• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಲ್ಲ: ಟ್ರಂಪ್ ಪುತ್ರ

|

ವಾಷಿಂಗ್ಟನ್, ಅಕ್ಟೋಬರ್ 19: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಆಯ್ಕೆಯಾದರೆ ಭಾರತಕ್ಕೆ ಒಳ್ಳೆಯದಲ್ಲ ಅವರು ಚೀನಾದ ಪರ ಎಂದು ಡೊನಾಲ್‌ ಟ್ರಂಪ್ ಪುತ್ರ ಆರೋಪಿಸಿದ್ದಾರೆ.

ಜೋ ಬಿಡೆನ್ ವಿರುದ್ಧದ ಆರೋಪ ಸರಣಿಗಳ ಪುಸ್ತಕ ಬಿಡುಗಡೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಜೂನಿಯರ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಪ್ರತಿಸ್ಪರ್ಧಿ ಜೋ ಬಿಡನ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ ಬಿಡನ್ ಪುತ್ರ ಹಂಟರ್‌ಗೆ 150 ಕೋಟಿ ಯುಎಸ್ ಡಾಲರ್ ಹಣವನ್ನು ಚೀನಾದ ಕಂಪನಿ ನೀಡಿದೆ.

ಟ್ರಂಪ್ ಸೋತರೆ ಗಂಡಾಂತರ: ಜೈಲು ಸೇರಬಹುದು ಇಲ್ಲ ದೇಶ ಬಿಡಬಹುದು..!?

ಇದರ ಹಿಂದೆ ಯಾವುದೇ ಉದ್ದೇಶವಿಲ್ಲದೆ ಇಷ್ಟೊಂದು ಹಣವನ್ನು ಬಿಡನ್ ಪುತ್ರನಿಗೆ ನೀಡಲು ಸಾಧ್ಯವಿಲ್ಲ, ಚುನಾವಣೆ ಬಳಿಕ ಬಿಡನ್ ಚೀನಾದ ಬಗ್ಗೆ ಮೃದು ಧೋರಣೆ ತಾಳಲಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಈ ಮೃದು ಧೋರಣೆ ಭಾರತಕ್ಕೆ ಒಳ್ಳೆಯದಲ್ಲ, ವಿಶ್ವಕ್ಕೆ ಚೀನಾ ಎಷ್ಟು ಅಪಾಯಕಾರಿ ಎನ್ನುವುದನ್ನು, ಭಾರತೀಯರು ಹಾಗೂ ಅಮೆರಿಕನ್ನರು ಮಾತ್ರ ಅರಿಯಲು ಸಾಧ್ಯ ಹೀಗಾಗಿ ಜೋ ಬಿಡೆನ್ ಆಯ್ಕೆ ಭಾರತ ಹಾಗೂ ಅಮೆರಿಕ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಹೇಳಿದ್ದಾರೆ.

ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದ್ದು, ಚೀನಾದ ಕಂಪನಿಯಿಂದ ಬಿಡನ್ ಕುಟುಂಬಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬಂದಿದೆ ಎಂದು ಆರೋಪಿಸಲಾಗಿತ್ತು, ಇನ್ನೊಂದು ಹೆಜ್ಜೆ ಮುಂದುವರೆದ ಟ್ರಂಪ್, ರಷ್ಯಾ, ಉಕ್ರೇನ್ ಚೀನಾವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

English summary
Democratic presidential candidate Joe Biden is not good for India as he could be soft on China, US President Donald Trump's son said at an event to celebrate the ''success'' of his book that talks about graft allegations against the Bidens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X