ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪರೀಕ್ಷೆ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 10: ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಭೀತಿ ಆವರಿಸಿದೆ ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ. ಅತಿ ವೇಗವಾಗಿ ಹಲವು ದೇಶಗಳಲ್ಲಿ ಹರಡಿರುವ ಕೊರೊನಾ ದಾಳಿಗೆ ಸಾವಿರಾರು ಜನರು ಬಲಿಯಾಗಿದ್ದಾರೆ.

ಅಮೆರಿಕಾದಲ್ಲೂ ಕೊರೊನಾ ಮಾರಣಹೋಮ ನಡೆಸಿದ್ದು ಇದುವರೆಗೂ 28 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ಇತ್ತೀಚಿನ ದಿನಗಳಲ್ಲಿ ಟ್ರಂಪ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇನ್ನು ವೈಟ್ ಹೌಸ್ ಪಕ್ಕದಲ್ಲಿಯೂ ಒಂದು ಕೊರೊನಾ ಕೇಸ್ ಪತ್ತೆಯಾಗಿರುವುದು ದೊಡ್ಡಣ್ಣನಿಗೆ ಆತಂಕ ಉಂಟು ಮಾಡಿದೆ. ಈ ಬಗ್ಗೆ ವೈಟ್ ಹೌಸ್ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

ಟ್ರಂಪ್‌ಗೆ ಕೊರೊನಾ ಪರೀಕ್ಷೆ ಅಗತ್ಯವಿಲ್ಲ

ಟ್ರಂಪ್‌ಗೆ ಕೊರೊನಾ ಪರೀಕ್ಷೆ ಅಗತ್ಯವಿಲ್ಲ

ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸ್ಟೆಫನಿ ಗ್ರಿಶಮ್ ಅವರು ಸೋಮವಾರ ಮಾತನಾಡಿದ್ದು, ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪರೀಕ್ಷೆ ಅಗತ್ಯವಿಲ್ಲ ಎಂದಿದ್ದಾರೆ. ಟ್ರಂಪ್‌ ಅವರಲ್ಲಿ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ ಹಾಗೂ ಸೋಂಕಿತರ ಜೊತೆ ನಿಕಟವಾದ ಸಂಪರ್ಕವೂ ಹೊಂದಿಲ್ಲದ ಕಾರಣ ಅವರಿಗೆ ಕೊರೊನಾ ಸೋಂಕು ತಾಗುವುದಿಲ್ಲ ಎಂದು ವೈಟ್ ಹೌಸ್ ಸ್ಪಷ್ಟನೆ ನೀಡಿದೆ.

ಟ್ರಂಪ್ ಆರೋಗ್ಯ ಉತ್ತಮವಾಗಿದೆ

ಟ್ರಂಪ್ ಆರೋಗ್ಯ ಉತ್ತಮವಾಗಿದೆ

''ಡೊನಾಲ್ಡ್ ಟ್ರಂಪ್‌ ಅವರ ಆರೋಗ್ಯ ಉತ್ತಮವಾಗಿದೆ. ಸದಾ ಅವರ ಆರೋಗ್ಯ ಮೇಲೆ ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ'' ಎಂದು ಸ್ಟೆಫನಿ ಗ್ರಿಶಮ್ ತಿಳಿಸಿದ್ದಾರೆ. ಕೊರೊನಾ ಬಗ್ಗೆ ಟ್ರಂಪ್ ಕೂಡ ಮಾತನಾಡಿದ್ದು, 'ಕೊರೊನಾ ಕುರಿತು ನನಗೆ ಆತಂಕ ಇಲ್ಲ, ನಾನು ಮತ್ತು ನಮ್ಮ ದೇಶ ಕೊರೊನಾ ತಡೆಯಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ' ಎಂದಿದ್ದರು.

ಎಮ್ಮೆಗೆ ಜ್ವರ ಬಂದ್ರೆ ಎತ್ತಿಗೆ ಬರೆ: ಕೊರೊನಾ ಕಾಲರ್ ಟ್ಯೂನ್ ಬಗ್ಗೆ ಡಿಕೆಶಿ ವ್ಯಂಗ್ಯ!ಎಮ್ಮೆಗೆ ಜ್ವರ ಬಂದ್ರೆ ಎತ್ತಿಗೆ ಬರೆ: ಕೊರೊನಾ ಕಾಲರ್ ಟ್ಯೂನ್ ಬಗ್ಗೆ ಡಿಕೆಶಿ ವ್ಯಂಗ್ಯ!

ರಿಪಬ್ಲಿಕನ್ ಸದಸ್ಯರಿಗೆ ಸೋಂಕು ಶಂಕೆ

ರಿಪಬ್ಲಿಕನ್ ಸದಸ್ಯರಿಗೆ ಸೋಂಕು ಶಂಕೆ

ಡೊನಾಲ್ಡ್ ಟ್ರಂಪ್ ಅವರನ್ನು ಇತ್ತೀಚಿಗಷ್ಟೆ ಭೇಟಿಯಾಗಿದ್ದ ಇಬ್ಬರು ರಿಪಬ್ಲಿಕನ್ ಸದಸ್ಯರು ತಮಗೆ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಪಾರ್ಟಿಯೊಂದು ನಡೆದಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಇಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಹಾಗಾಗಿ, ಆ ಪಾರ್ಟಿಯಲ್ಲಿ ಟ್ರಂಪ್ ಜೊತೆ ನಾವು ಇದ್ದೇವು. ನಮಗೂ ಕೊರೊನಾ ಬರಬಹುದು ಶಂಕೆ ವ್ಯಕ್ತಪಡಿಸಿದ್ದಾರೆ.

ವೈಟ್ ಹೌಸ್ ಪಕ್ಕದಲ್ಲಿ ಕೊರೊನಾ ಶಂಕೆ

ವೈಟ್ ಹೌಸ್ ಪಕ್ಕದಲ್ಲಿ ಕೊರೊನಾ ಶಂಕೆ

ವೈಟ್ ಹೌಸ್‌ನಿಂದ ಒಂದು ಮೈಲಿ ದೂರದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ವೈಟ್ ಹೌಸ್ ನಲ್ಲಿರುವ ಶಾಸಕರಿಗೂ ಆತಂಕ ಮೂಡಿಸಿದೆ. ಇದುವರೆಗೂ ಯುಎಸ್‌ನಲ್ಲಿ 708 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 28 ಜನರು ಮೃತಪಟ್ಟಿದ್ದಾರೆ.

English summary
White House Press Secretary Stephanie Grisham said on Monday that 'testing was not necessary because President Trump'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X