ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ಟಾಕ್ -ಒರಾಕಲ್‌ ಒಪ್ಪಂದವನ್ನು ಪ್ರಶ್ನಿಸಿದ ಡೊನಾಲ್ಡ್‌ ಟ್ರಂಪ್: ಶೇ.100ರಷ್ಟು ಆಗಿರಬೇಕು ಎಂದು ತಾಕೀತು

|
Google Oneindia Kannada News

ಚೀನಾದ ಬೈಟ್‌ಡ್ಯಾನ್ಸ್‌ ಒಡೆತನದ ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆಯನ್ನು ತನ್ನದಾಗಿಸಿಕೊಳ್ಳಲು ಒರಾಕಲ್ ಕಾರ್ಪ್ ಈಗಾಗಲೇ ಬಹುತೇಕ ಅಂತಿಮ ಹಂತದ ಮಾತುಕತೆಯವರೆಗೆ ತಲುಪಿದೆ. ಅಮೆರಿಕಾ ಅಷ್ಟೇ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಖರೀದಿಸಲು ಗಂಭೀರವಾಗಿ ಪರಿಗಣಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಒರಾಕಲ್‌ನೊಂದಿಗಿನ "ವಿಶ್ವಾಸಾರ್ಹ ತಂತ್ರಜ್ಞಾನ ಒಪ್ಪಂದ" ದ ಭಾಗವಾಗಿ ಟಿಕ್‌ಟಾಕ್‌ನ ಅಮೆರಿಕಾ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಪಾಲನ್ನು ಉಳಿಸಿಕೊಳ್ಳುವ ಚೀನಾದ ಟೆಕ್ ಸಂಸ್ಥೆ ಬೈಟ್‌ಡಾನ್ಸ್‌ನ ಯೋಜನೆಗಳನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ.

ಟಿಕ್‌ಟಾಕ್ ಜೊತೆಗೆ ಮತ್ತೊಂದು ಚೀನಾ ಕಂಪನಿಯ ಮಾರಾಟದ ಮಾತುಕತೆಟಿಕ್‌ಟಾಕ್ ಜೊತೆಗೆ ಮತ್ತೊಂದು ಚೀನಾ ಕಂಪನಿಯ ಮಾರಾಟದ ಮಾತುಕತೆ

ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆಯ ಅಲ್ಪ ಪಾಲನ್ನು ಮಾತ್ರ ಒರಾಕಲ್‌ಗೆ ನೀಡುವ ವರದಿಯ ಪ್ರಸ್ತಾಪದ ಬಗ್ಗೆ ಕೇಳಿದಾಗ ಟ್ರಂಪ್ '' ನಾನು ಕಲ್ಪನಾತ್ಮಕವಾಗಿ ನಿಮಗೆ ಏನು ಹೇಳಲು ಇಷ್ಟಪಡುವುದಿಲ್ಲ. ನಾನು ಯಾವುದಕ್ಕೂ ಸೈನ್ ಆಪ್ ಮಾಡಿಲ್ಲ. ಅವರು ನಾಳೆ ಬೆಳಿಗ್ಗೆ ನನಗೆ ವರದಿ ಮಾಡಲಿದ್ದಾರೆ, ಆನಂತರ ನಾನು ನಿಮಗೆ ತಿಳಿಸುತ್ತೇನೆ. " ಎಂದು ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

Trump Questions Oracle Deal If Bytedance Keeps Stake

"ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಶೇ. 100ರಷ್ಟು ಆಗಿರಬೇಕು. ಮತ್ತು ನಾನು ಒಪ್ಪಂದವನ್ನು ನೋಡಬೇಕಾಗಿದೆ." ಎಂದು ಟ್ರಂಪ್ ಹೇಳಿದರು.

ಯಾವುದೇ ಒಪ್ಪಂದಕ್ಕೆ ಅನುಮೋದನೆ ನೀಡುವ ಬದಲು ವಾಷಿಂಗ್ಟನ್ ಕಂಪೆನಿಗಳಿಂದ ಹಣದ ಪಾವತಿ ಕೋರಲು ಸಾಧ್ಯವಿಲ್ಲ ಎಂಬ ವಿಚಾರಕ್ಕೆ ಟ್ರಂಪ್ ಆಶ್ಚರ್ಯ ವ್ಯಕ್ತಪಡಿಸಿದರು. "ಆಶ್ಚರ್ಯಕರವಾಗಿ ನಮಗೆ ಅದನ್ನು ಮಾಡಲು ಅನುಮತಿ ಇಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಇದು ಯಾವ ರೀತಿಯ ವಿಷಯ?" ಎಂದು ಅವರು ಹೇಳಿದರು.

ಟ್ರಂಪ್‌ನ ಹಸ್ತಕ್ಷೇಪವು ಆರು ರಿಪಬ್ಲಿಕನ್ ಸೆನೆಟರ್‌ಗಳು ಚೀನಾದ ಮಾಲೀಕ ಬೈಟ್‌ಡ್ಯಾನ್ಸ್‌ನೊಂದಿಗೆ ಸಂಬಂಧಗಳು ಉಳಿದುಕೊಂಡಿರುವವರೆಗೂ ಟಿಕ್‌ಟಾಕ್ ಒಪ್ಪಂದವನ್ನು ತಿರಸ್ಕರಿಸುವಂತೆ ಆಡಳಿತವನ್ನು ಒತ್ತಾಯಿಸಿದರು ಮತ್ತು ಅಧ್ಯಕ್ಷರು ಈ ಪ್ರಸ್ತಾಪವನ್ನು ನಿರ್ಬಂಧಿಸಬಹುದು ಎಂದು ಸೂಚಿಸಿದರು.

ಅಮೆರಿಕಾ ಕಾರ್ಯಾಚರಣೆಯನ್ನು ಅಮೆರಿಖಾದ ಕಂಪನಿಗೆ ಮಾರಾಟ ಮಾಡದಿದ್ದರೆ ಮತ್ತು ಆದಾಯದಲ್ಲಿ ಅಮೆರಿಕಾ ಸರ್ಕಾರವನ್ನು ಪಡೆಯದ ಹೊರತು ಆ್ಯಪ್ ಅನ್ನು ನಿಷೇಧಿಸುವುದಾಗಿ ಟ್ರಂಪ್ ಈ ಹಿಂದೆ ಬೆದರಿಕೆ ಹಾಕಿದ್ದರು.

English summary
US President Donald Trump warns any agreement to continue operating in US must be 100% as far as national security is concerned
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X