• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಮಾಸ್ಕ್ ಪಾಲಿಟಿಕ್ಸ್’ಗೆ ಅಮೆರಿಕನ್ನರು ಹೈರಾಣ..!

By ಅನಿಕೇತ್
|

ಅಮೆರಿಕದಲ್ಲಿ 'ಮಾಸ್ಕ್ ಪಾಲಿಟಿಕ್ಸ್' ಮುಂದುವರಿದಿದೆ. ಅಧ್ಯಕ್ಷ ಟ್ರಂಪ್ ಹಾಗೂ ಡೆಮಾಕ್ರಟಿಕ್ ಸದಸ್ಯರ ನಡುವೆ ಮಾಸ್ಕ್ ವಿಚಾರದಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ. ಈ ಹೊತ್ತಲ್ಲೇ ತನ್ನ ದೇಶದ ಪ್ರಜೆಗಳಿಗೆ ಮಾಸ್ಕ್ ಹಾಕುವಂತೆ ಒತ್ತಡ ಹೇರುವುದಿಲ್ಲ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

   BBMP commissioner Anil Kumar transferred | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಅಮೆರಿಕದಲ್ಲಿ ಸೋಂಕಿನ ಸುಳಿಗಾಳಿ ಭಾರಿ ಪ್ರಮಾಣದಲ್ಲಿ ಹಬ್ಬಿದೆ. ಊಹೆಗೂ ನಿಲುಕದಷ್ಟು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಅಲ್ಲದೆ ನಿತ್ಯ ಸುಮಾರು 70 ಸಾವಿರ ಹೊಸ ಕೇಸ್‌ಗಳು ಕನ್ಫರ್ಮ್ ಆಗುತ್ತಿವೆ. ಈ ಹೊತ್ತಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ನಿಂದ ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯ. ಆದರೆ ಟ್ರಂಪ್ ಇದೆರಡನ್ನೂ ವಿರೋಧಿಸುತ್ತಾ ಬಂದಿದ್ದಾರೆ.

   ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!

   ಸೋಂಕು ತೀವ್ರವಾಗಿ ಹಬ್ಬುತ್ತಿರುವಾಗಲೇ ಲಾಕ್‌ಡೌನ್ ನಿಯಮವನ್ನ ಟ್ರಂಪ್ ಸಡಿಲಗೊಳಿಸಿದ್ದರು. ಹೋಟೆಲ್, ಪಾರ್ಕ್, ಬೀಚ್, ಮಾಲ್ ಹೀಗೆ ಎಲ್ಲವನ್ನೂ ಒಟ್ಟಿಗೆ ತೆರೆಯಲು ಅನುಮತಿ ನೀಡಿದ್ದರು. ಇದು ದೊಡ್ಡ ಎಡವಟ್ಟಿಗೆ ಕಾರಣವಾಗಿ, ಜನರು ಸಾಮಾಜಿಕ ಅಂತರ ಮರೆತು ಸೋಂಕನ್ನು ಮತ್ತಷ್ಟು ಹಬ್ಬಿಸಿದ್ದಾರೆ. ಅಮೆರಿಕದಲ್ಲಿ ಸೋಂಕಿನ ಮಹಾಸ್ಫೋಟ ಸಂಭವಿಸಿದೆ. ನಿತ್ಯ ಸಾವಿರಾರು ಜನರಿಗೆ ಸೋಂಕು ತಗುಲುತ್ತಿದ್ದು, ಲಕ್ಷಾಂತರ ಜನ ಪ್ರಾಣಬಿಟ್ಟಿದ್ದಾರೆ.

   ಈ ಹೊತ್ತಲ್ಲಿ ಮಾಸ್ಕ್ ತೊಡುವುದು ಅನಿವಾರ್ಯ ಅಂತಾ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೆ ಇದನ್ನು ಒಪ್ಪಲು ಸಿದ್ಧವಿಲ್ಲದ ಟ್ರಂಪ್, ತಾನು ಮಾಸ್ಕ್ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಅಂತಾ ಖಡಕ್ ಆಗಿ ಹೇಳಿದ್ದಾರೆ. ಈ ಹಿಂದೆ ಸ್ವತಃ ತಾವೇ ಮಾಸ್ಕ್ ತೊಡದೆ ಹಠ ಮಾಡುತ್ತಿದ್ದರು, ಆದರೆ ಕಳೆದ ವಾರವಷ್ಟೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ತೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದರು.

   ಟ್ರಂಪ್ ವಿರುದ್ಧ ಸ್ವಪಕ್ಷೀಯರಲ್ಲೇ ಮುನಿಸು..?

