ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ವಿರುದ್ಧ ವಾಗ್ದಂಡನೆ, ಮೇಲ್ಮನೆಯಲ್ಲೂ ಗೆಲುವು ಗ್ಯಾರಂಟಿ..?

|
Google Oneindia Kannada News

ಅಮೆರಿಕ ಅಧ್ಯಕ್ಷ ಹುದ್ದೆ ತೊರೆದರೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಂಕಷ್ಟಗಳು ತಪ್ಪುತ್ತಿಲ್ಲ. ಅಮೆರಿಕ ಸೆನೆಟ್‌ನಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಅಮೆರಿಕನ್ ಕಾಂಗ್ರೆಸ್ ಟ್ರಂಪ್ ವಿರುದ್ಧದ ವಾಗ್ದಂಡನೆ ಅನುಮೋದಿಸಿದೆ. ಇದೀಗ ಸೆನೆಟ್‌ನಲ್ಲಿ ಟ್ರಂಪ್ ಭವಿಷ್ಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾರತದಲ್ಲಿ ಮೇಲ್ಮನೆ ರಾಜ್ಯಸಭೆ ರೀತಿ, ಅಮೆರಿಕದಲ್ಲಿ ಸೆನೆಟ್‌ ಇದೆ. ಭಾರತದಲ್ಲಿ ಮೇಲ್ಮನೆ ರಾಜ್ಯಸಭೆಗಿಂತ ಕೆಳಮನೆ ಲೋಕಸಭೆ ಶಕ್ತಿಶಾಲಿಯಾಗಿರುತ್ತದೆ.

ಆದರೆ ಅಮೆರಿಕದಲ್ಲಿ ಇದೊಂಚೂರು ಭಿನ್ನ. ಕೆಳಮನೆ ಅಮೆರಿಕನ್ ಕಾಂಗ್ರೆಸ್ ಪ್ರಬಲವಾಗಿದ್ದರೂ, ಸೆನೆಟ್‌ ಅಂತಿಮವಾಗಿರುತ್ತದೆ. ಇದು ಅಮೆರಿಕದ ಮೇಲ್ಮನೆಗಿರುವ ಶಕ್ತಿ. ಮೇಲ್ಮನೆ ಸೆನೆಟ್‌ನಲ್ಲೇ ಈಗ ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಚಾಲನೆಯಲ್ಲಿದೆ. ಈಗಾಗಲೇ ಕೆಳಮನೆ 'ಅಮೆರಿಕನ್ ಕಾಂಗ್ರೆಸ್‌'ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ಅನುಮೋದನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನೆ 'ಸೆನೆಟ್' ಕೂಡ ಟ್ರಂಪ್ ವಿರುದ್ಧದ ಇಂಪೀಚ್‌ಮೆಂಟ್‌ಗೆ ಮನ್ನಣೆ ನೀಡಿದರೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಸಂಸತ್ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ.

ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ? ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?

ಅಮೆರಿಕದ ಸೆನೆಟ್ ಬಲಾಬಲ ಹೇಗಿದೆ..?

ಅಮೆರಿಕದ ಸೆನೆಟ್ ಬಲಾಬಲ ಹೇಗಿದೆ..?

ಅಮೆರಿಕದ ಸೆನೆಟ್‌ಗೆ 100 ಸದಸ್ಯರ ಬಲವಿದೆ. 2020ರ ನವೆಂಬರ್ 3ರಂದು ನಡೆದಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ 50 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಮಾಕ್ರಟಿಕ್ ಪಕ್ಷ 48 ಸ್ಥಾನ ಗೆದ್ದಿದೆ. ಇನ್ನುಳಿದಂತೆ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಅಮೆರಿಕನ್ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಆದರೆ ಬಹುಮತಕ್ಕೆ 51 ಸ್ಥಾನ ಅತ್ಯಗತ್ಯ. ಈಗಿನ ಪರಿಸ್ಥಿತಿ ನೋಡಿದರೆ ಸುಮಾರು 6 ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯರು ಕೂಡ ಟ್ರಂಪ್ ವಿರುದ್ಧ ಮತ ಹಾಕುವ ಸಾಧ್ಯತೆ ಇದೆ. ಹೀಗಾಗಿ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಸುಲಭ ಹಾಗೂ ಸರಳವಾಗಿ ನಡೆಯಲಿದೆ ಎನ್ನಲಾಗುತ್ತಿದೆ. ಟ್ರಂಪ್ ವಿರುದ್ಧ 60 ಮತ ಚಲಾವಣೆಯಾದರೂ ಅಚ್ಚರಿ ಬೇಕಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಉಪರಾಷ್ಟ್ರಪತಿ ಅಧ್ಯಕ್ಷತೆ ವಹಿಸುತ್ತಾರೆ..!

