ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆ

|
Google Oneindia Kannada News

ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ನೀಡಿದ್ದೀರಿ. ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಜೋ ಬೈಡನ್ ಅಮೆರಿಕದ ಮತದಾರರಿಗೆ ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಟ್ರಂಪ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಬೈಡನ್ ಹಾಗೂ ಕಮಲಾ ಅಭಿಮಾನಿಗಳನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ಅಮೆರಿಕದ ಗಲ್ಲಿಗಲ್ಲಿಗಳೂ ನೀಲಿಮಯವಾಗಿವೆ. ಎಲ್ಲೆಲ್ಲೂ ಬೈಡನ್ ಮತ್ತು ಕಮಲಾ ಹೆಸರು ರಾರಾಜಿಸುತ್ತಿದೆ. ಟ್ರಂಪ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಧ್ಯಕ್ಷ ಪದವಿ ಗಿಟ್ಟಿಸಿರುವ ಬೈಡನ್‌ ಹಾಗೂ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಬಿರುದು ಪಡೆದಿರುವ ಕಮಲಾಗೆ ಸಂಭ್ರಮದ ಜೊತೆ ಜವಾಬ್ದಾರಿಯೂ ಹೆಚ್ಚಾಗಿದೆ.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

ಸದ್ಯದ ಮಟ್ಟಿಗೆ ಮತದಾರರಿಗೆ ಅಭಿನಂದನೆ ಸಲ್ಲಿಸುವುದರಲ್ಲಿ ಇಬ್ಬರೂ ನಾಯಕರು ಬ್ಯೂಸಿಯಾಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ಸೋಲು ಕಂಡರೂ ಡೊನಾಲ್ಡ್ ಟ್ರಂಪ್ ಬಿಂದಾಸ್ ಆಗಿ ಗಾಲ್ಫ್ ಆಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಟ್ರಂಪ್ ಜೊತೆ ಅವರ ಅಭಿಮಾನಿಗಳು ಕೂಡ ಯಾವುದೇ ಟೆನ್ಷನ್ ತೆಗೆದುಕೊಂಡಿಲ್ಲ. ಇದಕ್ಕೆಲ್ಲಾ ಬಲವಾದ ಕಾರವೂ ಇದೆ. ಟ್ರಂಪ್ ತಾವು ಸೋತರೂ ಬೈಡನ್ ವಿರುದ್ಧ ಮಾಡಿದ ಆರೋಪ ಕೋರ್ಟ್ ಮೆಟ್ಟಿಲೇರಿದೆ. ಇಲ್ಲಾದರೂ ತಮಗೆ ಗೆಲುವು ಸಿಗಬಹುದು ಎಂಬುದು ಟ್ರಂಪ್ ನಿರೀಕ್ಷೆಯಾಗಿದೆ.

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಟ್ರಂಪ್ ತಾವು ಸೋತರು ಯಾಕಿಷ್ಟು ಬಿಂದಾಸ್ ಆಗಿದ್ದಾರೆ ಎಂದರೆ, ಮತದಾನ ಹಾಗೂ ಮತ ಎಣಿಕೆಯ ಕುರಿತು ತಾವು ಮಾಡಿರುವ ಆರೋಪಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯಸಿಗುವ ಭರವಸೆ ಅವರದ್ದು. ಟ್ರಂಪ್ ಚುನಾವಣೆಗೆ ಮೊದಲೇ 'ನಾನು ಸುಮ್ಮನೆ ಖುರ್ಚಿ ಬಿಟ್ಟು ಹೋಗಲ್ಲ' ಎಂದು ವಾರ್ನಿಂಗ್ ಕೊಟ್ಟಿದ್ದರು. ಈಗ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಟ್ರಂಪ್. ಜಾರ್ಜಿಯಾ, ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಖಭಂಗ ಅನುಭವಿಸಿರುವ ಟ್ರಂಪ್, ಈಗ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಆದರೆ ಟ್ರಂಪ್ ಅವರ ವರ್ತನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಡೊನಾಲ್ಡ್ ಟ್ರಂಪ್ ಸೋತಿದ್ದರೂ ಈ ರೀತಿ ಭಂಡತನ ಪ್ರದರ್ಶನ ಮಾಡುತ್ತಾ. ಅಮೆರಿಕದ ಚುನಾವಣಾ ವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು ಅಮೆರಿಕನ್ನರನ್ನ ಮಾತ್ರವಲ್ಲ ಟ್ರಂಪ್ ಪಕ್ಷದ ನಾಯಕರನ್ನ ಕೂಡ ಕೆರಳಿಸಿದೆ. ಟ್ರಂಪ್ ಮನಸ್ಸಿಗೆ ಬಂದಂತೆ ಟ್ವೀಟ್ ಮಾಡುತ್ತಾ, ಮತ ಎಣಿಕೆ ಹಾಗೂ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಪೆಟ್ಟುಕೊಡುತ್ತಿದೆ. ಇದು ಭವಿಷ್ಯದಲ್ಲಿಯೂ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಮಾಡಲಿದೆ ಎಂಬುದು ರಿಪಬ್ಲಿಕನ್ ಪಕ್ಷದ ನಾಯಕರ ಆತಂಕ. ಆದರೆ ಟ್ರಂಪ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ತಾವು ಟ್ವೀಟ್ ಮಾಡುತ್ತಾ, ಗಂಭೀರ ಆರೋಪಗಳನ್ನ ಬೈಡನ್ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಹಾಕುತ್ತಾ ಬಿಂದಾಸ್ ಆಗಿದ್ದಾರೆ.

ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!

ಟ್ರಂಪ್ ಪತ್ನಿಯಿಂದ ವಿಚ್ಛೇದನ..?

ಟ್ರಂಪ್ ಪತ್ನಿಯಿಂದ ವಿಚ್ಛೇದನ..?

ಟ್ರಂಪ್‌ಗೆ ಅಧ್ಯಕ್ಷೀಯ ಚುನಾವಣೆ ಮುಗಿಯುತ್ತಿದ್ದಂತೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಈಗಾಗಲೇ ಅಧ್ಯಕ್ಷ ಪದವಿ ಕಳೆದುಕೊಂಡು ಒದ್ದಾಡುತ್ತಿರುವ ಟ್ರಂಪ್‌ಗೆ ಅವರ ಪತ್ನಿ ವಿಚ್ಛೇದನ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಶ್ವೇತಭವನದ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಟ್ರಂಪ್ ಅಧಿಕಾರದಲ್ಲಿ ಇದ್ದಾಗ ದೂರವಾಗಿದ್ದರೆ ತಮಗೆ ಆಪತ್ತು ಎಂದು ಟ್ರಂಪ್ ಪತ್ನಿ ವಿಚ್ಛೇದನ ನೀಡದೆ ಸುಮ್ಮನಿದ್ದರು ಎನ್ನಲಾಗುತ್ತಿದೆ. ಆದರೆ ಟ್ರಂಪ್ ವೈಟ್‌ಹೌಸ್ ಬಿಟ್ಟು ಹೊರ ಬರುತ್ತಿದ್ದಂತೆ ವಿಚ್ಛೇದನ ನೀಡುವುದು ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ.

ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ!ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ!

ಟ್ರಂಪ್ ವಿರುದ್ಧ ಕಾನೂನು ಸಮರ..?

ಟ್ರಂಪ್ ವಿರುದ್ಧ ಕಾನೂನು ಸಮರ..?

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟುಗಳು ಹಾಗೂ ಟ್ರಂಪ್‌ರ ವಿವಾದಾತ್ಮಕ ನಿರ್ಧಾರಗಳು ಅವರಿಗೆ ಉರುಳಾಗಿವೆ. ಟ್ರಂಪ್ ಬದ್ಧ ವಿರೋಧಿಯಾಗಿರುವ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇದೇ ಸಂದರ್ಭವನ್ನು ಬಳಸಿ, ಟ್ರಂಪ್‌ಗೆ ಶಾಕ್ ಕೊಡಲು ನಿರ್ಧರಿಸಿದ್ದಾರೆ. ಟ್ರಂಪ್ ವಿರುದ್ಧ ಈಗಾಗಲೇ ಹತ್ತಾರು ಕೇಸ್‌ಗಳು ದಾಖಲಾಗಿದ್ದು, ಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಟ್ರಂಪ್ ಸೋತಿರುವುದು ಅವರ ವಿರೋಧಿಗಳಿಗೆ ಹಾಗೂ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವೇಗ ನೀಡುವಂತೆ ಮಾಡಿದೆ. ಅಮೆರಿಕದ ಮಾಧ್ಯಮಗಳ ಪ್ರಕಾರ ಟ್ರಂಪ್ ಕನಸಲ್ಲೂ ಕಾಣದ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಬೈಡನ್ ಹಾಗೂ ಡೆಮಾಕ್ರಟಿಕ್ ನಾಯಕರು ಟ್ರಂಪ್‌ ವಿರುದ್ಧ ಬಲೆ ಎಣೆಯುತ್ತಿದ್ದಾರೆ. ಮುಖ್ಯವಾಗಿ ಟ್ರಂಪ್‌ಗೆ ತೆರಿಗೆ ವಂಚನೆ ಆರೋಪವೇ ಉರುಳಾಗುವ ಸಾಧ್ಯತೆ ಇದೆ.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರುಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

English summary
Trump enjoying the golf even after defeat against joe biden in presidential election. Another side Democrats preparing for legal fight against former president trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X