• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್‌ v/s ಕಮಲಾ: ಅಧ್ಯಕ್ಷರು ಮಾಡಿದ ಎಡವಟ್ಟು ಒಂದೆರಡಲ್ಲ

|

ಕೊರೊನಾ ಸೋಂಕಿನ ಪರಿಣಾಮ ಎಂತಹದ್ದು ಎಂಬುದು ಟ್ರಂಪ್‌ಗೆ ಮೊದಲೇ ತಿಳಿದಿತ್ತು. ಆದರೆ ಅಧ್ಯಕ್ಷರು ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಫ್ಲಾಪ್ ಆಗಿದ್ದಾರೆ ಎಂದು ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ. ಅಮೆರಿಕದಲ್ಲಿ ಆರೋಗ್ಯ, ಆರ್ಥಿಕತೆ, ಕೃಷಿ ಕ್ಷೇತ್ರ ಸೇರಿ ಎಲ್ಲಾ ರಂಗಗಳೂ ಕುಸಿತ ಕಂಡಿವೆ. ಇದಕ್ಕೆ ಟ್ರಂಪ್‌ರ ನಿರ್ಲಕ್ಷ್ಯ ಧೋರಣೆಯೇ ಪ್ರಮುಖ ಕಾರಣವಾಗಿದೆ ಎಂದು ಕಮಲಾ ಹ್ಯಾರಿಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಹುಶಃ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ತಮ್ಮ ಸ್ಥಾನದ ಎದುರಾಳಿಗಿಂತಲೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೊತೆಯಲ್ಲೇ ಹೆಚ್ಚಾಗಿ ಗುದ್ದಾಡಿದ್ದಾರೆ. ಅಷ್ಟಕ್ಕೂ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಟ್ರಂಪ್ ಕೆರಳಿ ಕೆಂಡವಾಗಿದ್ದರು. ಕಮಲಾ ಹ್ಯಾರಿಸ್ ಎಂದರೆ ಟ್ರಂಪ್‌ಗೆ ಎಲ್ಲಿಲ್ಲದ ಕೋಪ. ಹೀಗಾಗಿಯೇ ಟ್ರಂಪ್ ಪ್ರತಿ ಬಾರಿ ಕ್ಯಾಂಪೇನ್‌ಗಳಲ್ಲಿ ಬಿಡೆನ್‌ಗಿಂತಲೂ ಹೆಚ್ಚು ಕಮಲಾ ವಿರುದ್ಧವೇ ಹರಿಹಾಯ್ದಿದ್ದಾರೆ. ಕಮಲಾ ಹ್ಯಾರಿಸ್ ಕೂಡ ಟ್ರಂಪ್‌ಗೆ ಟಾಂಗ್ ಕೊಡುತ್ತಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಖಾಡ ಇದೀಗ ಮತ್ತಷ್ಟು ಕಾವೇರಿದೆ.

ದೇಶವನ್ನು ನೂರಾರು ಸಮಸ್ಯೆಗಳು ಕಾಡುತ್ತಿವೆ

ದೇಶವನ್ನು ನೂರಾರು ಸಮಸ್ಯೆಗಳು ಕಾಡುತ್ತಿವೆ

ವಿಸ್ಕಾನ್‌ಸಿನ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಮಲಾ ಟ್ರಂಪ್ ವಿರುದ್ಧ ಅಕ್ಷರಶಃ ಕೆಂಡವಾಗಿದ್ದರು. ಟ್ರಂಪ್ ಆಡಳಿತ ಮಾಡಿಕೊಂಡ ಎಡವಟ್ಟುಗಳನ್ನು ಒಂದೊಂದಾಗಿ ಜನರ ಎದುರು ಬಿಚ್ಚಿಟ್ಟರು. ಟ್ರಂಪ್‌ಗೆ ಕೊರೊನಾ ಅದೆಷ್ಟು ಅಪಾಯಕಾರಿ ಎಂಬುದು ಮೊದಲೇ ತಿಳಿದಿತ್ತು. ಅದರೆ ಪರಿಸ್ಥಿತಿಯನ್ನು ಗಂಭೀರವಾಗಿ ಟ್ರಂಪ್ ಪರಿಗಣಿಸಲಿಲ್ಲ. ಸಾಮಾನ್ಯ ಜ್ವರಕ್ಕಿಂತಲೂ ಕೊರೊನಾ 5 ಪಟ್ಟು ಹೆಚ್ಚು ಅಪಾಯಕಾರಿ ಎಂಬುದು ಜನವರಿ 28ರಂದೇ ಟ್ರಂಪ್‌ಗೆ ಗೊತ್ತಾಗಿತ್ತು. ಆದರೆ ಸೋಂಕು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿದ್ದೇ ಇಡೀ ಅಮೆರಿಕದ ಮೇಲೆ ಪರಿಣಾಮ ಬೀರಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಜನಾಂಗೀಯ ವಾದ ಒಂದು ರೋಗ, ಅದಕ್ಕೆ ಲಸಿಕೆ ಇಲ್ಲ: ಕಮಲಾ

ಅಮೆರಿಕದಲ್ಲಿ ಭಾರತೀಯರದ್ದೇ ಹವಾ..!

