ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ರಕ್ಷಣಾ ಕಾರ್ಯದರ್ಶಿಯಾಗಿ ಪ್ಯಾಟ್ರಿಕ್ ನೇಮಕ?

|
Google Oneindia Kannada News

ವಾಷಿಂಗ್ಟನ್, ಮೇ 10: ಅಮೆರಿಕ ರಕ್ಷಣಾ ಇಲಾಖೆಯ ರಕ್ಷಣಾ ಕಾರ್ಯದರ್ಶಿಯನ್ನಾಗಿ ಪ್ಯಾಟ್ರಿಕ್ ಶೆನ್‌ಹ್ಯಾನ್ ನೇಮಕಕ್ಕೆ ವೈಟ್ ಹೌಸ್ ಒಲವು ತೋರಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2017ರಿಂದ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಪ್ಯಾಟ್ರಿಕ್‌ರನ್ನು ಕಾರ್ಯದರ್ಶಿಯಾಗಿ ಪದೋನ್ನತಿ ನೀಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಗೆ ಸವಾಲೆಸೆಯಲು ಬಿಡೆನ್ ಸಜ್ಜು2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಗೆ ಸವಾಲೆಸೆಯಲು ಬಿಡೆನ್ ಸಜ್ಜು

ಆದರೆ ಈ ನೇಮಕಕ್ಕೆ ಸೆನೆಟ್ ಹಸಿರು ನಿಶಾನೆ ದೊರೆತರಷ್ಟೇ ಪ್ಯಾಟ್ರಿಕ್ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಕ್ಷಣಾ ಕಾರ್ಯದರ್ಶಿಯಾಗುವ ಮುನ್ನ ಸುಮಾರು 30 ವರ್ಷಗಳ ಕಾಲ ಪ್ರತಿಷ್ಠಿತ ಬೋಯಿಂಗ್ ವೈಮಾನಿಕ ಸಂಸ್ಥೆಯಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು. ರಕ್ಷಣಾ ಕಾರ್ಯದರ್ಶಿಯಾಗಿ ಪ್ಯಾಟ್ರಿಕ್ ನೇಮಕಕ್ಕೆ ಕೆಲ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಆಂತರಿಕ ವಿಚಾರಣೆ ನಡೆಸಲಾಗಿತ್ತು.

Trump picks Patrick Shanahan as defense secretary

ಈಗ ಪ್ಯಾಟ್ರಿಕ್ ನೇಮಕಕ್ಕೆ ಟ್ರಂಪ್ ಅಂತಿಮ ಮುದ್ರೆ ಹಾಕಿದ್ದಾರೆ. ಸಿರಿಯಾದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದು ಸೇರಿ ಕೆಲ ಆಡಳಿತಾತ್ಮಕ ವಿಚಾರಗಳಲ್ಲಿ ಅಧ್ಯಕ್ಷ ಟ್ರಂಪ್ ಜೊತೆಗೆ ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಜಾನ್ ಮ್ಯಾಟಿಸ್ ರಾಜೀನಾಮೆ ನೀಡಿದ್ದರು.

ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್

ಸಿರಿಯಾದಲ್ಲಿ ಸೇನೆಯನ್ನು ಹಿಂಪಡೆಯುವುದು ಉಗ್ರವಾದದ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಲಿದೆ ಐಸಿಸ್ ಮತ್ತೆ ತನ್ನ ಪ್ರಭಾವವನ್ನು ಹಿಗ್ಗಿಸಲಿದೆ ಎನ್ನುವುದು ಮ್ಯಾಟಿಸ್ ವಾದವಾಗಿತ್ತು.

English summary
The White House says President Donald Trump will nominate Patrick Shanahan, who has spent more than four months as the acting secretary of defense, for the permanent job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X