ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 28: ಕೊರೊನಾವೈರಸ್ ಬಿರುಗಾಳಿಗೆ ಸಿಲುಕಿ ಜರ್ಜರಿತವಾಗಿರುವ ಅಮೆರಿಕ, ಆರ್ಥಿಕವಾಗಿ ಮಹಾ ಕುಸಿತ ಕಂಡಿದೆ. ಅಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗವೇ ಇಲ್ಲ, ಇನ್ನು ಹಸಿದವರು ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ 2.5 ಟ್ರಿಲಿಯನ್ ಡಾಲರ್ ಮೊತ್ತದ ನೆರವನ್ನು ಅಮೆರಿಕ ಘೋಷಿಸಿತ್ತು. ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ನೆರವಿನ ಯೋಜನೆಯಾಗಿತ್ತು.

Recommended Video

Virat Kohli First Indian to Reach 70 Million Instagram followers | Oneindia Kannada

ಆದರೆ ಇಷ್ಟು ದೊಡ್ಡ ಮೊತ್ತ ಕೂಡ ಅಮೆರಿಕವನ್ನು ಸಂಕಷ್ಟದಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಈಗ ಮತ್ತೊಮ್ಮೆ ದೊಡ್ಡ ಮೊತ್ತದ(1 ಟ್ರಿಲಿಯನ್ ಡಾಲರ್) ನೆರವು ನೀಡಲು ಮುಂದಾಗಿದೆ. ಈ ಬಾರಿ ರಚನಾತ್ಮಕವಾಗಿ ನೆರವನ್ನು ಬಳಸಿಕೊಳ್ಳಲು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸದಸ್ಯರು ಪ್ರಸ್ತಾವನೆ ಮಂಡಿಸಿದ್ದಾರೆ. ಬಾಗಿಲು ಮುಚ್ಚಿದ ಶಾಲೆಗಳು, ಉದ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪುನಶ್ಚೇತನಕ್ಕೆ ಈ ನೆರವಿನ ಮೊತ್ತ ಬಳಕೆಯಾಗಲಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಆದರೆ ಪ್ರಸ್ತಾವನೆಗೆ ಅಮೆರಿಕನ್ ಕಾಂಗ್ರೆಸ್ ಸದಸ್ಯರ ಒಪ್ಪಿಗೆ ಸಿಗಬೇಕಿದೆ. ಅಮೆರಿಕನ್ ಕಾಂಗ್ರೆಸ್ ಒಪ್ಪಿದ ನಂತರವಷ್ಟೇ ಈ ಹಣವನ್ನ ಟ್ರಂಪ್ ಸರ್ಕಾರ ಬಿಡುಗಡೆ ಮಾಡಲು ಸಾಧ್ಯ. ಹಾಗಾದ್ರೆ ಇಷ್ಟು ದೊಡ್ಡ ಮೊತ್ತವನ್ನ ಹೇಗೆಲ್ಲ ಖರ್ಚು ಮಾಡಲಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಶಾಲೆಗಳ ಪುನಶ್ಚೇತನಕ್ಕೆ $100 ಬಿಲಿಯನ್..!

ಶಾಲೆಗಳ ಪುನಶ್ಚೇತನಕ್ಕೆ $100 ಬಿಲಿಯನ್..!

