ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ನಡುವೆ ಮಧ್ಯಸ್ಥಿಕೆ: ಯೂಟರ್ನ್ ಹೊಡೆದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜೂನ್ 18: ಭಾರತ ಮತ್ತು ಚೀನಾ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜಿ ಸಂಧಾನ ಮಾಡಿಸುವ ಯಾವುದೇ ಅಧಿಕೃತ ಯೋಜನೆ ಅಮೆರಿಕದ ಮುಂದಿಲ್ಲ ಎಂದು ವೈಟ್‌ಹೌಸ್ ಸ್ಪಷ್ಟಪಡಿಸಿದೆ.

ಗಡಿ ವಿವಾದ ಬಗೆಹರಿಸಲು ಹಾಗೂ ಶಾಂತಿ ಮರು ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಲು ಬದ್ಧ ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.
ಆದರೆ ಇಂದು ಹೇಳಿಕೆ ನೀಡಿರುವ ವೈಟ್‌ಹೌಸ್ ಸಧ್ಯಕ್ಕೆ ಇಂತಹ ಯಾವುದೇ ಯೋಜನೆ ಅಮೆರಿಕದ ಮುಂದಿಲ್ಲ ಎಂದಿದೆ.

ಏತನ್ಮಧ್ಯೆ ಭಾರತ ಹಾಗೂ ಚೀನಾ ಸರ್ಕಾರದ ನಡುವೆ ವಿದೇಶಾಂಗ ಸಚಿವಾಲಯಗಳ ಹಂತದಲ್ಲಿ ಮಾತುಕತೆ ಆರಂಭವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ.

Donald trump

ಅಮೆರಿಕ ಮಧ್ಯಸ್ಥಿಕೆ ಕುರಿತು ಚೀನಾ ಖಾರವಾಗಿ ಪ್ರತಿಕ್ರಿಯಿಸಿದ್ದು, ಭಾರತ ಹಾಗೂ ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿ ಚರ್ಚೆಗೆ ಉಭಯ ದೇಶಗಳ ನಡುವೆ ಚರ್ಚೆಗೆ ಸೂಕ್ತ ವೇದಿಕೆಗಳಿವೆ. ಪರಿಹಾರ ಮಾರ್ಗಗಳನ್ನು ಹುಡುಕಲು ಮೂರನೇ ದೇಶಗಳ ಅಥವಾ ವ್ಯಕ್ತಿಯ ಅಗತ್ಯವಿಲ್ಲ ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳಿದೆ.

ಭಾರತ ಚೀನಾ ಗಡಿ ವಿವಾದ: ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ ಎಂದ ಟ್ರಂಪ್ಭಾರತ ಚೀನಾ ಗಡಿ ವಿವಾದ: ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ ಎಂದ ಟ್ರಂಪ್

ಈ ಹಿಂದೆ ಪುಲ್ವಾಮಾ ಆತ್ಮಾಹುತಿ ದಾಳಿ ನಂತರ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವಾಗಲೂ ಇದೇ ರೀತಿ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪ ಇಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಆಗ ಅಮೆರಿಕದ ಪ್ರಸ್ತಾಪವನ್ನು ಭಾರತ ನಯವಾಗಿ ತಿರಸ್ಕರಿಸಿತ್ತು.

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15,16ರಂದು ನಡೆದ ಭಾರತ-ಚೀನಾ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು,43 ಮಂದಿ ಚೀನಾ ಸೈನಿಕರನ್ನು ಹತ್ಯೆಮಾಡಲಾಗಿತ್ತು.

English summary
President Donald Trump will not mediate between India and China after a deadly clash between the two Asian nuclear powers, the White House said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X