ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ’: ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!

|
Google Oneindia Kannada News

ಟ್ರಂಪ್ ಎಡವಟ್ಟು ಮಾಡ್ಕೊಂಡಿದ್ದಾರೆ. ಬೇಕಂತಲೋ ಅಥವಾ ಗೊತ್ತಿಲ್ಲದೆಯೋ ಅಮೆರಿಕ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ ಮಾಡಿದ್ದಾರೆ. ಹೀಗಾಗಿ ಟ್ರಂಪ್ ವಿರುದ್ಧ ಎಲ್ಲರೂ ರೊಚ್ಚಿಗೆದ್ದಿದ್ದಾರೆ. ಪಕ್ಷಾತೀತವಾಗಿ ಟ್ರಂಪ್‌ರ ವಿರುದ್ಧ ರಣಕಹಳೆ ಮೊಳಗಿದೆ. ಇದೀಗ ಟ್ರಂಪ್ ಬಂಟನೇ ಅವರನ್ನು ಕಿತ್ತೊಗೆಯಿರಿ ಎಂದಿದ್ದಾನೆ. ಅಂದಹಾಗೆ ಟ್ರಂಪ್ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡಿದ್ದ ವೈಟ್‌ಹೌಸ್‌ನ ಮಾಜಿ ಮುಖ್ಯಸ್ಥ ಜಾನ್ ಕೆಲ್ಲಿ ಡೊನಾಲ್ಡ್ ಟ್ರಂಪ್ ಕಿತ್ತೊಗೆಯಲು ಆಗ್ರಹಿಸಿದ್ದಾರೆ.

ಟ್ರಂಪ್ ಬೆಂಬಲಿಗರು ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಅಮೆರಿಕ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ ಮಾಡಿದೆ. ಟ್ರಂಪ್ ಮಾಡಿದ ಎಡವಟ್ಟಿನಿಂದಲೇ ಇಂತಹ ಕೃತ್ಯ ನಡೆದಿದ್ದು, ವೈಟ್‌ಹೌಸ್‌ನಿಂದ ಟ್ರಂಪ್ ಒದ್ದೋಡಿಸಲು ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಜಾರಿಗೊಳಿಸಬೇಕು ಎಂದು ಜಾನ್ ಕೆಲ್ಲಿ ಆಗ್ರಹಿಸಿದ್ದಾರೆ. ಅಮೆರಿಕದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಇತಿಹಾಸವಿದೆ. ಆದರೆ ನಮ್ಮ ದೇಶ ಈಗ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಒಂದಾಗಬೇಕು ಎಂದು ಕೆಲ್ಲಿ ಒಗ್ಗಟ್ಟಿನ ಪಾಠ ಮಾಡಿದ್ದಾರೆ. ಹೀಗೆ ಒಂದು ಕಾಲದ ಟ್ರಂಪ್ ಜೊತೆಗಾರ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಅಮೆರಿಕ ಸಂಸತ್ ಮೇಲೆ ದಾಳಿ, ಬ್ರಿಟನ್ ಜೊತೆಗೂ ಯುದ್ಧ ನಡೆದಿತ್ತು..!ಅಮೆರಿಕ ಸಂಸತ್ ಮೇಲೆ ದಾಳಿ, ಬ್ರಿಟನ್ ಜೊತೆಗೂ ಯುದ್ಧ ನಡೆದಿತ್ತು..!

‘ಆಗತ್ತೋ ಬಿಡುತ್ತೋ, ಪ್ರಯತ್ನ ಮಾಡಿ’

‘ಆಗತ್ತೋ ಬಿಡುತ್ತೋ, ಪ್ರಯತ್ನ ಮಾಡಿ’

ಅಮೆರಿಕದ ಸುದ್ದಿ ಮಾದ್ಯಮವೊಂದರ ಜೊತೆ ಮಾತನಾಡಿರುವ ಜಾನ್ ಕೆಲ್ಲಿ, ಅಧ್ಯಕ್ಷ ಟ್ರಂಪ್‌ರನ್ನ ಓಡಿಸಲು 25ನೇ ತಿದ್ದುಪಡಿಯನ್ನು ಜಾರಿಗೆ ತರಲು ಆಗುತ್ತೋ ಇಲ್ಲವೋ ಗೊತ್ತಿ. ಆದರೆ ನಾವು ಪ್ರಯತ್ನ ಪಡಲೇಬೇಕು. ಏಕೆಂದರೆ ಇದು ಸಂದಿಗ್ಧ ಸಮಯ. ಹೀಗಾಗಿ ಸಭೆ ಕರೆದು ಈ ವಿಚಾರದ ಬಗ್ಗೆ ನಾವು ಚರ್ಚಿಸಬೇಕಿದೆ ಜಾನ್ ಕೆಲ್ಲಿ ಹೇಳಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ವಿರುದ್ಧ ಹೊತ್ತಿರುವ ಆಕ್ರೋಶದ ಬೆಂಕಿಗೆ ಸ್ವತಃ ಟ್ರಂಪ್‌ ಪಕ್ಷದ ನಾಯಕರೇ ಪೆಟ್ರೋಲ್ ಸುರಿಯುತ್ತಿದ್ದಾರೆ.

ಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿ

ಸ್ಪೀಕರ್ ಪೆಲೋಸಿ ಹೇಳಿದ್ದೇನು..?

ಸ್ಪೀಕರ್ ಪೆಲೋಸಿ ಹೇಳಿದ್ದೇನು..?

ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತುಹಾಕಲು 25ನೇ ತಿದ್ದುಪಡಿಯನ್ನು ಜಾರಿಗೆ ತರುವಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಸಂಪುಟಕ್ಕೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆ ನೀಡಿದ್ದಾರೆ. ಒಂದು ವೇಳೆ ಟ್ರಂಪ್ ಪದಚ್ಯುತಗೊಳಿಸಲು 25ನೇ ತಿದ್ದುಪಡಿ ಹೇರದಿದ್ದರೆ ಅಧ್ಯಕ್ಷರ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದು ಪೆಲೋಸಿ ವಾರ್ನಿಂಗ್ ಕೊಟ್ಟಿದ್ದಾರೆ. 'ತಕ್ಷಣ 25ನೇ ತಿದ್ದುಪಡಿ ಜಾರಿಗೆ ತರುವ ಮೂಲಕ ಅಧ್ಯಕ್ಷರನ್ನು ಪದಚ್ಯುತಗೊಳಿಸಬೇಕು ಎಂಬ ಡೆಮಾಕ್ರಟಿಕ್‌ನ ಸೆನೆಟ್ ಸದಸ್ಯರ ಬೇಡಿಕೆಗೆ ನಾನು ದನಿಗೂಡಿಸುತ್ತೇನೆ. ಉಪಾಧ್ಯಕ್ಷರು ಮತ್ತು ಸಂಪುಟವು ಕ್ರಮ ತೆಗೆದುಕೊಳ್ಳದೆ ಹೋದರೆ ನನ್ನ ಕ್ಷೇತ್ರ ಹಾಗೂ ಅಮೆರಿಕದ ಜನರ ಅಗಾಧ ಭಾವನೆಗೆ ಅನುಗುಣವಾಗಿ ವಾಗ್ದಂಡನೆ ಪ್ರಕ್ರಿಯೆಗೆ ಮುಂದಾಗಲು ಕಾಂಗ್ರೆಸ್ ಸಿದ್ಧವಾಗಬಹುದು' ಎಂದು ಎಚ್ಚರಿಕೆ ನೀಡಿದ್ದಾರೆ ಸ್ಪೀಕರ್ ನ್ಯಾನ್ಸಿ ಪೆಲೋಸಿ.

ಉಪಾಧ್ಯಕ್ಷನ ಬೆಂಬಲ ಬಹುಮುಖ್ಯ

ಉಪಾಧ್ಯಕ್ಷನ ಬೆಂಬಲ ಬಹುಮುಖ್ಯ

ಅಧಿಕಾರದಿಂದ ಕೆಳಗಿಳಿಯಲು ಡೊನಾಲ್ಡ್ ಟ್ರಂಪ್ ಮುಂದಾಗದ ಹಿನ್ನೆಲೆಯಲ್ಲಿ ಟ್ರಂಪ್‌ರನ್ನ ಬಲವಂತವಾಗಿ ಪದಚ್ಯುತಗೊಳಿಸಲು 25ನೇ ತಿದ್ದುಪಡಿ ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಈ ಪ್ರಕ್ರಿಯೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಸಂಪುಟದ ಬಹುಸಂಖ್ಯೆಯ ಸದಸ್ಯರು ಮತ ಚಲಾಯಿಸಬೇಕು. ಇನ್ನು ಇದಕ್ಕೂ ಮುನ್ನ ಡೆಮಾಕ್ರಟಿಕ್ ಸೆನೆಟ್ ಮುಖಂಡ ಚುಕ್ ಷೂಮರ್ ಕೂಡ 25ನೇ ತಿದ್ದುಪಡಿ ಹೇರುವಂತೆ ಪೆನ್ಸ್ ಅವರನ್ನು ಒತ್ತಾಯಿಸಿದ್ದರು. ಇದೀಗ ಟ್ರಂಪ್ ವಿರುದ್ಧ ಸ್ವಪಕ್ಷೀಯರೇ ರಣಕಹಳೆ ಮೊಳಗಿಸಿದ್ದಾರೆ.

ಟ್ರಂಪ್ ಕಿತ್ತೊಗೆಯಲು 25ನೇ ತಿದ್ದುಪಡಿ ತನ್ನಿ: ನ್ಯಾನ್ಸಿ ಒತ್ತಾಯಟ್ರಂಪ್ ಕಿತ್ತೊಗೆಯಲು 25ನೇ ತಿದ್ದುಪಡಿ ತನ್ನಿ: ನ್ಯಾನ್ಸಿ ಒತ್ತಾಯ

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಎಲೆಕ್ಟೊರಲ್ ಕಾಲೇಜ್ ಮತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಗುಂಪು, ಅಮೆರಿಕದ ಸಂಸತ್ ಇರುವ 'ಕ್ಯಾಪಿಟಲ್ ಹಿಲ್' ಕಟ್ಟಡಕ್ಕೆ ನುಗ್ಗಿ ಹಿಂಸಾಚಾರವನ್ನ ನಡೆಸಿತ್ತು. ಟ್ರಂಪ್ ಕುಮ್ಮಕ್ಕಿನಂತೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಸುಗಮ ಅಧಿಕಾರ ಹಸ್ತಾಂತರ ನಡೆಸಲು ಒಪ್ಪಿಕೊಂಡಿದ್ದರೂ, ಗಲಭೆ ಘಟನೆಯಿಂದ ಅಸಮಾಧಾನಗೊಂಡಿರುವ ಸಂಸದರು ಟ್ರಂಪ್ ನಡೆ ಬಗ್ಗೆ ಅನುಮಾನ ಇರುವುದರಿಂದ ಟ್ರಂಪ್ ಪದಚ್ಯುತಿ ಮಾರ್ಗ ಸೂಕ್ತವಾಗಿದೆ ಎನ್ನುತ್ತಿದ್ದಾರೆ.

English summary
Trump's ex-White House chief of staff John Kelly supports using 25th Amendment to remove the President from his post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X