• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಒಳ್ಳೆಯದು ಎಂದಿದ್ದರಂತೆ ಟ್ರಂಪ್, ಯಾಕೆ ಗೊತ್ತಾ..?

|

ವಾಷಿಂಗ್ಟನ್, ಸೆ. 18: ಕೊರೊನಾ ಸೋಂಕು ಇಡೀ ಅಮೆರಿಕವನ್ನೇ ಕಿತ್ತು ತಿನ್ನುತ್ತಿದೆ. ಆದರೆ ಇಂತಹ ಹೊತ್ತಲ್ಲೇ ಟ್ರಂಪ್ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಟ್ರಂಪ್ ಒಮ್ಮೆ ಸಭೆಯಲ್ಲಿ ಕೊರೊನಾ ವೈರಸ್ ಒಂದು ರೀತಿ ಒಳ್ಳೆಯದನ್ನೇ ಮಾಡಿದೆ ಎಂದಿದ್ದರಂತೆ.

ಅಲ್ಲದೆ ಕೊರೊನಾ ಬಂದಿದ್ದರಿಂದಲೇ ಅಸಹ್ಯಕರ ವ್ಯಕ್ತಿಗಳ ಕೈ ಕುಲುಕುವುದು ತಪ್ಪಿದೆ ಎಂಬುದು ಟ್ರಂಪ್ ಪ್ರತಿಪಾದನೆ ಆಗಿತ್ತೆಂದು ಅಮೆರಿಕ ಸರ್ಕಾರದ ಮಾಜಿ ಅಧಿಕಾರಿ, ಒಲಿವಿಯಾ ಟ್ರಾಯೆ ಆರೋಪಿಸಿದ್ದಾರೆ. ಕೊರೊನಾ ವೈರಸ್‌ ನಿಯಂತ್ರಣ ಕುರಿತಾದ ಕಾರ್ಯಪಡೆಯಲ್ಲೂ ಸೇವೆ ಸಲ್ಲಿಸಿರುವ ಈ ಒಲಿವಿಯಾ, ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಸಲಹೆಗಾರ್ತಿ ಕೂಡ ಆಗಿದ್ದರು.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಹೀಗಾಗಿ ಒಲಿವಿಯಾಗೆ ಸರ್ಕಾರದ ಗುಪ್ತ ಹಾಗೂ ಉನ್ನತಮಟ್ಟದ ಸಭೆಗಳಲ್ಲಿ ಭಾಗವಹಿಸಿರುವ ಅನುಭವ ಇರುತ್ತದೆ. ಇದೀಗ ತಮ್ಮ ಎಲ್ಲಾ ಹುದ್ದೆ ತ್ಯಜಿಸಿರುವ ಒಲಿವಿಯಾ ಟ್ರಾಯೆ, ಟ್ರಂಪ್ ವಿರುದ್ಧ ಅಧ್ಯಕ್ಷೀಯ ಚುನಾವಾಣೆ ಅಖಾಡ ಪ್ರವೇಶ ಮಾಡಿದ್ದಾರೆ.

ಟ್ರಂಪ್‌ರನ್ನು 2ನೇ ಬಾರಿಗೆ ಆಯ್ಕೆ ಮಾಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ರಿಪಬ್ಲಿಕನ್ಸ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ಚುನಾವಣೆ ಹೊತ್ತಲ್ಲೇ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ.

‘ಟ್ರಂಪ್ ಜೊತೆ ಕೆಲಸ ಮಾಡೋಕೆ ಭಯವಾಗುತ್ತೆ..!’

‘ಟ್ರಂಪ್ ಜೊತೆ ಕೆಲಸ ಮಾಡೋಕೆ ಭಯವಾಗುತ್ತೆ..!’

ಅಮೆರಿಕ ಅಧ್ಯಕ್ಷರ ಹುದ್ದೆಯೇ ಅಂತಹದ್ದು, ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ಅತ್ಯುನ್ನತ ಸ್ಥಾನ ಅದು. ಹೀಗಾಗಿ ಅಮೆರಿಕ ಅಧ್ಯಕ್ಷರು ಅಂದಮೇಲೆ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಮಾತ್ರ ಹೆಚ್ಚು ಸುದ್ದಿಯಲ್ಲಿರುವುದು ಬರೀ ವಿವಾದಗಳಿಂದಲೇ.

ಅಷ್ಟಕ್ಕೂ ಇದು ಹೊರಗಿನವರ ಆರೋಪ ಎನ್ನಬಹುದಾದರೂ, ಅಮೆರಿಕ ಸರ್ಕಾರದ ಮಾಜಿ ಅಧಿಕಾರಿ ಒಲಿವಿಯಾ ಟ್ರಾಯೆ ಹೇಳುವಂತೆ ಟ್ರಂಪ್ ಜತೆ ಕೆಲಸ ಮಾಡುವುದು ಒಂದು ಭಯಾನಕ ಅನುಭವವಂತೆ.

