• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3 ಸಾವಿರ ಡೈನಮೈಟ್ ಬಳಸಿ ಟ್ರಂಪ್‌ಗೆ ಸೇರಿದ್ದ ಕಟ್ಟಡ ಸ್ಫೋಟಿಸಿದ್ದು ಯಾಕೆ..?

|
Google Oneindia Kannada News

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೇರಿದ್ದ ಸುಮಾರು 34 ಮಹಡಿಗಳ ಕಟ್ಟಡವನ್ನು 3 ಸಾವಿರ ಡೈನಮೈಟ್ ಬಳಸಿ ಕೆಡವಲಾಗಿದೆ. ಅಮೆರಿಕದ ನ್ಯೂಜೆರ್ಸಿ ರಾಜ್ಯದ ಅಟ್ಲಾಂಟಿಕ್ ನಗರದಲ್ಲಿ ಈ ಕಟ್ಟಡವನ್ನು 1984ರಲ್ಲಿ ನಿರ್ಮಾಣ ಮಾಡಲಾಗಿತ್ತು. ಅಟ್ಲಾಂಟಿಕ್ ನಗರದ 10ನೇ ಕೆಸಿನೋ(ಜೂಜು ಅಡ್ಡೆ) ಆಗಿ ಬಿಲ್ಡಿಂಗ್ ಕಾರ್ಯಾಚರಣೆ ಆರಂಭಿಸಿತ್ತು.

ಆದರೆ 2009ರಿಂದ ಶುರುವಾದ ಕಾನೂನು ತೊಡಕು 2014ರಲ್ಲಿ ಈ ಕಟ್ಟಡಕ್ಕೆ ಬೀಗ ಜಡಿಯುವಂತೆ ಮಾಡಿತ್ತು. ಬಾಗಿಲು ಬಂದ್ ಮಾಡಿದ ನಂತರ ಕಟ್ಟಡದ ನಿರ್ವಹಣೆ ನಿಂತಿತ್ತು. ಹೀಗಾಗಿ ಕಟ್ಟಡ ನಾನಾ ಕಾರಣಗಳಿಂದ ಹಾಳಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸುಮಾರು 3 ಸಾವಿರ ಡೈನಮೈಟ್ ಬಳಸಿ ಡೊನಾಲ್ಡ್ ಟ್ರಂಪ್‌ಗೆ ಸೇರಿದ್ದ ಕಟ್ಟಡವನ್ನು ಸ್ಫೋಟಿಸಲಾಗಿದೆ.

ಟ್ರಂಪ್ ಕಟ್ಟಡವನ್ನು ಬ್ಲಾಸ್ಟ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಮತ್ತೊಂದ್ಕಡೆ ಟ್ರಂಪ್‌ ಅಧಿಕಾರದಿಂದ ಕೆಳಗಿಳಿದ 1 ತಿಂಗಳ ಒಳಗೆ ಕಟ್ಟಡ ಸ್ಫೋಟಿಸಿದ್ದು ಯಾಕೆ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಜೂಜು ಅಡ್ಡೆ ನಡೆಸಿದ್ದರಾ ಟ್ರಂಪ್..?

ಜೂಜು ಅಡ್ಡೆ ನಡೆಸಿದ್ದರಾ ಟ್ರಂಪ್..?

ಹೌದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಸ್ಪರ್ಧಿಸಲು ಮುಂದಾದ ಸಂದರ್ಭದಲ್ಲಿ ಈ ರೀತಿಯ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಟ್ರಂಪ್ ಕೆಸಿನೋ ಬ್ಯುಸಿನೆಸ್ ಅಂದ್ರೆ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮಗ ಖುದ್ದಾಗಿ ಈ ಆರೋಪ ಮಾಡಿದ್ದರು. ಅಧ್ಯಕ್ಷೀಯ ಚುನಾವಣೆ ವೇಳೆ ನಡೆದಿದ್ದ ಡಿಬೆಟ್‌ನಲ್ಲಿ ಟ್ರಂಪ್ ವಿರುದ್ಧ ಬುಷ್ ಮಗ ಈ ಆರೋಪ ಮಾಡಿದ್ದರು. ಆದ್ರೆ ಟ್ರಂಪ್ ಮಾತ್ರ ಕೆಸಿನೋ ಬ್ಯುಸಿನೆಸ್ ಮಾಡುತ್ತಿಲ್ಲವೆಂದು ವಾದಿಸುತ್ತಲೇ ಬಂದಿದ್ದಾರೆ.

ಡೊನಾಲ್ಡ್ ಟ್ರಂಪ್‌ಗೆ ಆರ್ಥಿಕ ಸಂಕಷ್ಟ..?

ಡೊನಾಲ್ಡ್ ಟ್ರಂಪ್‌ಗೆ ಆರ್ಥಿಕ ಸಂಕಷ್ಟ..?

