ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1 ವೀಸಾ ಹೊಂದಿರುವವರಿಗೆ ಶುಭ ಸುದ್ದಿ ಕೊಟ್ಟ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 11: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಎಚ್ 1 ಬಿ ವೀಸಾದಾರರಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಬಹುತೇಕ ಭಾರತದ ಐಟಿ ವೃತ್ತಿಪರರು ಅರ್ಜಿ ಹಾಕುವ ಈ ಬೇಡಿಕೆಯ ವೀಸಾ ನಿಯಮದಲ್ಲಿ ಭಾರಿ ಬದಲಾವಣೆ ತರುವ ಸುಳಿವನ್ನು ಟ್ರಂಪ್ ಸರ್ಕಾರ ನೀಡಿದೆ.

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಅಥವಾ ಶಾಶ್ವತ ನೆಲೆ ಕಂಡುಕೊಳ್ಳಲು ಯೋಜನೆ ಹಾಕಿಕೊಂಡಿರುವ ವೃತ್ತಿಪರರಿಗೆ ಇದು ರಹದಾರಿ ನೀಡಲಿದೆ. ಸಾಮಾನ್ಯವಾಗಿ 3 ರಿಂದ 6 ವರ್ಷಗಳ ಅವಧಿಗೆ ವಿದೇಶಿ ವೃತ್ತಿಪರರಿಗೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಆದರೆ, ವೃತ್ತಿ ಸಂಬಂಧಿ ವೀಸಾ ನವೀಕರಣ ಮಾಡುವುದು ಹೆಚ್ಚಾಗಿದೆ. ಕಡಿಮೆ ದರದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಭಾರತ ಹಾಗೂ ಚೀನಾ ಒದಗಿಸುತ್ತಿದೆ.

Trump promises changes to H1-B visas, including potential citizenship

ಮೋದಿ ಜತೆ ಅಮೆರಿಕದ ಅತಿಥಿಗಳು, ವೀಸಾ ಬಗ್ಗೆ ಚರ್ಚೆ! ಮೋದಿ ಜತೆ ಅಮೆರಿಕದ ಅತಿಥಿಗಳು, ವೀಸಾ ಬಗ್ಗೆ ಚರ್ಚೆ!

ಆದರೆ, ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿದೆ. ವೀಸಾ ನೀತಿಯಲ್ಲಿ ಮಾರ್ಪಾಟು ಹಾಗೂ ಎಚ್ 1 ಬಿ ವೀಸಾ ಪಡೆಯುವ ಪ್ರತಿಭಾವಂತರ ಬಗ್ಗೆ ಮೋದಿ ಅವರು ಕಾಳಜಿ ವಹಿಸಿ ಯುಎಸ್ ಪ್ರತಿನಿಧಿಗಳ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದರು.

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್ ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್​ನಿಂದ 1,30,000 ಡಾಲರ್​ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆ. ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ .

English summary
US president Donald Trump on Friday assured H-1B visa holders, an overwhelming majority of whom are Indian IT professionals, that his administration will soon bring changes that will give them certainty to stay in America and a "potential path to citizenship".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X