• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Facebook, Twitter ವಿರುದ್ಧ ತೊಡೆತಟ್ಟಿದ ಟ್ರಂಪ್, ಶುರುವಾಗಲಿದೆಯಾ ‘ಟ್ರಂಪ್ ಬುಕ್’?

|

ವಾಷಿಂಗ್ಟನ್, ಮಾರ್ಚ್ 23: ಜಗತ್ತಿನಾದ್ಯಂತ ಇರುವ ಟ್ರಂಪ್ ಅಭಿಮಾನಿ ಬಳಗಕ್ಕೆ ಗುಡ್‌ ನ್ಯೂಸ್ ಸಿಕ್ಕಿದೆ. ಅಭಿಮಾನಿಗಳ ಪಾಲಿನ ನೆಚ್ಚಿನ ರಾಜಕಾರಣಿ ಟ್ರಂಪ್ ಸೋಷಿಯಲ್ ಮೀಡಿಯಾಗೆ ವಾಪಸ್ ಬರಲಿದ್ದಾರೆ.

ಹಾಗಂತ ಟ್ವಿಟ್ಟರ್, ಫೇಸ್‌ಬುಕ್ ಟ್ರಂಪ್‌ರ 'ಬ್ಲಾಕ್' ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಟ್ವಿಟ್ಟರ್, ಫೇಸ್‌ಬುಕ್ ವಿರುದ್ಧವೇ ತೊಡೆತಟ್ಟಿ ಟ್ರಂಪ್ ತಮ್ಮದೇ ಸೋಷಿಯಲ್ ಮೀಡಿಯಾ ಶುರು ಮಾಡಲಿದ್ದಾರಂತೆ. ಹೌದು ಈ ವಿಚಾರವನ್ನ 2020 ರ ಚುನಾವಣೆಯಲ್ಲಿ ಟ್ರಂಪ್ ಪ್ರಚಾರದ ಹೊಣೆ ಹೊತ್ತಿದ್ದ ವಕ್ತಾರ ಜೇಸನ್ ಮಿಲ್ಲರ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸಂಸತ್ 'ಕ್ಯಾಪಿಟಲ್ ಹಿಲ್' ಮೇಲಿನ ದಾಳಿ ನಂತರ ಟ್ರಂಪ್ ಪೇಚಿಗೆ ಸಿಲುಕಿದ್ದರು. ಪ್ರತಿಭಟನೆ ಮತ್ತು ಹಿಂಸೆ ಭುಗಿಲೆದ್ದ ಸಂದರ್ಭದಲ್ಲಿ ಪ್ರಚೋದನೆ ನೀಡುವಂತಹ ಟ್ವೀಟ್, ಪೋಸ್ಟ್ ಮಾಡಿದ್ದಾರೆ ಎಂದು ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಟ್ರಂಪ್‌ರ ಅಕೌಂಟ್‌ನ ಬ್ಲಾಕ್ ಮಾಡಿದ್ದವು.

ಹೀಗಾಗಿ ಟ್ರಂಪ್ ವೈಟ್‌ಹೌಸ್ ಬಿಟ್ಟು ಹೊರಡುವಾಗಲೂ ಅಭಿಮಾನಿಗಳ ಜೊತೆ ಕೊನೆಯ ಮಾತುಗಳನ್ನ ಹಂಚಿಕೊಳ್ಳಲು ಆಗಿರಲಿಲ್ಲ. ಆದರೆ ಈಗ ಅದಕ್ಕೆ ಸುದಿನ ಬಂದಂತೆ ಕಾಣುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಟ್ರಂಪ್‌ರ ಸೋಷಿಯಲ್ ಮೀಡಿಯಾ ಸಂಸ್ಥೆ ಲಾಂಚ್ ಆಗುವ ಸಾಧ್ಯತೆ ದಟ್ಟವಾಗಿದೆ.

ಎಡವಟ್ಟು ಮಾಡಿಕೊಂಡಿದ್ದ ಟ್ರಂಪ್..!

ಎಡವಟ್ಟು ಮಾಡಿಕೊಂಡಿದ್ದ ಟ್ರಂಪ್..!

