ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಕೇಸು ದಾಖಲಿಸಿದ ಟ್ರಂಪ್, ಬೈಡನ್‌ಗೆ ಹೊಸ ತಲೆನೋವು..!

|
Google Oneindia Kannada News

ಪೆನ್ಸಿಲ್ವೇನಿಯಾದಲ್ಲಿ ಮತ ಎಣಿಕೆ ಕುರಿತು ಕಿರಿಕ್ ತೆಗೆದಿರುವ ಟ್ರಂಪ್ ಪ್ರಚಾರ ಪಡೆ ಕಾನೂನು ಹೋರಾಟಕ್ಕೆ ಮುಂದಾಗಿದೆ. ಇ-ಮೇಲ್ ಮತದಾರರಿಗಿಂತ, ವೈಯಕ್ತಿಕವಾಗಿ ಮತದಾನ ಮಾಡಿದ ಮತಪತ್ರಗಳನ್ನೇ ಹೆಚ್ಚಿನ ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಹಾಗೆ ನೋಡಿದರೆ ಟ್ರಂಪ್ ಮೊದಲಿನಿಂದಲೂ ಅಂಚೆ ಮತದಾನಕ್ಕೆ ಬದ್ಧ ವಿರೋಧಿಯಾಗಿದ್ದರು. ಅಲ್ಲದೆ ಅಂಚೆ ಮತದಾನದ ವ್ಯವಸ್ಥೆಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಟ್ರಂಪ್ ಕಿರಿಕ್ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಈ ರಂಪಾಟವನ್ನೆಲ್ಲಾ ಗಮನಿಸಿದರೆ ಬಹುಶಃ ಅಮೆರಿಕ ಅಧ್ಯಕ್ಷೀಯ ಚುನಾವಣೆ ಈ ವರ್ಷಕ್ಕೆ ಕೊನೆಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗೆ ಆದರೆ ಮುಂದಿನ ವರ್ಷಕ್ಕೂ ಚುನಾವಣೆ ವಿಚಾರ ಎಳೆದು ತರಬಹುದು. ಇನ್ನು ಚುನಾವಣೆ ಮುಗಿದು 7 ದಿನ ಕಳೆದಿದೆ. ಬೈಡನ್ ವಿಜಯಿ ಎಂಬುದು ಸ್ಪಷ್ಟವಾಗಿ 2-3 ದಿನವಾದರೂ ಟ್ರಂಪ್ ಮಾತ್ರ ಈ ಸೋಲನ್ನ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಮತ್ತೆ ಮತ್ತೆ ಕಿರಿಕ್ ತೆಗೆದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎಂಬು ಡೆಮಾಕ್ರಟಿಕ್ ಪಕ್ಷದ ನಾಯಕರ ಆರೋಪ.

ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?ಟ್ರಂಪ್ ನಿರ್ಗಮನ ಪ್ರಕ್ರಿಯೆ ಹೇಗಿರುತ್ತದೆ? ಬಲವಂತವೋ- ಬರೀ ಸ್ವಂತವೋ?

ಇಷ್ಟೆಲ್ಲದರ ಮಧ್ಯೆ ಈ ಬಾರಿ ಟ್ರಂಪ್ ಪಡೆಯ ಕಾನೂನು ಹೋರಾಟ ಪೆನ್ಸಿಲ್ವೇನಿಯಾ ರಾಜ್ಯದತ್ತ ತಿರುಗಿದೆ. ಈಗಾಗಲೇ ಮಿಚಿಗನ್, ಜಾರ್ಜಿಯಾ ರಾಜ್ಯಗಳಲ್ಲಿ ಮತ ಎಣಿಕೆ ವಿಧಾನ ಪ್ರಶ್ನಿಸಿದ್ದ ಟ್ರಂಪ್ ಮುಖಭಂಗ ಅನುಭವಿಸಿದ್ದಾರೆ. ನೆವಾಡ, ಆರಿಜೋನಾ ರಾಜ್ಯಗಳಲ್ಲೂ ಟ್ರಂಪ್ ಇದೇ ರೀತಿ ಮತ ಎಣಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದರು. ಈಗ ಪೆನ್ಸಿಲ್ವೇನಿಯಾ ರಾಜ್ಯದ ಸರದಿಯಾಗಿದೆ.

