ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸುದ್ದಿಗೋಷ್ಠಿ ವೇಳೆ ಶ್ವೇತ ಭವನದ ಎದುರಿನಲ್ಲೇ ಗುಂಡಿನ ದಾಳಿ

|
Google Oneindia Kannada News

ವಾಶಿಂಗ್ಟನ್, ಆಗಸ್ಟ್.11: ಅಮೆರಿಕಾದ ಶ್ವೇತ ಭವನದ ಎದುರಿನಲ್ಲೇ ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

Recommended Video

ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

ಪೆನ್ಸಿಲ್ವೆನಿಯಾ ಅವೆನ್ಯೂನ 17ನೇ ರಸ್ತೆಯ ಬಳಿ ಫೈರಿಂಗ್ ನಡೆದಿದೆ. ತಕ್ಷಣ ಎಚ್ಚೆತ್ತುಕೊಂಡ ಬೆಂಗಾವಲು ಪಡೆಯು ಡೊನಾಲ್ಡ್ ಟ್ರಂಪ್ ಅವರನ್ನು ಸ್ಥಳದಿಂದ ರಕ್ಷಿಸಿ ಬೇರೆಡೆಗೆ ಕರೆದೊಯ್ಡಿದ್ದಾರೆ. ಘಟನೆ ನಡೆದು ಕೆಲವು ಗಂಟೆಗಳಲ್ಲೇ ಮತ್ತೆ ಟ್ರಂಪ್ ಸುದ್ದಿಗೋಷ್ಠಿ ನಡೆಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕ ಸಂಸತ್‌ನಲ್ಲಿ ಮತ ಚಲಾವಣೆಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕ ಸಂಸತ್‌ನಲ್ಲಿ ಮತ ಚಲಾವಣೆ

ಭದ್ರತಾ ಸಿಬ್ಬಂದಿ ಮತ್ತು ಬೆಂಗಾವಲು ಪಡೆ ಸಿಬ್ಬಂದಿಯ ತುರ್ತು ಹಾಗೂ ಪರಿಣಾಮಕಾರಿ ಕಾರ್ಯದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದರು.

Trump Escorted From Briefing Room After Shooting Outside USA White House

ದುರಾದೃಷ್ಟಕರ ಘಟನೆ ಎಂದ ಟ್ರಂಪ್:

ಅಮೆರಿಕಾದ ಶ್ವೇತ ಭವನದ ಎದುರಿನಲ್ಲೇ ಗುಂಡಿನ ದಾಳಿ ಮತ್ತು ಗಲಾಟೆ ನಡೆದಿರುವ ಘಟನೆಯು ಬಹಳ ದರಾದೃಷ್ಟಕರವಾಗಿದೆ. ಈಗಾಗಲೇ ಗುಂಡಿನ ದಾಳಿ ನಡೆಸಿದ ವ್ಯಕ್ತಿಯು ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇನ್ನು, ನೀವು ಸುರಕ್ಷಿತವಾಗಿದ್ದೀರಿಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಶ್ವೇತ ಭವನದಲ್ಲಿ ನಾನು ಸದಾ ಸುರಕ್ಷಿತವಾಗಿದ್ದಂತೆ ಎನ್ನಿಸುತ್ತದೆ. ಭದ್ರತಾ ಸಿಬ್ಬಂದಿಯ ನಡುವೆ ನಾನು ಸುರಕ್ಷಿತವಾಗಿದ್ದೇನೆ. ನಮ್ಮ ಭದ್ರತಾ ಸಿಬ್ಬಂದಿಯು ಅದ್ಭುತವಾಗಿದ್ದು ಉತ್ತಮದಲ್ಲೇ ಉತ್ತಮವಾಗಿದೆ ಎಂದು ಟ್ರಂಪ್ ಹೇಳಿದರು.

English summary
Trump Escorted From Briefing Room after Shooting Outside USA White House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X