‘ಕ್ಯಾಪಿಟಲ್ ಹಿಲ್' ಹಿಂಸಾಚಾರಕ್ಕೂ ಮೊದಲೇ ಟ್ರಂಪ್‌ ಟ್ವೀಟ್‌ಗಳ ಕುರಿತು ತೀವ್ರ ಆಕ್ರೋಶ ಭುಗಿಲೆದ್ದಿತ್ತು. ಅದರಲ್ಲೂ 2020ರ ಅಧ್ಯಕ್ಷೀಯ ಚುನಾವಣೆ ಟ್ವೀಟ್ ವಾಗ್ದಾಳಿಗೆ ಫೇಮಸ್ ಆಗಿಬಿಟ್ಟಿತ್ತು. ಆದರೆ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ನಂತರ ಎಲ್ಲವೂ ಉಲ್ಟಾ ಆಗಿತ್ತು. ಟ್ರಂಪ್ ವಿರುದ್ಧ ಸ್ವತಃ ಟ್ವಿಟ್ಟರ್ ಸಿಇಒ ಗರಂ ಆಗಿ, ಟ್ರಂಪ್ ಖಾತೆಯನ್ನೇ ಉಡಾಯಿಸಿದ್ದರು. ಇದಾದ ಬಳಿಕ ಟ್ರಂಪ್ ಟ್ವಿಟ್ಟರ್ ಹಾಗೂ ಫೇಸ್‌ಬುಕ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ಇಷ್ಟೆಲ್ಲ ನಡೆದು ಕೆಲ ತಿಂಗಳ ಬಳಿಕ ಟ್ರಂಪ್ ತಮ್ಮದೇ ಸ್ವಂತ ಸೋಷಿಯಲ್ ಮೀಡಿಯಾ ಸಂಸ್ಥೆ ಆರಂಭಿಸಲು ಮುಂದಾಗಿದ್ದಾರೆ.

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು. ಇದಾದ ಬಳಿಕ ಟ್ರಂಪ್ ಮಾಡಿದ್ದ ಟ್ವೀಟ್‌ಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿತ್ತು.

ಶಾಸಕರು ಕೂಡ ಅರೆಸ್ಟ್..!

ಶಾಸಕರು ಕೂಡ ಅರೆಸ್ಟ್..!

ಉನ್ನತ ಸ್ಥಾನದಲ್ಲಿದ್ದು ಜನತೆಗೆ ಒಳ್ಳೆಯದನ್ನೇ ಬಯಸಬೇಕಿದ್ದ ಕೆಲ ಶಾಸಕರು ಟ್ರಂಪ್ ಮಾತಿಗೆ ಮರುಳಾಗಿ, ಜನವರಿ 6ರಂದು ಹಿಂಸೆಗೆ ಪ್ರಚೋದನೆ ನೀಡಿದ್ದರು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರಂತೆ. ಇದೇ ಕಾರಣಕ್ಕೆ ಹಲವು ಶಾಸಕರು ಈಗಾಗಲೇ ಕಂಬಿ ಹಿಂದೆ ಬಿದ್ದಿದ್ದಾರೆ. ಇನ್ನಷ್ಟು ಶಾಸಕರಿಗೆ ಬಲೆ ಬೀಸಲಾಗಿದೆ. ಇದು ಅಮೆರಿಕದ ಇತಿಹಾಸವೇ ಮುಜುಗರ ಪಡುವಂತಹ ಘಟನೆಯಾಗಿದ್ದು, ಕಾನೂನು ರಚಿಸಿ ಸಮಾಜ ರಕ್ಷಿಸಬೇಕಿದ್ದ ಶಾಕಸರು ಕೂಡ ಅಶಾಂತಿ ಸೃಷ್ಟಿಸಿದ್ದು ವಿಪರ್ಯಾಸವಾಗಿದೆ. ಈ ವಿಚಾರದಲ್ಲಿ ಅಮೆರಿಕ ಈಗಾಗಲೇ ಜಗತ್ತಿನ ಮುಂದೆ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನು ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

English summary
Trump adviser says that US ex-president have plans to start own social media organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X