• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಂಬಿಕೆ ಕಳೆದುಕೊಂಡ ಟ್ರಂಪ್, ಶಾಕ್ ಕೊಟ್ಟ ಕೊರೊನಾ..!

|

ಕೊರೊನಾ ವೈರಸ್ ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಟ್ರಂಪ್ ಫ್ಲಾಪ್ ಆಗಿದ್ದಾರೆ ಅಂತಾ ಸಮೀಕ್ಷೆಯೊಂದರ ವರದಿ ತಿಳಿಸಿದೆ. ಅಮೆರಿಕ ಮಿತ್ರ ರಾಷ್ಟ್ರಗಳಲ್ಲಿ ನಡೆಸಿರುವ ಸಮೀಕ್ಷೆ ಆಧರಿಸಿ ಈ ವರದಿ ನೀಡಲಾಗಿದೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ಗಿಂತಲೂ ಟ್ರಂಪ್ ಹಿಂದೆ ಉಳಿದಿದ್ದಾರೆ.

ಈ ವಿಚಾರದಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಮೇಲೆ ಜನರಿಗೆ ನಂಬಿಕೆ ಇಲ್ಲವಾಗಿದೆ. ಅಮೆರಿಕದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು ಈವರೆಗೆ ಸುಮಾರು 68 ಲಕ್ಷ ಅಮೆರಿಕನ್ನರಿಗೆ ಕೊರೊನಾ ಕನ್ಫರ್ಮ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಆದರೂ ಕೂಡ ಟ್ರಂಪ್ ಆಡಳಿತ ಕೊರೊನಾ ನಿಯಂತ್ರಣ ವಿಚಾರವನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಜನಾಕ್ರೋಶ ಮೊಳಗಿದೆ. ಸುಮಾರು 13 ಸಾವಿರ ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆಸ್ಟೇಲಿಯಾ, ಬೆಲ್ಜಿಯಂ, ಕೆನಡಾ, ಡೆನ್‌ಮಾರ್ಕ್, ಫ್ರಾನ್ಸ್, ಜರ್ಮನಿ ಸೇರಿದಂತೆ ಇನ್ನೂ ಹಲವು ಅಮೆರಿಕ ಮಿತ್ರ ರಾಷ್ಟ್ರಗಳಿಂದ ಜನರನ್ನು ಈ ಸಮೀಕ್ಷೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಸ್ವಂತ ದೇಶದಲ್ಲೇ ಟ್ರಂಪ್ ಬಗ್ಗೆ ಆಕ್ರೋಶ

ಸ್ವಂತ ದೇಶದಲ್ಲೇ ಟ್ರಂಪ್ ಬಗ್ಗೆ ಆಕ್ರೋಶ

ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್‌ಗೆ ಎಲ್ಲವೂ ಉಲ್ಟಾ ಆಗುತ್ತಿದೆ. ಚುನಾವಣೆ ಸಮೀಪವಾಗುತ್ತಿದ್ದಂತೆ ಟ್ರಂಪ್‌ಗೆ ಏಟಿನ ಮೇಲೆ ಏಟು ಬೀಳುತ್ತಲೇ ಇದೆ. ಈಗಾಗಲೇ ಟ್ರಂಪ್‌ಗೆ ತಮ್ಮ ಸ್ವಂತ ದೇಶದಲ್ಲೇ ಮುಖಭಂಗವಾಗಿದೆ. ಕೊರೊನಾ ವೈರಸ್, ಕ್ಯಾಲಿಫೋರ್ನಿಯ ಕಾಡ್ಗಿಚ್ಚು, ಜನಾಂಗೀಯ ಸಂಘರ್ಷ ಸೇರಿದಂತೆ ಹಲವು ವಿಚಾರದಲ್ಲಿ ಟ್ರಂಪ್ ಎಡವಿದ್ದಾರೆ ಎಂಬ ನಿಲುವು ವ್ಯಕ್ತವಾಗುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಟ್ರಂಪ್‌ಗೆ ಜಗತ್ತಿನ ಇತರ ದೇಶಗಳಲ್ಲೂ ಶಾಕ್ ಸಿಕ್ಕಿದ್ದು ಟ್ರಂಪ್ ನಾಯಕತ್ವದಲ್ಲಿ ಬಹುಪಾಲು ಜನ ನಂಬಿಕೆ ಕಳೆದುಕೊಂಡಿದ್ದಾರೆ.

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಬಿಡೆನ್ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಟ್ರಂಪ್ ಹವಾಮಾನ ವೈಪರಿತ್ಯದ ಕುರಿತು ಸಂವಾದವೊಂದರಲ್ಲಿ ನೀಡಿದ್ದ ಹೇಳಿಕೆಗೆ ಬಿಡೆನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಟ್ರಂಪ್ ಕಿಚ್ಚು ಹಚ್ಚುವ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದರು. ಅಮೆರಿಕದಲ್ಲಿ ಚುನಾವಣಾ ಕಾವು ರಂಗೇರುತ್ತಿರುವ ಸಂದರ್ಭದಲ್ಲೇ ಕ್ಯಾಲಿಫೋರ್ನಿಯ ಕಾಡ್ಗಿಚ್ಚಿನ ವಿಚಾರವೂ ಪ್ರಚಾರದ ಅಜೆಂಡಾ ಆಗಿ ಬದಲಾಗಿದೆ. ಈ ಮಧ್ಯೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದ ಟ್ರಂಪ್, ವಾತಾವರಣ ತಣ್ಣಗಾಗುತ್ತಿದೆ. ಕಾದು ನೋಡಿ, ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದರು. ಹೀಗೆ ವಿಜ್ಞಾನಿಗಳಿಗೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜ್ಞಾನ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದು ಟ್ರಂಪ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.

  RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada
  ಚುನಾವಣೆಗೂ ಮುಳುವಾಗುತ್ತಾ..?

  ಚುನಾವಣೆಗೂ ಮುಳುವಾಗುತ್ತಾ..?

  ಟ್ರಂಪ್ ಹೇಳಿಕೆಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಭಾರಿ ಪ್ರಭಾವ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಚುನಾವಣೆ ಮೇಲೂ ಟ್ರಂಪ್‌ ಹೇಳಿಕೆ ಭಾರಿ ಪ್ರಭಾವ ಬೀರುವ ನಿರೀಕ್ಷೆ ಇದೆ. ಸಮೀಕ್ಷೆಗಳು ಕೂಡ ಇದನ್ನೇ ಸಾಬೀತು ಮಾಡುತ್ತಿವೆ. ಆದರೆ ಅಮೆರಿಕದ ಮತದಾರ ಪ್ರಭು ಈಗಿನ ಸಮೀಕ್ಷೆ ವರದಿಗಳಂತೆ ಮತ ಹಾಕಲಿದ್ದಾನಾ ಅಥವಾ ಸಮೀಕ್ಷೆಗಳನ್ನೇ ಸುಳ್ಳಾಗಿಸಲಿದ್ದಾನಾ ಅನ್ನೋದನ್ನು ಅಧ್ಯಕ್ಷೀಯ ಚುನಾವಣೆಯ ರಿಸಲ್ಟ್ ತನಕ ಕಾದು ನೋಡಬೇಕಿದೆ.

  ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!

  English summary
  People in America's allied nations are dismayed by Trump's handling of the crisis and view him as less trustworthy than other world leaders, including Russian Putin and Chinese Jinping, according to the survey.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X