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಲ್ಲವೂ ಬಂದ್ ಆಗಿತ್ತು. ಹೀಗೆ ಲಾಕ್‌ಡೌನ್ ನಡುವೆ ಶಾಲೆಗಳಿಗೂ ಬೀಗ ಹಾಕಲಾಗಿತ್ತು. ಅಮೆರಿಕದಲ್ಲಿರುವ ಸಾವಿರಾರು ಶಾಲೆಗಳಿಗೆ ಬೀಗ ಹಾಕಿ ಹಲವು ತಿಂಗಳುಗಳೇ ಉರುಳಿವೆ. ಈ ಹೊತ್ತಲ್ಲಿ ಶಿಕ್ಷಣ ಕ್ಷೇತ್ರದ ಪುನಶ್ಚೇತನಕ್ಕಾಗಿ ಬಾಗಿಲು ಮುಚ್ಚಿದ ಶಾಲೆಗಳಿಗೆ ನೆರವು ನೀಡಲೇಬೇಕಿದೆ. ಇದೇ ಕಾರಣಕ್ಕೆ ಹಿಂದೆ ನೀಡಿದ ಅನುದಾನದ ಹೊರತಾಗಿ ಮತ್ತೆ 100 ಬಿಲಿಯನ್ ಡಾಲರ್‌ನಷ್ಟು ನೆರವು ನೀಡಲು ಚಿಂತನೆ ನಡೆಸಲಾಗಿದೆ. ಇಷ್ಟು ದೊಡ್ಡ ಮೊತ್ತದಿಂದ ಮಾತ್ರ ಅಮೆರಿಕದಲ್ಲಿರುವ ಶಾಲೆಗಳನ್ನು ಹುರಿದುಂಬಿಸಲು ಸಾಧ್ಯ ಎನ್ನುತ್ತಾರೆ ರಿಪಬ್ಲಿಕನ್ ಸದಸ್ಯರು.

 ಸಂಕಷ್ಟದಲ್ಲಿರುವ ಜನರಿಗೆ $1200 ಡಾಲರ್..!

ಸಂಕಷ್ಟದಲ್ಲಿರುವ ಜನರಿಗೆ $1200 ಡಾಲರ್..!

ಮೊದಲೇ ಹೇಳಿದಂತೆ ಅಮೆರಿಕದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗವೇ ಇಲ್ಲ. ಒಂದು ಅಂದಾಜಿನ ಪ್ರಕಾರ ಫೆಬ್ರವರಿ ತಿಂಗಳಿಂದ ಇಲ್ಲಿಯವರೆಗೂ 1.5 ಕೋಟಿ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. ಜೀವನ ನಡೆಸುವುದಕ್ಕೂ ಪರದಾಡು ಸ್ಥಿತಿ ಎದುರಾಗಿದೆ. ಹೀಗಾಗಿ ನಿರುದ್ಯೋಗ ಭತ್ಯೆ ಕಲ್ಪಿಸಿರುವ ಟ್ರಂಪ್ ಆಡಳಿತ, ಅದನ್ನ ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಮತ್ತೊಮ್ಮೆ 1 ಟ್ರಿಲಿಯನ್ ಡಾಲರ್ ನೆರವು ಘೋಷಿಸಿದರೆ, ಅದರಲ್ಲಿ ಭಾಗಶಃ ಅಮೆರಿಕನ್ನರಿಗೆ 1200 ಡಾಲರ್‌ನಷ್ಟು ನೆರವು ದೊರೆಯಲಿದೆ. ಅಂದರೆ ಅಂದಾಜು ತಲಾ 90 ಸಾವಿರ ರೂಪಾಯಿ ನೆರವು ಸಿಗಲಿದೆ.

ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!

