ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಚೀನಾ ಪರ ನಿಂತಿದ್ದಾರೆ, ಒಬಾಮಾ ಗಂಭೀರ ಆರೋಪ

|
Google Oneindia Kannada News

ಅಮೆರಿಕ ಎಂದರೆ ವಿಶ್ವಮಟ್ಟದಲ್ಲಿ ಒಂದು ಘನತೆ ಇದೆ. ಅಮೆರಿಕ ಎಂದರೆ ಜಗತ್ತಿನಲ್ಲಿ ಗೌರವಯುತ ಸ್ಥಾನ ಇದೆ. ಆದರೆ ಟ್ರಂಪ್ ಅದನ್ನೆಲ್ಲಾ ಹಾಳು ಮಾಡಿದ್ದಾರೆ. ಟ್ರಂಪ್ ಸಾರ್ವಜನಿಕ ಜೀವನದಲ್ಲಿ ವರ್ತಿಸುವ ರೀತಿ ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಾಗ್ದಾಳಿ ನಡೆಸಿದ್ದಾರೆ. ಬಿಡೆನ್ ಪರ ಚುನಾವಣಾ ಪ್ರಚಾರ ನಡೆಸಿದ ಒಬಾಮಾ, ಟ್ರಂಪ್‌ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ಮಾತೆತ್ತಿದರೆ ಸಾಕು ಚೀನಾ ವಿರುದ್ಧ ಟ್ರಂಪ್ ಕಿಡಿಕಾರುತ್ತಾರೆ, ಚೀನಾ ತಮ್ಮ ಬದ್ಧ ಶತ್ರು ಎಂಬಂತೆ ವರ್ತಿಸುತ್ತಾರೆ.

ಆದರೆ ಇದೇ ಟ್ರಂಪ್ ಚೀನಾದಲ್ಲಿ ಸೀಕ್ರೇಟ್ ಅಕೌಂಟ್ ಹೊಂದಿದ್ದಾರೆ. ಕದ್ದುಮುಚ್ಚಿ ಚೀನಾದಲ್ಲಿ ಬ್ಯಾಂಕ್ ಖಾತೆ ತೆರೆಯುವ ಅಗತ್ಯತೆಯಾದರೂ ಏನಿತ್ತು..? ಎಂದು ಒಬಾಮಾ ಪ್ರಶ್ನಿಸಿದರು. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಬಿಡೆನ್ ಪರವಾಗಿ ನಡೆದ ಕ್ಯಾಂಪೇನ್ ವೇಳೆ ಒಬಾಮಾ ಟ್ರಂಪ್ ವಿರುದ್ಧ ಕೆಂಡ ಕಾರಿದರು. ಟ್ರಂಪ್ ಚೀನಾ ಹೆಸರನ್ನೇ ಹೇಳುತ್ತಾ, ಅಲ್ಲಿಂದಲೇ ಲಾಭ ಪಡೆಯುತ್ತಿದ್ದಾರೆ. ಆದರೆ ಇದೇ ಟ್ರಂಪ್ ಅಮೆರಿಕ ಹಾಗೂ ಚೀನಾ ನಡುವಿನ ಸಂಬಂಧವನ್ನು ಹಾಳುಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಡೊನಾಲ್ಡ್ ಟ್ರಂಪ್ ಮನೆಗೆ.. ಜೋ ಬಿಡೆನ್ ವೈಟ್ ಹೌಸ್‌ಗೆ..? ಡೊನಾಲ್ಡ್ ಟ್ರಂಪ್ ಮನೆಗೆ.. ಜೋ ಬಿಡೆನ್ ವೈಟ್ ಹೌಸ್‌ಗೆ..?

ಬೇಕಾಬಿಟ್ಟಿ ಟ್ವೀಟ್ ಮಾಡ್ತಾರಂತೆ ಟ್ರಂಪ್..!

ಬೇಕಾಬಿಟ್ಟಿ ಟ್ವೀಟ್ ಮಾಡ್ತಾರಂತೆ ಟ್ರಂಪ್..!