ಅಟ್ಲಾಂಟಿಕ್ ನಗರದಲ್ಲಿ ಟ್ರಂಪ್ ಪ್ಲಾಜಾ ನೆಲಕ್ಕೆ ಉರುಳುತ್ತಿದ್ದಂತೆ ಅನೇಕ ಊಹಾಪೋಹಗಳು ಹರಿದಾಡಿವೆ. ಅದರಲ್ಲೂ ಅಧ್ಯಕ್ಷೀಯ ಪದವಿ ತೊರೆಯುತ್ತಿದ್ದಂತೆ ಟ್ರಂಪ್‌ಗೆ ಆರ್ಥಿಕ ಸಂಕಷ್ಟ ಎದುರಾಯಿತಾ ಎಂಬುದು ಬಹುತೇಕರ ಅನುಮಾನ. ಆದರೆ ಅದೆಲ್ಲಾ ವದಂತಿ ಮಾತ್ರ ಎನ್ನಬಹುದು. ಏಕೆಂದರೆ 2021ರಲ್ಲಿ ಜಗತ್ತಿನ ಕೆಲ ಪ್ರಬಲ ಸುದ್ದಿ ಸಂಸ್ಥೆಗಳು ನೀಡಿರುವ ಮಾಹಿತಿಯಂತೆ ಟ್ರಂಪ್ ಸದ್ಯದ ಆಸ್ತಿಮೊತ್ತ ಸುಮಾರು 2.5 ಬಿಲಿಯನ್ ಡಾಲರ್. ಅಂದರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 18 ಸಾವಿರ ಕೋಟಿ. ಹೀಗಾಗಿ ಟ್ರಂಪ್‌ಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬುದು ಕೇವಲ ವದಂತಿ ಎನ್ನಬಹುದು.

ಟ್ರಂಪ್ ಫ್ಯಾಮಿಲಿ ಬ್ಯುಸಿನೆಸ್ ಏನು..?

ಟ್ರಂಪ್ ಫ್ಯಾಮಿಲಿ ಬ್ಯುಸಿನೆಸ್ ಏನು..?

ಡೊನಾಲ್ಡ್ ಟ್ರಂಪ್ ಕುಟುಂಬ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಹಿನ್ನೆಲೆಯಿಂದ ಬಂದಿದೆ. ಈ ಕುಟುಂಬ ಹಲವು ತಲೆಮಾರುಗಳಿಂದ ಇದೇ ವ್ಯವಹಾರ ಮುಂದುವರಿಸಿಕೊಂಡು ಬಂದಿತ್ತು. ಸ್ವತಃ ಡೊನಾಲ್ಡ್ ಟ್ರಂಪ್ ಕೂಡ ಇದೇ ಹಾದಿಯಲ್ಲಿ ಸಾಗಿ ಬಂದರು. ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೆ ಟ್ರಂಪ್ ಕಂಪನಿ ಸ್ಪರ್ಧೆ ನೀಡುತ್ತಾ ಬಂದಿತ್ತು. ಅಮೆರಿಕ ಸೇರಿದಂತೆ ವಿಶ್ವದ ವಿವಿಧೆಡೆ ಟ್ರಂಪ್ ಕಂಪನಿ ನೂರಾರು ಕಟ್ಟಡಗಳನ್ನು ನಿರ್ಮಿಸಿದೆ. ಈ ಪೈಕಿ ನ್ಯೂಜೆರ್ಸಿ ರಾಜ್ಯದ ಅಟ್ಲಾಂಟಿಕ್ ನಗರದ ಟ್ರಂಪ್ ಪ್ಲಾಜಾ ಕೂಡ ಒಂದಾಗಿತ್ತು. ಆದರೆ ಕಾರಣಾಂತರಗಳಿಂದ ಇದೀಗ ಈ ಕಟ್ಟಡವನ್ನ ಕೆಡವಲಾಗಿದೆ.

ಟ್ರಂಪ್‌ಗೆ ಹುಟ್ಟುತ್ತಲೇ ‘ಚಿನ್ನದ ಚಮಚ’..!

ಟ್ರಂಪ್‌ಗೆ ಹುಟ್ಟುತ್ತಲೇ ‘ಚಿನ್ನದ ಚಮಚ’..!

ಯಾರದ್ದಾದರೂ ಶ್ರೀಮಂತಿಕೆ ಲೆಕ್ಕಾಚಾರ ಹಾಕುವ ಸಂದರ್ಭದಲ್ಲಿ ‘ಚಿನ್ನದ ಚಮಚ' ಎಂಬ ವಾಕ್ಯದ ಬಳಕೆ ವಾಡಿಕೆಯಾಗಿದೆ. ಹೀಗೆ ಹೇಳುವುದಾದರೆ ಟ್ರಂಪ್‌ ಹುಟ್ಟುತ್ತಲೇ ‘ಚಿನ್ನದ ಚಮಚ' ಬಾಯಲ್ಲಿಟ್ಟುಕೊಂಡ ವ್ಯಕ್ತಿ. ತಾತ ಮತ್ತು ಅಪ್ಪ ಟ್ರಂಪ್‌ಗೆ ಸಾಕಷ್ಟು ಆಸ್ತಿಯನ್ನ ಮಾಡಿಟ್ಟಿದ್ದರು. ಟ್ರಂಪ್ ಕೂಡ ಕೌಟುಂಬಿಕ ಹಿನ್ನೆಲೆಯಿಂದ ಬಂದಿದ್ದ ಉದ್ಯಮದ ಆಶಯ ಬೆನ್ನತ್ತಿ ಹೋದರು. ಕಡೆಗೆ 2016ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಆಯ್ಕೆಯಾಗಿ 4 ವರ್ಷಗಳ ಕಾಲ ಅತ್ಯಂತ ವಿವಾದಾತ್ಮಕ ಅಧ್ಯಕ್ಷರಾಗಿದ್ದರು. ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದಾರೆ. ಆದರೆ ಈಗಲೂ ಟ್ರಂಪ್ ಅಮೆರಿಕದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ.

English summary
The Trump Plaza in Atlantic City of New Jersey state has been demolished by using 3,000 sticks of dynamites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X