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಮತದಾನದಲ್ಲಿ ಮೋಸ ಎಂಬುದೇ ಬಂಡವಾಳ

ಟ್ರಂಪ್ ತಾವು ಸೋತರು ಯಾಕಿಷ್ಟು ಬಿಂದಾಸ್ ಆಗಿದ್ದಾರೆ ಎಂದರೆ, ಮತದಾನ ಹಾಗೂ ಮತ ಎಣಿಕೆಯ ಕುರಿತು ತಾವು ಮಾಡಿರುವ ಆರೋಪಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯಸಿಗುವ ಭರವಸೆ ಅವರದ್ದು. ಟ್ರಂಪ್ ಚುನಾವಣೆಗೆ ಮೊದಲೇ ‘ನಾನು ಸುಮ್ಮನೆ ಖುರ್ಚಿ ಬಿಟ್ಟು ಹೋಗಲ್ಲ' ಎಂದು ವಾರ್ನಿಂಗ್ ಕೊಟ್ಟಿದ್ದರು. ಈಗ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಟ್ರಂಪ್. ಜಾರ್ಜಿಯಾ, ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಖಭಂಗ ಅನುಭವಿಸಿರುವ ಟ್ರಂಪ್, ಈಗ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಆದರೆ ಟ್ರಂಪ್ ಅವರ ವರ್ತನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಟ್ರಂಪ್ ಪಕ್ಷದಲ್ಲೇ ಆಕ್ರೋಶ

ಡೊನಾಲ್ಡ್ ಟ್ರಂಪ್ ಸೋತಿದ್ದರೂ ಈ ರೀತಿ ಭಂಡತನ ಪ್ರದರ್ಶನ ಮಾಡುತ್ತಾ. ಅಮೆರಿಕದ ಚುನಾವಣಾ ವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು ಅಮೆರಿಕನ್ನರನ್ನ ಮಾತ್ರವಲ್ಲ ಟ್ರಂಪ್ ಪಕ್ಷದ ನಾಯಕರನ್ನ ಕೂಡ ಕೆರಳಿಸಿದೆ. ಟ್ರಂಪ್ ಮನಸ್ಸಿಗೆ ಬಂದಂತೆ ಟ್ವೀಟ್ ಮಾಡುತ್ತಾ, ಮತ ಎಣಿಕೆ ಹಾಗೂ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಪೆಟ್ಟುಕೊಡುತ್ತಿದೆ. ಇದು ಭವಿಷ್ಯದಲ್ಲಿಯೂ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಮಾಡಲಿದೆ ಎಂಬುದು ರಿಪಬ್ಲಿಕನ್ ಪಕ್ಷದ ನಾಯಕರ ಆತಂಕ. ಆದರೆ ಟ್ರಂಪ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ತಾವು ಟ್ವೀಟ್ ಮಾಡುತ್ತಾ, ಗಂಭೀರ ಆರೋಪಗಳನ್ನ ಬೈಡನ್ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಹಾಕುತ್ತಾ ಬಿಂದಾಸ್ ಆಗಿದ್ದಾರೆ.

ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!

ಟ್ರಂಪ್ ವಿರುದ್ಧ ಕಾನೂನು ಸಮರ..?

ಟ್ರಂಪ್ ವಿರುದ್ಧ ಕಾನೂನು ಸಮರ..?