ಅಮೆರಿಕದ ಅಧ್ಯಕ್ಷರಾಗಲು ಕೆಲವೊಂದು ಯೋಗ್ಯತೆಗಳು ಬೇಕು, ಆದರೆ ಅದು ಟ್ರಂಪ್ ಅವರಲ್ಲಿ ಇಲ್ಲವೆಂದು ಅನಿಸುತ್ತದೆ. ಟ್ರಂಪ್ ತಾವು ಸಾರ್ವಜನಿಕ ಜೀವನದಲ್ಲಿ ಇರುವುದನ್ನ ಮರೆತು ಹೋದವರಂತೆ ನಟಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಅಲ್ಲದೆ, ಅನಗತ್ಯವಾಗಿ ಸಿಕ್ಕ ಸಿಕ್ಕದ್ದನ್ನೆಲ್ಲಾ ರೀ ಟ್ವೀಟ್ ಮಾಡುತ್ತಾರೆ. ಇದರಿಂದ ಟ್ರಂಪ್ ಗೌರವಕ್ಕೆ ಧಕ್ಕೆ ಬರುವ ಜೊತೆಗೆ, ಅಮೆರಿಕದ ಘನತೆಗೂ ಧಕ್ಕೆ ಉಂಟಾಗುತ್ತಿದೆ. ಇದನ್ನು ಟ್ರಂಪ್ ಮಾಡುತ್ತಿರುವುದಾದರೂ ಏಕೆ..? ಎಂದು ಒಬಾಮಾ ಪ್ರಶ್ನಿಸಿದರು. ಅಲ್ಲದೆ ಟ್ರಂಪ್ ಕುಟುಂಬ ಹೊರ ಜಗತ್ತಿನ ಜೊತೆ ಹೇಗೆ ವರ್ತಿಸುತ್ತಿದೆ, ಅದರ ಪರಿಣಾಮ ಏನು ಎಂಬುದನ್ನೂ ಒಬಾಮಾ ವಿವರಿಸಿದರು. ಅಲ್ಲದೆ ಕೊರೊನಾಗೆ ಟ್ರಂಪ್ ಚಿಕಿತ್ಸೆ ಪಡೆಯುವಾಗ ಮಾಡಿಕೊಂಡ ಎಡವಟ್ಟುಗಳನ್ನೂ ಒಬಾಮಾ ಪ್ರಸ್ತಾಪಿಸಿದರು.

ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಒಬಾಮಾ ಕೇರ್ v/s ಡೊನಾಲ್ಡ್ ಟ್ರಂಪ್

ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಒಬಾಮಾ ತಮ್ಮ ಆಡಳಿತದಲ್ಲಿ 'ಒಬಾಮಾ ಕೇರ್' ಎಂಬ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದರು. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿಯೇ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ 'ಒಬಾಮಾ ಕೇರ್' ಯೋಜನೆಗೆ ಬ್ರೇಕ್ ಹಾಕಿದ್ದರು. ಇದು ಟ್ರಂಪ್ ಮತ್ತು ಒಬಾಮಾ ಮಧ್ಯೆ ವಾಗ್ದಾಳಿಗೆ ದಾರಿಮಾಡಿಕೊಟ್ಟಿತ್ತು. 'ಕೊರೊನಾ' ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿರುವುದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. 'ಒಬಾಮಾ ಕೇರ್'ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂಬುದು ವಿಪಕ್ಷ ನಾಯಕರ ಆರೋಪ.

 ‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

ಕೆಲದಿನಗಳ ಹಿಂದೆ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಒಬಾಮಾ ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಅಲ್ಲದೆ ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಟ್ರಂಪ್ ವಿರುದ್ಧ ಪ್ರಚಾರ ಕಣದಲ್ಲಿ ಅಬ್ಬರಿಸಲು ಒಬಾಮಾ ಮುಂದಾಗಿದ್ದಾರೆ.

ಟ್ರಂಪ್ v/s ಬಿಡೆನ್ ಕಿರಿಕ್, ಡಿಬೆಟ್ ವೇಳೆ ಮೈಕ್ ಮ್ಯೂಟ್ಟ್ರಂಪ್ v/s ಬಿಡೆನ್ ಕಿರಿಕ್, ಡಿಬೆಟ್ ವೇಳೆ ಮೈಕ್ ಮ್ಯೂಟ್

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದ್ದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಒಬಾಮಾ ತಿಳಿಸಿದ್ದರು.

ಈ ಬಾರಿ ಗೆಲ್ಲುತ್ತಾರಾ ಟ್ರಂಪ್..? ಸೋಲುತ್ತಾರಾ ಬಿಡೆನ್..?ಈ ಬಾರಿ ಗೆಲ್ಲುತ್ತಾರಾ ಟ್ರಂಪ್..? ಸೋಲುತ್ತಾರಾ ಬಿಡೆನ್..?

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಒಬಾಮಾ ಹೀಗೆ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಇದೇ ರೀತಿ ಟ್ರಂಪ್‌ಗೆ ಬೆವರಿಳಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಬಳಿಕ ಒಬಾಮಾ ಇದೀಗ ಮತ್ತೆ ಟ್ರಂಪ್ ವಿರುದ್ಧ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ.

English summary
Former US president Obama started campaign for Biden. And Obama makes allegation against Trump that he spoiling the America name in international level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X