ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಜೊತೆ ಎಲ್ಲಾ ರೀತಿಯ ಸಂಬಂಧ ಕಳೆದುಕೊಳ್ಳಲು ಮುಂದಾದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 15: 'ಕೊರೊನಾ ವೈರಸ್ ಬಾವುಲಿಯಿಂದ ಬಂತೋ, ಲ್ಯಾಬ್‌ನಿಂದ ಬಂತೋ ನನಗೆ ಗೊತ್ತಿಲ್ಲ, ಆದರೆ ಚೀನಾದಿಂದ ಬಂದಿರೋದಂತೂ ಸತ್ಯ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ವಿಶ್ವದಾದ್ಯಂತ ಕೊರೊನಾವೈರಸ್ ನಿಯಂತ್ರಿಸುವಲ್ಲಿ ಚೀನಾ ಸೋತಿದೆ. ಕೊರೊನಾ ವೈರಸ್ 2019ರಲ್ಲಿಯೇ ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡಿದೆ ನಿಧಾನವಾಗಿ ಬೀಜಿಂಗ್ ,ವಾಷಿಂಗ್ಟನ್ ಹೀಗೆ 190ಕ್ಕೂ ಹೆಚ್ಚಿನ ದೇಶಗಳಿಗೆ ಹರಡಿ ಲಕ್ಷಾಂತರ ಮಂದಿಯ ಪ್ರಾಣ ಕಸಿದಿದೆ.

ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್

ನನಗೆ ಚೀನಾದ ಬಗ್ಗೆ ತುಂಬಾ ನಿರಾಸೆ ಇದೆ ಎಂದು ಫಾಕ್ಸ್ ಬಿಜಿನೆಸ್ ನೆಟ್‌ವರ್ಕ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದರು.

ಚೀನಾದ ಜೊತೆ ಅತಿ ದೊಡ್ಡ ಟ್ರೇಡ್ ಡೀಲ್ ಮಾಡಿಕೊಂಡಿದ್ದೆವು

ಚೀನಾದ ಜೊತೆ ಅತಿ ದೊಡ್ಡ ಟ್ರೇಡ್ ಡೀಲ್ ಮಾಡಿಕೊಂಡಿದ್ದೆವು

ಚೀನಾದ ಜೊತೆ ಅತಿ ದೊಡ್ಡ ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡಿದ್ದೆವು. ಮೊದಲ ಹಂತದ ಪ್ರಕ್ರಿಯೆ ಎಲ್ಲ ಮುಕ್ತಾಯಗೊಂಡಿತ್ತು. ಆದರೆ ಈಗ ಹೊಸದಾಗಿ ಒಪ್ಪಂದವನ್ನು ಮಾಡಿಕೊಳ್ಳಲು ಚೀನಾ ಮುಂದೆ ಬಂದಿದೆ ಆದರೆ ಕೊರೊನಾ ಹರಡಿದ ಬಳಿಕ ನಮ್ಮ ಸಂಬಂಧ ಮೊದಲಿನಂತಿಲ್ಲ ಎಂದು ಹೇಳಿದರು.

ಜನವರಿಯಲ್ಲಿ ಬೀಜಿಂಗ್ ಜೊತೆ ಒಪ್ಪಂದ

ಜನವರಿಯಲ್ಲಿ ಬೀಜಿಂಗ್ ಜೊತೆ ಒಪ್ಪಂದ

ಜನವರಿಯಲ್ಲಿ ಬೀಜಿಂಗ್ ಜೊತೆ ಅಮೆರಿಕ ಒಪ್ಪಂದ ಮಾಡಿಕೊಂಡಿತ್ತು ಅದು 200 ಮಿಲಿಯನ್ ಡಾಲರ್ ಒಪ್ಪಂದವಾಗಿತ್ತು. ಟ್ರಂಪ್ ಅವರು ಕೊರೊನಾ ವೈರಸ್‌ನಿಂದ ಮುಕ್ತಿ ಹೊಂದುವುದು ಹೇಗೆ ಅಥವಾ ಕೊರೊನಾ ಹೇಗೆ ಉದ್ಭವವಾಯಿತು ಎನ್ನುವುದಕ್ಕಿಂತ ಹೆಚ್ಚಾಗಿ ಅದು ಎಲ್ಲಿಂದ ಬಂತು ಎನ್ನುವುದರ ಕುರಿತೇ ಮಾತನಾಡಿದರು.

ಹೊಸ ಒಪ್ಪಂದ ಮಾಡಿಕೊಳ್ಳಿ

ಹೊಸ ಒಪ್ಪಂದ ಮಾಡಿಕೊಳ್ಳಿ

ಬೀಜಿಂಗ್‌ನ ಸ್ಥಳೀಯ ಪತ್ರಿಕೆಗಳು ಹೇಳುವ ಪ್ರಕಾರ ಬೀಜಿಂಗ್ ಮತ್ತೊಂದು ಒಪ್ಪಂದವನ್ನು ಮಾಡಿಕೊಳ್ಳಲು ತಯಾರಿದೆ. ಆದರೆ ನನಗೆ ಅದರ ಕುರಿತು ಇಂಟರೆಸ್ಟ್ ಇರಬೇಕಲ್ಲ ಎಂದು ಟ್ರಂಪ್ ಖಾರವಾಗಿ ನುಡಿದಿದ್ದಾರೆ.

ವೈರಸ್ ಹೇಗೆ ಬಂತು ಬೇಕಾಗಿಲ್ಲ, ಎಲ್ಲಿಂದ ಬಂತು ಅದು ಮುಖ್ಯ

ವೈರಸ್ ಹೇಗೆ ಬಂತು ಬೇಕಾಗಿಲ್ಲ, ಎಲ್ಲಿಂದ ಬಂತು ಅದು ಮುಖ್ಯ

ಕೊರೊನಾ ವೈರಸ್ ಕುರಿತು ನನ್ನ ಬಳಿ ಸಾಕಷ್ಟು ಮಾಹಿತಿಗಳಿವೆ. ಕೊರೊನಾ ಬಾವುಲಿಯಿಂದಲೇ ಬಂದಿರಬಹುದು ಅಥವಾ ವುಹಾನ್ ಲ್ಯಾಬ್‌ನಿಂದಲೇ ಬಂದಿರಬಹದು ಆದರೆ ಬಂದಿರುವುದು ಮಾತ್ರ ಚೀನಾದಿಂದ ಎನ್ನುವುದು ಕೂಡ ಅಷ್ಟೇ ಸತ್ಯ ಎಂದಿದ್ದಾರೆ.

English summary
US President Donald Trump on Thursday said he was very disappointed in China over its failure to contain the novel coronavirus, saying the worldwide pandemic cast a pall over his U.S.-China trade deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X