ವರ್ತನೆ ಬಗ್ಗೆ ಅಮೆರಿಕದ ಪ್ರಬುದ್ಧ ಮತದಾರ ವರ್ಗ ರೊಚ್ಚಿಗೆದ್ದಿದೆ. ಟ್ರಂಪ್ ಹೇಳಿಕೆ ಕೇಳಿದಾಗೆಲ್ಲಾ ಮೈಮೇಲೆ ಚೇಳು ಬಿಟ್ಟಂತೆ ಅವರು ವರ್ತಿಸುತ್ತಿದ್ದಾರೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವ ಸಂದರ್ಭದಲ್ಲಿ ಟ್ರಂಪ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ತಮಗೆ ಒಲಿದು ಬಂದಿದ್ದ ಕಡೇ ಅವಕಾಶದಲ್ಲೂ ಟ್ರಂಪ್ ಎಡವಿರುವುದು ಅಭಿಮಾನಿಗಳಲ್ಲೂ ಅಳಕು ಮೂಡಿಸಿದೆ.

English summary
Trump statement on Corona in US election debate become a big controversy in America. American opposition leaders are condemns president Trump’s statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X