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟುಗಳು ಹಾಗೂ ಟ್ರಂಪ್‌ರ ವಿವಾದಾತ್ಮಕ ನಿರ್ಧಾರಗಳು ಅವರಿಗೆ ಉರುಳಾಗಿವೆ. ಟ್ರಂಪ್ ಬದ್ಧ ವಿರೋಧಿಯಾಗಿರುವ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇದೇ ಸಂದರ್ಭವನ್ನು ಬಳಸಿ, ಟ್ರಂಪ್‌ಗೆ ಶಾಕ್ ಕೊಡಲು ನಿರ್ಧರಿಸಿದ್ದಾರೆ. ಟ್ರಂಪ್ ವಿರುದ್ಧ ಈಗಾಗಲೇ ಹತ್ತಾರು ಕೇಸ್‌ಗಳು ದಾಖಲಾಗಿದ್ದು, ಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಟ್ರಂಪ್ ಸೋತಿರುವುದು ಅವರ ವಿರೋಧಿಗಳಿಗೆ ಹಾಗೂ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವೇಗ ನೀಡುವಂತೆ ಮಾಡಿದೆ. ಅಮೆರಿಕದ ಮಾಧ್ಯಮಗಳ ಪ್ರಕಾರ ಟ್ರಂಪ್ ಕನಸಲ್ಲೂ ಕಾಣದ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಬೈಡನ್ ಹಾಗೂ ಡೆಮಾಕ್ರಟಿಕ್ ನಾಯಕರು ಟ್ರಂಪ್‌ ವಿರುದ್ಧ ಬಲೆ ಎಣೆಯುತ್ತಿದ್ದಾರೆ. ಮುಖ್ಯವಾಗಿ ಟ್ರಂಪ್‌ಗೆ ತೆರಿಗೆ ವಂಚನೆ ಆರೋಪವೇ ಉರುಳಾಗುವ ಸಾಧ್ಯತೆ ಇದೆ.

ಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆ

ಟ್ರಂಪ್ ವಿಶ್ರಾಂತಿ ಜೀವನ ಕೋರ್ಟ್ ಕಟ್ಲೆಗಳಲ್ಲೇ ಮುಕ್ತಾಯ?

ಟ್ರಂಪ್ ವಿಶ್ರಾಂತಿ ಜೀವನ ಕೋರ್ಟ್ ಕಟ್ಲೆಗಳಲ್ಲೇ ಮುಕ್ತಾಯ?

ಟ್ರಂಪ್ ವಿರುದ್ಧ ಅನೇಕ ಮೊಕದ್ದಮೆಗಳಿದ್ದು, ಪೋರ್ನ್ ಸ್ಟಾರ್ ಜತೆ ವ್ಯವಹಾರ, ಅಕ್ರಮ ಹಣ ವಹಿವಾಟು ಇದರಲ್ಲಿ ಸೇರಿವೆ. ಟ್ರಂಪ್ ಕೂಡಾ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿಗಳನ್ನು ಹಾಕುತ್ತಿದ್ದಾರೆ. ಬೈಡನ್ ಹೊರ ತರುವ ಕಾನೂನುಗಳ ವಿರುದ್ಧ ಟ್ರಂಪ್ ತಿರುಗೇಟು ನೀಡಲು ಆರಂಭಿಸಬಹುದು. ಸರ್ಕಾರ ಏನಾದರೂ ಟ್ರಂಪ್ ವಿರುದ್ಧ ಬಲವಾಗಿ ಕಾನೂನು ಸಮರ ಆರಂಭಿಸಿದರೆ, ಟ್ರಂಪ್ ವಿಶ್ರಾಂತಿ ಜೀವನ ಕೋರ್ಟ್ ಕಟ್ಲೆಗಳಲ್ಲೇ ಮುಕ್ತಾಯವಾಗಲಿದೆ.

ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?ಬೈಡನ್ ಗೆದ್ದಾಗ ಗಾಲ್ಫ್ ಆಟ, ಟ್ರಂಪ್ ಮುಂದಿನ ನಡೆ ಏನು ಎತ್ತ?

English summary
The Trump campaign filed a lawsuit in Pennsylvania arguing that in-person voters faced more scrutiny than mail-in voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X