ರಿಪಬ್ಲಿಕನ್ಸ್ ಪ್ರಸ್ತಾವನೆಗೆ ಅರ್ಥಿಕ ತಜ್ಞರ ವಿರೋಧ

ರಿಪಬ್ಲಿಕನ್ಸ್ ಪ್ರಸ್ತಾವನೆಗೆ ಅರ್ಥಿಕ ತಜ್ಞರ ವಿರೋಧ

ಈಗಾಗಲೇ 2.4 ಟ್ರಿಲಿಯನ್ ಡಾಲರ್ ನೆರವು ಘೋಷಿಸಲಾಗಿದೆ. ಇದರ ಮಧ್ಯೆ ಮತ್ತೊಮ್ಮೆ 1 ಟ್ರಿಲಿಯನ್ ಡಾಲರ್ ನೆರವು ಘೋಷಿಸಿದರೆ ಆರ್ಥಿಕವಾಗಿ ಸರ್ಕಾರಕ್ಕೆ ದೊಡ್ಡ ಹೊರೆಯಾಗಲಿದೆ. ಹೀಗಾಗಿ ಪ್ರಸ್ತಾವನೆ ಬಗ್ಗೆ ಮರುಪರಿಶೀಲನೆ ನಡೆಸಬೇಕು ಅಂತಿದ್ದಾರೆ ಆರ್ಥಿಕ ತಜ್ಞರು. ಅಲ್ಲದೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿರುದ್ಯೋಗದ ಭತ್ಯೆ ಕೊಡುವುದರತ್ತ ಮಾತ್ರ ಗಮನ ನೆಟ್ಟಿದೆ, ಇದೇ ರೀತಿ ಉದ್ಯಮಗಳ ಪುನಾರಂಭಕ್ಕೂ ಪ್ರಯತ್ನಸಬೇಕು ಅಂತಿದ್ದಾರೆ.

‘ಮಾಸ್ಕ್ ಪಾಲಿಟಿಕ್ಸ್'ಗೆ ಅಮೆರಿಕನ್ನರು ಹೈರಾಣ..!‘ಮಾಸ್ಕ್ ಪಾಲಿಟಿಕ್ಸ್'ಗೆ ಅಮೆರಿಕನ್ನರು ಹೈರಾಣ..!

ಲಾಕ್‌ಡೌನ್ ಕಾನೂನಿಗೆ ಬೆಲೆಯೇ ಇಲ್ಲ..!

ಲಾಕ್‌ಡೌನ್ ಕಾನೂನಿಗೆ ಬೆಲೆಯೇ ಇಲ್ಲ..!

ದಿನಬೆಳಗಾದರೆ ಸಾಕು ಭಾರತದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವ ಜನರ ಬಗ್ಗೆ ಕೇಳಿರುತ್ತೇವೆ. ಆದರೆ ಅಮೆರಿಕದಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ ಎಂದರೆ ನಂಬಲೇಬೇಕು. ಎಲ್ಲಿ ಸರ್ಕಾರದ ನಿಯಮ ಮೀರಿದರೆ ದೊಡ್ಡ ಶಿಕ್ಷೆಯಾಗುತ್ತದೋ, ಎಲ್ಲಿ ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಬೇಕಿದೆಯೋ ಅದೇ ದೇಶದಲ್ಲಿ ಲಾಕ್‌ಡೌನ್‌ಗೆ ಜನ ಕೇರ್ ಮಾಡ್ತಿಲ್ಲ. ನೇರವಾಗಿ ಅಮೆರಿಕದ ಕೇಂದ್ರ ಸರ್ಕಾರ ಲಾಕ್‌ಡೌನ್ ಹೇರದೇ ಇದ್ದರೂ, ಅಮೆರಿಕದ ಭಾಗಶಃ ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳು ಸೋಂಕು ತಡೆಗೆ ಲಾಕ್‌ಡೌನ್ ಹೇರಿವೆ. ಆದರೆ ಇದನ್ನು ಲೆಕ್ಕಿಸದ ಹೋಟೆಲ್ ಮಾಲೀಕರು, ಜಿಮ್ ಮಾಲೀಕರು ಹಾಗೂ ಅಂಗಡಿ ಮಾಲೀಕರು ಬಿಂದಾಸ್ ಆಗಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಮೂಲಕ ಲಾಕ್‌ಡೌನ್ ನಿಯಮ ಗಾಳಿಗೆ ತೂರುತ್ತಿದ್ದಾರೆ. ಹೀಗೆ ದೊಡ್ಡಣ್ಣನ ನಾಡಿನಲ್ಲೂ ಸರ್ಕಾರದ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ಬಹುದೊಡ್ಡ ನೆರವು ನೀಡಲು ಮುಂದಾಗಿರುವ ರಿಪಬ್ಲಿಕನ್ಸ್ ನಿರ್ಧಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.

English summary
Ruling Party Of US, The Republicans Proposed To Spend An Additional Aid Of 1 Trillion Dollar To Rebuild American Economy. US Already Spent More Than 2.5 Trillion Dollars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X