ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ:ವಿದೇಶಿಯರ ಉದ್ಯೋಗ ವೀಸಾ ನಿರ್ಬಂಧ ವಿಸ್ತರಿಸಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 01: ಅಮೆರಿಕದಲ್ಲಿ ವಲಸೆ, ಉದ್ಯೋಗ ವೀಸಾ ಮೇಲಿನ ನಿರ್ಬಂಧವನ್ನು ಡೊನಾಲ್ಡ್ ಟ್ರಂಪ್ ವಿಸ್ತರಿಸಿದ್ದು, ಇದರಿಂದ ವಿದೇಶಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರಿಂದ ಹಲವು ಗ್ರೀನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮತ್ತು ತಾತ್ಕಾಲಿಕ ವಿದೇಶ ಕೆಲಸಗಾರರ ವೀಸಾದಡಿ ಅಮೆರಿಕಕ್ಕೆ ಹೋದವರಿಗೆ ಸಮಸ್ಯೆಯಾಗಲಿದೆ. ಈ ನೀತಿ ಮಾರ್ಚ್ ವರೆಗೆ ಮುಂದುವರಿಯಲಿದೆ. ಕಳೆದ ಏಪ್ರಿಲ್ ಮತ್ತು ಜೂನ್ ನಲ್ಲಿ ಹೊರಡಿಸಲಾಗಿದ್ದ ಈ ನಿಷೇಧ ನೀತಿ ನಿನ್ನೆಗೆ ಮುಕ್ತಾಯವಾಗಿತ್ತು. ಆದರೆ ಅದನ್ನು ನಿನ್ನೆ ಡೊನಾಲ್ಡ್ ಟ್ರಂಪ್ ಮಾರ್ಚ್ 31ರವರೆಗೆ ಮುಂದುವರಿಸಿದ್ದಾರೆ.

ಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿ

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಸುಗ್ರೀವಾಜ್ಞೆ ಅಧಿಕಾರ ಮೂಲಕ ನಿನ್ನೆ ಈ ಆದೇಶ ಹೊರಡಿಸಿದ್ದಾರೆ.

Trump Extends Freeze On H-1B, Other Work Visas Until March 31

ಕೊವಿಡ್-19 ಸಾಂಕ್ರಾಮಿಕ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವ ಸಂದರ್ಭದಲ್ಲಿ ದೇಶದ ನಾಗರಿಕರನ್ನು ರಕ್ಷಿಸಲು ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಇದೇ 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಜೊ ಬೈಡನ್ ಈ ನಿರ್ಬಂಧವನ್ನು ಟೀಕಿಸಿದ್ದರು, ಅವರು ಅಧಿಕಾರಕ್ಕೆ ಬಂದ ಕೂಡಲೇ ಈ ನಿಷೇಧವನ್ನು ಹಿಂತೆಗೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಹೇಳಿಕೆ ನೀಡಿಲ್ಲ.

ಯುನೈಟೆಡ್ ಸ್ಟೇಟ್ಸ್ ಕಾರ್ಮಿಕ ಮಾರುಕಟ್ಟೆ ಮೇಲೆ ವಿದೇಶಿ ಕಾರ್ಮಿಕರಿಂದ ಆಗುವ ಪ್ರಭಾವ ಏನು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅದರಲ್ಲೂ ಈಗಿನ ಅಪರೂಪದ ಸನ್ನಿವೇಶದಲ್ಲಿ ದೇಶೀಯವಾಗಿ ನಿರುದ್ಯೋಗ ಹೆಚ್ಚಾಗಿ, ಕಾರ್ಮಿಕರಿಗೆ ಬೇಡಿಕೆ ಕುಸಿತವಾಗಿದೆ.

ಡಿಸೆಂಬರ್ 31, 2020ಕ್ಕೆ ಈಗಿನ ಆದೇಶ ಕೊನೆ ಆಗಬಹುದು. ಒಂದು ವೇಳೆ ಅಗತ್ಯ ಕಂಡುಬಂದಲ್ಲಿ ಮತ್ತಷ್ಟು ಸಮಯ ಮುಂದುವರಿಯಬಹುದು ಎಂದು ಹೇಳಲಾಗಿತ್ತು. ಇದೀಗ ನಿರ್ಬಂಧವನ್ನು ವಿಸ್ತರಿಸಿದ್ದಾರೆ.

English summary
U.S. President Donald Trump on Thursday extended a pair of immigration bans that block many "green card" applicants and temporary foreign workers from entering the country, measures he says are needed to protect U.S. workers amid the pandemic-battered economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X