ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನಲ್ಲಿ ಕೊವಿಡ್ 19ಗೆ ಪ್ರತಿರೋಧವಿದೆ ಎಂದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ಆರಂಭಿಸಿದ್ದು, ಭಾಷಣದಲ್ಲಿ ಕೊವಿಡ್‌ 19ಗೆ ನನ್ನಲ್ಲಿ ಪ್ರತಿರೋಧವಿದೆ ಎಂದು ಹೇಳಿದ್ದಾರೆ.

ಅಮೆರಿಕದ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್ ಕೊವಿಡ್‌ಗೆ ನಾನು ರೋಗನಿರೋಧಕನೆಂಬಂತೆ ತೋರುತ್ತಿದೆ. ನನ್ನೊಳಗಿನ ರೋಗ ಪ್ರತಿರೋಧವು ದೀರ್ಘಕಾಲೀನವಾಗಬಹುದು, ಅಲ್ಪಕಾಲೀನವಾಗಿರಬಹುದು, ಅಥವಾ ಶಾಶ್ವತವಾಗಿರಬಹುದು ಇದರ ಬಗ್ಗೆ ನನಗೆ ತಿಳಿದಿಲ್ಲ. ಯಾರಿಗೂ ಗೊತ್ತಿಲ್ಲ ಆದರೆ ನಾನು ಮಾತ್ರ ಕೊವಿಡ್‌ಗೆ ಪ್ರತಿರೋಧಕ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಟ್ರಂಪ್‌ ಬಗ್ಗೆ ಚಿಂತಿಸಿ, ಕೊರಗಿನಲ್ಲೇ ಮೃತಪಟ್ಟ ಅಪ್ಪಟ ಅಭಿಮಾನಿ ಟ್ರಂಪ್‌ ಬಗ್ಗೆ ಚಿಂತಿಸಿ, ಕೊರಗಿನಲ್ಲೇ ಮೃತಪಟ್ಟ ಅಪ್ಪಟ ಅಭಿಮಾನಿ

ಟ್ರಂಪ್ ಅವರು ಪ್ರಚಾರದಲ್ಲಿ ತೊಡಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ವೈರಸ್‌ಗೆ ಒಳಗಾಗಿದ್ದ ಡೊನಾಲ್ಡ್ ಟ್ರಂಪ್ , ಮೂರು ದಿನ ಸೇನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ತಕ್ಷಣವೇ ಮಾಸ್ಕ್ ತೆಗೆದು ವಿವಾದವನ್ನೂ ಸೃಷ್ಟಿಸಿದ್ದರು.

Trump Says He Defeated China Virus Claims He Is Now Immune To COVID-19

ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್‌-19 ಸಾಂಕ್ರಾಮಿಕವನ್ನು ಹತ್ತಿಕ್ಕಲು ಲಸಿಕೆಯೊಂದರ ಸಂಶೋಧನೆಯಲ್ಲಿಅನೇಕ ವಿಜ್ಞಾನಿಗಳು, ಔಷಧ ತಯಾರಿಕೆ ಕಂಪನಿಗಳು ಶ್ರಮಿಸುತ್ತಿರುವ ನಡುವೆಯೇ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಯಬಲ್ಲ ಪರಿಣಾಮಕಾರಿ ಮಿಶ್ರಣದ ಪತ್ತೆಯಾಗಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಅಮೆರಿಕದ ಬಯೋಟೆಕ್ನಾಲಜಿ ಕ್ಷೇತ್ರದ ದಿಗ್ಗಜ ಕಂಪನಿ ರಿಜೆನರಾನ್‌ ತಯಾರಿಸಿರುವ ರೋಗ ನಿರೋಧಕಗಳ ಮಿಶ್ರಿತ ಲಸಿಕೆ (ಆರ್‌ಇಜಿಎನ್‌-ಸಿಒವಿ2) ಕೊರೊನಾವನ್ನು ಯಶಸ್ವಿಯಾಗಿ ನಿಯಂತ್ರಿಸುವ ಬಗ್ಗೆ ಅಧ್ಯಯನಗಳು ಖಚಿತಪಡಿಸಿವೆ. ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೂಡ ಪ್ರಾಯೋಗಿಕ ಹಂತದಲ್ಲಿರುವ ಈ ಲಸಿಕೆಯ ಸಣ್ಣ ಪ್ರಮಾಣವನ್ನು ಪಡೆದಿದ್ದರು ಎನ್ನಲಾಗಿದೆ.

Recommended Video

Narendra Modi ಇಂದು ಹೊಸ 100 ರುಪಾಯಿಯ ನಾಣ್ಯವನ್ನು ಪರಿಚಯಿಸಿದರು| Oneindia Kannada

ಈ ಲಸಿಕೆಯಿಂದಾಗಿ ಪ್ರಮುಖವಾಗಿ ಕೊರೊನಾ ಸೋಂಕು ಶ್ವಾಸಕೋಶಗಳಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸುತ್ತಾ ದೇಹದ ಇತರ ಭಾಗಗಳಿಗೆ ಪಸರಿಸುವುದನ್ನು ತಡೆಯಬಹುದಾಗಿದೆ. ಜತೆಗೆ ವೈರಾಣುವಿನಿಂದಾಗಿ ಸೋಂಕಿತನಲ್ಲಿ ವಿಪರೀತ ತೂಕ ಇಳಿಕೆಯನ್ನು ಕೂಡ ನಿಯಂತ್ರಿಸಬಹುದಾಗಿದೆ ಎಂದು ಹೇಳಲಾಗಿದೆ.

English summary
US President Donald Trump on Sunday declared himself immune from Covid-19 as he prepares to return to the campaign trail in a fight to regain ground against surging White House rival Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X