ಅಮೆರಿಕದಲ್ಲಿ ಭಾರತೀಯರದ್ದೇ ಹವಾ..!

ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರತೀಯ ಮತದಾರರನ್ನೇ ಅವಲಂಬಿಸಿದೆ. ಇತ್ತೀಚೆಗೆ ಅಮೆರಿಕದಲ್ಲಿ ಘಟಿಸಿದ ಜಾರ್ಜ್ ಫ್ಲಾಯ್ಡ್ ಸಾವು ಹಾಗೂ ಆ ನಂತರದ ವರ್ಣಭೇದ ಸಂಘರ್ಷ ಈಗಾಗಲೇ ಟ್ರಂಪ್ ವಿರುದ್ಧ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆಗಳನ್ನು ಒಗ್ಗೂಡಿಸಿದೆ. ಈ ನಡುವೆ ಕಮಲಾ ಭಾರತ ಮೂಲದವರ ಮತಗಳನ್ನು ಒಗ್ಗೂಡಿಸುತ್ತಿದ್ದಾರೆ. ಕೊರೊನಾ ನಿಭಾಯಿಸುವಲ್ಲೂ ಟ್ರಂಪ್ ಎಡವಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಈ ಬಾರಿ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಭಾರತೀಯರ ಪಾತ್ರ ಮಹತ್ವದ್ದಾಗಿದ್ದು, ಸಮೀಕ್ಷೆಗಳ ಪ್ರಕಾರ ಬಹುಪಾಲು ಭಾರತೀಯರು ಬಿಡೆನ್ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಹೀಗೆ ಕಮಲಾ ಆಯ್ಕೆ ಡೆಮಾಕ್ರಟಿಕ್ ಪಕ್ಷದ ಚುನಾವಾಣಾ ದಿಕ್ಕನ್ನೇ ಬದಲಾಯಿಸಿದೆ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಇದರ ಜೊತೆಗೆ ಕೊರೊನಾ ಸಂಕಷ್ಟ, ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ. ಅಲ್ಲದೆ ತಮಗೆ ಸೋಂಕು ಬಂದಿದ್ದಾಗ ನಡೆದುಕೊಂಡ ರೀತಿ ಕೂಡ ಅಮೆರಿಕದ ಪ್ರಬುದ್ಧ ಮತದಾರರನ್ನು ಕೆರಳಿಸಿದೆ. ಇದೆಲ್ಲವೂ ನಮಗೆ ವರವಾಗಲಿದೆ ಎಂಬುದು ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಲೆಕ್ಕಾಚಾರ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಕಮಲಾ ಹ್ಯಾರಿಸ್ ಅವರ ಆಯ್ಕೆ ದೊಡ್ಡ ತಿರುವು

ಕಮಲಾ ಹ್ಯಾರಿಸ್ ಅವರ ಆಯ್ಕೆ ದೊಡ್ಡ ತಿರುವು

ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಅವರ ಆಯ್ಕೆ ದೊಡ್ಡ ತಿರುವು ಕೊಟ್ಟಿದೆ. ಏಕೆಂದರೆ ಕಮಲಾ ಅವರಿಗೆ ಭಾರತೀಯರು ಸೇರಿದಂತೆ ಆಫ್ರಿಕನ್-ಅಮೆರಿಕನ್ ಮತದಾರರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ಈಗಾಗಲೇ ಕಮಲಾ ಹ್ಯಾರಿಸ್ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ಆಯ್ಕೆಯಿಂದ ವಿಚಲಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಏಕೆಂದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಭಾರತೀಯರ ಮತಗಳನ್ನು ಪಡೆಯುವಲ್ಲಿ ಕಮಲಾ ಯಶಸ್ವಿಯಾದರೆ ಅದು ಟ್ರಂಪ್ ಸೋಲಿಗೆ ಮುನ್ನುಡಿ ಬರೆಯಲಿದೆ. ಈಗ ಇದೇ ಆಗುತ್ತಿದೆ. ದಿನೇ ದಿನೆ ಅಮೆರಿಕನ್ನರ ವಿಶ್ವಾಸ ಗಳಿಸುತ್ತಿರುವ ಕಮಲಾ ಹ್ಯಾರಿಸ್, ಭಾರತೀಯರ ಮಗಳನ್ನು ಡೆಮಾಕ್ರಟಿಕ್ ಪಕ್ಷದ ಪರವಾಗಿ ಒಗ್ಗೂಡಿಸುತ್ತಿದ್ದಾರೆ.

ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?

English summary
Kamala Harris alleges that, Trump's failure to cope with the corona situation has caused all sectors of health, the economy and agriculture in the US to collapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X