ಆ ವ್ಯಕ್ತಿ ಕೊರೊನಾ ಸೋಂಕಿನಿಂದ ಅಮೆರಿಕವನ್ನು ರಕ್ಷಿಸಲು ತೋರುವ ಕಾಳಜಿಗಿಂತ, ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಬೇಕು ಎಂಬುದರ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ ಎಂದಿದ್ದಾರೆ. ಸತ್ಯ ಏನೆಂದರೆ ಟ್ರಂಪ್ ತನ್ನನ್ನು ಬಿಟ್ಟು ಬೇರೆ ಯಾರ ಬಗ್ಗೆಯೂ ಕಾಳಜಿ ವಹಿಸಲ್ಲ ಎಂದು ಒಲಿವಿಯಾ ಟ್ರಾಯೆ ಟ್ರಂಪ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಆರೋಪಕ್ಕೂ ಒಂದು ಸಮಜಾಯಿಷಿ ನೀಡಿದ್ದಾರೆ

ಈ ಆರೋಪಕ್ಕೂ ಒಂದು ಸಮಜಾಯಿಷಿ ನೀಡಿದ್ದಾರೆ

ಟ್ರಂಪ್ ತಮ್ಮ ವಿರುದ್ಧ ಕೇಳಿಬರುವ ಆರೋಪಗಳಿಗೆ ಸಹಜವಾಗಿ ಉತ್ತರಿಸುವಂತೆ, ಈ ಆರೋಪಕ್ಕೂ ಒಂದು ಸಮಜಾಯಿಷಿ ನೀಡಿದ್ದಾರೆ. ಒಲಿವಿಯಾ ಯಾರು ಅನ್ನೋದೆ ನನಗೆ ಗೊತ್ತಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಒಂದೇ ವಾಕ್ಯದಲ್ಲಿ ಈ ವಿವಾದಕ್ಕೂ ನನಗೂ ಸಂಬಂಧ ಇಲ್ಲವೆನ್ನುವಂತೆ ಮಾತನಾಡಿದ್ದಾರೆ.

ನಂಬಿಕೆ ಕಳೆದುಕೊಂಡ ಟ್ರಂಪ್, ಶಾಕ್ ಕೊಟ್ಟ ಕೊರೊನಾ..!

ಮಾಸ್ಕ್ ಧರಿಸುವ ವಿಚಾರದಲ್ಲೂ ವಾಕ್ಸಮರ

ಮಾಸ್ಕ್ ಧರಿಸುವ ವಿಚಾರದಲ್ಲೂ ವಾಕ್ಸಮರ

ಆದರೆ ಈ ಹಿಂದೆಯೂ ಹಲವು ಬಾರಿ ಟ್ರಂಪ್ ಕೊರೊನಾ ವಿಚಾರದಲ್ಲಿ ಟೀಕೆಗೆ ಗುರಿಯಾಗಿದ್ದನ್ನು ಗಮನಿಸಬಹುದು. ಅದರಲ್ಲೂ ಮಾಸ್ಕ್ ಧರಿಸುವ ವಿಚಾರದಲ್ಲಿ ಟ್ರಂಪ್ ಅಮೆರಿಕದಲ್ಲಿ ವಾಕ್ಸಮರವನ್ನೇ ನಡೆಸಿದ್ದರು.

ಕೊರೊನಾ ವೈರಸ್ ನಾಶ ಮಾಡುವ ಬಗ್ಗೆ ಮಾತನಾಡುತ್ತಾ, ಸೋಂಕು ನಿವಾರಕಗಳನ್ನು ದೇಹಕ್ಕೆ ಚುಚ್ಚಿ ಎಂದಿದ್ದರು. ಹೀಗೆ ಹೇಳುತ್ತಾ ಸಾಗಿದರೆ ಟ್ರಂಪ್‌ರ ಕೊರೊನಾ ಕುರಿತಾದ ಹೇಳಿಕಗಳ ವಿವಾದದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

  ವೈದ್ಯರು Reveal ಮಾಡ್ತಾರೆ Sushanth ಸಾವಿನ ರಹಸ್ಯ!!! | Oneindia Kannada
  ಅಮೆರಿಕದಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ

  ಅಮೆರಿಕದಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ

  ಜಗತ್ತಿನಲ್ಲಿ ಬಡ ರಾಷ್ಟ್ರಗಳು ಕೂಡ ಕೊರೊನಾ ಸೋಂಕಿನಿಂದ ಮುಕ್ತಿ ಪಡೆಯುವಲ್ಲಿ ಒಂದಷ್ಟು ಯಶಸ್ಸನ್ನು ಕಾಣುತ್ತಿವೆ. ಆದರೆ ಅಮೆರಿಕದ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಾ ಸಾಗಿದೆ. ಈಗಾಗಲೇ 69 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ಅಮೆರಿಕದಲ್ಲಿ ಕನ್ಫರ್ಮ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಆದರೂ ಅಮೆರಿಕದಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ. ದಿನದಿಂದ ದಿನಕ್ಕೆ ಪಿಡುಗು ಹೆಚ್ಚುತ್ತಲೇ ಸಾಗುತ್ತಿದೆ. ಇದು ಸಹಜವಾಗಿಯೇ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.

  ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

  English summary
  Vice President Pence's former lead coronavirus task force aide Olivia Troye slams Trump. And also alleges against trump that he said Covid thing is a good thing.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X