ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್‌ ಟ್ರಂಪ್ ಪದಚ್ಯುತಿಗೆ ಸಜ್ಜಾದ ಅಮೆರಿಕಾ ಸಂಸತ್: ನಾನು ಹಿಂಸಾಚಾರ ಬಯಸುವುದಿಲ್ಲ ಎಂದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 13: ಹಿಂಸಾಚಾರದ ಘಟನೆಯ ನಂತರ ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದುಹಾಕಲು, ಅಮೆರಿಕಾದ ಕ್ಯಾಪಿಟಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ವಿರುದ್ಧ ದೋಷಾರೋಪಣೆ ಹೊರಿಸಲು ಅಲ್ಲಿನ ಸಂಸತ್ ಸಜ್ಜಾಗಿದೆ.

ಜೊತೆಗೆ ಅಧಿಕೃತವಾಗಿ ಹುದ್ದೆ ತೊರೆದು ಹೋಗಲು ಡೊನಾಲ್ಡ್‌ ಟ್ರಂಪ್‌ಗೆ ಕೊನೆಯ ಒಂದು ಅವಕಾಶವನ್ನು ನೀಡಲು ಡೆಮೋಕ್ರಾಟ್ಸ್‌ ನಿರ್ಧರಿಸಿದ್ದರು. ಏತನ್ಮಧ್ಯೆ, ಅಮೆರಿಕಾ ಕ್ಯಾಪಿಟಲ್ ಹಿಂಸಾಚಾರದ ಸ್ವಲ್ಪ ಮೊದಲು ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.

ಟ್ರಂಪ್ ಮೇಲೆ ನಿಷೇಧ ಹೇರಿ ಕೈಸುಟ್ಟುಕೊಂಡ ಟ್ವಿಟ್ಟರ್, ಫೇಸ್‌ಬುಕ್ಟ್ರಂಪ್ ಮೇಲೆ ನಿಷೇಧ ಹೇರಿ ಕೈಸುಟ್ಟುಕೊಂಡ ಟ್ವಿಟ್ಟರ್, ಫೇಸ್‌ಬುಕ್

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾದ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ಮಾಡಲು ಬೆಂಬಲಿಗರನ್ನು ಪ್ರಚೋದಿಸಿದ ಆರೋಪವಿದೆ. ಡೊನಾಲ್ಡ್ ಟ್ರಂಪ್ ಹಿಂಸಾಚಾರಕ್ಕೆ ಸ್ವಲ್ಪ ಮುಂಚೆಯೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು ಮತ್ತು ಕ್ಯಾಪಿಟಲ್ ಮೇಲೆ ದಾಳಿ ಮಾಡಲು ಬೆಂಬಲಿಗರನ್ನು ಪ್ರಚೋದಿಸಿದರು.

Trump Defends His Speech:Impeachment Moves Causing Anger

ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ 'ಜಗಳ' ಅಥವಾ 'ಹೋರಾಟ' ಎಂಬ ಪದಗಳನ್ನು 20 ಕ್ಕೂ ಹೆಚ್ಚು ಬಾರಿ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಟ್ರಂಪ್ ತಮ್ಮ ಭಾಷಣದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕ್ಯಾಪಿಟಲ್ ಘಟನೆಯಲ್ಲಿ ಅವರ ಪಾತ್ರವೇನು ಮತ್ತು ಅವರ ವೈಯಕ್ತಿಕ ಜವಾಬ್ದಾರಿ ಏನು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, "ನಾವು ಹಿಂಸಾಚಾರವನ್ನು ಬಯಸುವುದಿಲ್ಲ" ಎಂದು ಹೇಳಿದರು.

ದೋಷಾರೋಪಣೆ ಕುರಿತು ಮಾತನಾಡಿದ ಅವರು, ಡೆಮಾಕ್ರಟಿಕ್ ಶಾಸಕರ ದೋಷಾರೋಪಣೆ ಕ್ರಮಗಳನ್ನು ತೀವ್ರವಾಗಿ ಟೀಕಿಸುತ್ತಾ ''ಇದರಿಂದ ಭಯಾನಕ ಕೋಪವನ್ನು ಉಂಟುಮಾಡುತ್ತಿದೆ, ಆದರೆ ನಾನು ಹಿಂಸಾಚಾರ ಬಯಸುವುದಿಲ್ಲ'' ಎಂದಿದ್ದಾರೆ.

ಟ್ರಂಪ್ ಅವರ ಅಧಿಕಾರಾವಧಿ ಮುಕ್ತಾಯಕ್ಕೆ ಒಂದು ವಾರ ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಅವರು ಎರಡನೇ ಬಾರಿಗೆ ದೋಷಾರೋಪಣೆಯನ್ನು ಎದುರಿಸುತ್ತಿದ್ದಾರೆ.

English summary
US President Donald Trump Under pressure after deadly breach of the US capital last week. There was tremendous anger about moves to impeach him and he did not want violence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X