ಉಪರಾಷ್ಟ್ರಪತಿ ಅಧ್ಯಕ್ಷತೆ ವಹಿಸುತ್ತಾರೆ..!

ಹೌದು, ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಸಂಸದೀಯ ವ್ಯವಸ್ಥೆ ಭಾಗಶಃ ಒಂದೇ ರೀತಿ ಇರುತ್ತದೆ. ಅಥವಾ ಸಾಮ್ಯತೆ ಇರುತ್ತದೆ. ಇದೇ ರೀತಿ ಅಮೆರಿಕ-ಭಾರತ ಸಂಸತ್‌ನ ನಡುವೆ ವ್ಯತ್ಯಾಸಗಳು ತೀರಾ ಭಿನ್ನವಾಗಿಲ್ಲ. ಭಾರತದಲ್ಲಿ ಮೇಲ್ಮನೆ ರಾಜ್ಯಸಭೆಯ ರೀತಿ ಅಮೆರಿಕದಲ್ಲಿ ಸೆನೆಟ್ ಇದ್ದು, ಇಲ್ಲಿ ಕೂಡ ಸ್ಪೀಕರ್ ಆಯ್ಕೆ ಸುಲಭವಾಗಿರುತ್ತದೆ. ಭಾರತದಲ್ಲಿ ಹೇಗೆ ಉಪರಾಷ್ಟ್ರಪತಿಗಳು ರಾಜ್ಯಸಭೆ ಅಧ್ಯಕ್ಷತೆ ವಹಿಸುತ್ತಾರೋ, ಅದೇ ರೀತಿ ಅಮೆರಿಕದಲ್ಲಿ ಕೂಡ ಸೆನೆಟ್‌ನ ಅಧ್ಯಕ್ಷತೆಯನ್ನು ಉಪರಾಷ್ಟ್ರಪತಿಯೇ ವಹಿಸುತ್ತಾರೆ. ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಸದ್ಯ ಅಧ್ಯಕ್ಷತೆ ವಹಿಸಿದ್ದಾರೆ.

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಬೇಕೆ ಬೇಕು ನ್ಯಾಯ ಬೇಕು, ಅನ್ಯಾಯ ಅನ್ಯಾಯ ಟ್ರಂಪ್‌ಗೆ ಅನ್ಯಾಯ ಅಂತೆಲ್ಲಾ ಟ್ರಂಪ್ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರಚಾಟ ನಡೆಸುತ್ತಾ ಅಮೆರಿಕದ ಸಂಸತ್ ಸಭೆಗಳು ನಡೆಯುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಹಿಂಸಾಚಾರ ನಡೆಯುವುದಕ್ಕೆ ಮುನ್ನ ಟ್ರಂಪ್ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎಂಬ ಆರೋಪ ಅಮೆರಿಕ ಸಂಸದರದ್ದು. ಈ ಕಾರಣಕ್ಕೆ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಯಲಿ ಎಂದು ಪಟ್ಟು ಹಿಡಿದಿದ್ದರು ಡೆಮಾಕ್ರಟಿಕ್ ಪಕ್ಷದ ಸದಸ್ಯರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷ ರಿಪಬ್ಲಿಕನ್ ಪಾರ್ಟಿ ಸದಸ್ಯರ ಬೆಂಬಲ ಕೂಡ ಇತ್ತು. ಕೆಳಮನೆಯಲ್ಲಿ ಗೆದ್ದು, ಈಗ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ಹೋರಾಟ ಮುಂದುವರಿಸಲಾಗಿದೆ.

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು.

English summary
American Senate starts the process of trump impeachment trial. Few of Trump party members may stand against Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X