   ಒಂದ್ಕಡೆ ಅಧ್ಯಕ್ಷ ಟ್ರಂಪ್ ಕೊರೊನಾ ನಿಯಂತ್ರಣ ವಿಚಾರದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು ಸ್ವಪಕ್ಷಿಯರಲ್ಲೇ ಬೇಸರ ಮೂಡಿಸುತ್ತಿವೆ. ಹೀಗಾಗಿ ರಿಪಬ್ಲಿಕನ್ ಪಕ್ಷದೊಳಗೆ ಟ್ರಂಪ್ ವಿರುದ್ಧ ಮುನಿಸು ಭುಗಿಲೆದ್ದಿದೆ. ಏತನ್ಮಧ್ಯೆ ಟ್ರಂಪ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ ರಾಜಕೀಯ ಕಾರಣ ಹಾಗೂ ಬೆಂಬಲಿಗರ ಮನವೊಲಿಸಲು ಟ್ರಂಪ್ ಈ ರೀತಿ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳಿಗೆ ತಕ್ಕಂತೆ ಟ್ರಂಪ್ ವರ್ತಿಸುತ್ತಿದ್ದಾರೆ. ಮತ್ತೊಂದ್ಕಡೆ ಅಮೆರಿಕದಲ್ಲಿ ರಾಜ್ಯಗಳಿಗೆ ಪೂರ್ಣ ಸ್ವಾತಂತ್ರ್ಯವಿದ್ದು, ಇದನ್ನೇ ಬಳಸಿಕೊಂಡು ಬಹುತೇಕ ರಾಜ್ಯಗಳ ಗವರ್ನರ್‌ಗಳು ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ. ಈ ಮೂಲಕ ಟ್ರಂಪ್‌ಗೆ ತಿರುಗೇಟು ನೀಡುತ್ತಿದ್ದಾರೆ. ಹೀಗೆ ಮಾಸ್ಕ್ ಕಡ್ಡಾಯಗೊಳಿಸಿದ ಗವರ್ನರ್‌ಗಳ ಪೈಕಿ ಟ್ರಂಪ್‌ರ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾಗಿರುವ ರಾಜ್ಯಪಾಲರು ಕೂಡ ಸೇರಿರುವುದು ಅಚ್ಚರಿಯ ಸಂಗತಿ.

   ಕಡೆಗೂ ಮಾಸ್ಕ್ ಧರಿಸಿದ ಡೊನಾಲ್ಡ್ ಟ್ರಂಪ್, ಉಡಾಫೆ ಇನ್ನಿಲ್ಲ

   ಡಾ. ಫೌಸಿ VS ಡೊನಾಲ್ಡ್ ಟ್ರಂಪ್..!

   ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್ ವಿರುದ್ಧ ಅದೆಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ ಅಂದ್ರೆ, ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೊನಿ ಫೌಸಿ ನೇರಾನೇರ ಅಧ್ಯಕ್ಷ ಟ್ರಂಪ್ ವರ್ತನೆಯನ್ನ ಖಂಡಿಸುತ್ತಿದ್ದಾರೆ. ಇದು 1918 ಸ್ಪ್ಯಾನಿಶ್ ಫ್ಲೂಗಿಂತಲೂ ಕೆಟ್ಟ ಪರಿಸ್ಥಿತಿ ಸೃಷ್ಟಿಸಲಿದೆ ಎನ್ನುತ್ತಿದ್ದಾರೆ. ಅಲ್ಲದೆ ಕೊರೊನಾ ನಿಯಂತ್ರಣದಲ್ಲಿ ಶ್ವೇತಭವನದ ನಿರ್ಧಾರಗಳು ದೊಡ್ಡ ಆಪತ್ತು ತರಲಿವೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದ್ಕಡೆ ಟ್ರಂಪ್ ತಂಡದಲ್ಲಿರುವ ಅಧಿಕಾರಿಗಳು ಡಾ. ಫೌಸಿ ಅವರನ್ನು ಇದೇ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಡಾ. ಫೌಸಿ, ವಾಸ್ತವಾಂಶಗಳನ್ನು ನೇರವಾಗಿ ತಿಳಿಸುತ್ತಿದ್ದಾರೆ. ಇಷ್ಟೆಲ್ಲಾ ಸಲಹೆ, ಸೂಚನೆ ನೀಡಿದ್ದರೂ ಟ್ರಂಪ್ ಮಾತ್ರ ಅದನ್ನು ಪಾಲಿಸಲು ತಯಾರಿಲ್ಲ. ಇದು ಮುಂಬರುವ ಚುನಾವಣೆಯಲ್ಲಿ ಟ್ರಂಪ್‌ ಗೆಲುವಿಗೆ ಅಡ್ಡಿಯಾದರೂ ಆಶ್ಚರ್ಯವಿಲ್ಲ.

   English summary
   US President Donald Trump refused to order Masks compulsory to control the spread of deadly Coronavirus also wearing of face coverings has become highly politicized in United States Of America.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X