• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಬಿಡನ್ ಅತ್ಯಂತ ಕೆಟ್ಟ ಅಭ್ಯರ್ಥಿ: ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 16: ಇಡೀ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಬಿಡನ್ ಅತ್ಯಂತ 'ಕೆಟ್ಟ ಅಭ್ಯರ್ಥಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನವೆಂಬರ್ 3 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡ್ ಈ ರೇಸ್‌ನಲ್ಲಿದ್ದಾರೆ.

ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!

ನಾನು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಕೆಟ್ಟ ಅಭ್ಯರ್ಥಿಯಾಗಿರುವವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅದು ನನ್ನ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ.

ಹಾಗೆಯೇ ಜೋ ಬಿಡನ್ ಭಾಷಣ ಮಾಡುವಾಗ ಹೇಗೆ ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರೋಮ್ನಿ ಅವರ ಹೆಸರನ್ನು ಮರೆತಿದ್ದರು.

ಈ ಚುನಾವಣೆ ಸರಳ ಆಯ್ಕೆಯಾಗಿದೆ.ಬಿಡನ್ ಗೆಲುವು ಸಾಧಿಸಿದರೆ ಚೀನಾ ಗೆಲುವು ಸಾಧಿಸಿದಂತೆ, ಅದೇ ಟ್ರಂಪ್ ಗೆಲುವು ಸಾಧಿಸಿದರೆ ಉತ್ತರ ಕೆರೊಲಿನಾ ಹಾಗೂ ಅಮೆರಿಕ ಗೆಲುವು ಸಾಧಿಸಿದಂತೆ. ಬಿಡನ್ ಒಬ್ಬ ಭ್ರಷ್ಟ ರಾಜಕಾರಣಿ ಎಂದು ಅಮೆರಿಕನ್ನರಿಗೆ ತಿಳಿದಿದೆ.

ಬಿಡನ್ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಒಂದೊಮ್ಮೆ ಅವರು ಗೆದ್ದರೆ ನಿಮ್ಮ ಉದ್ಯೋಗವನ್ನು ಚೀನಾದವರು ವಶಪಡಿಸಿಕೊಳ್ಳಲಿದ್ದಾರೆ. ಬಳಿಕ ಅಮೆರಿಕವನ್ನು ಚೀನಾ ಆಳುವಂತಾಗುತ್ತದೆ.

ಅದೇ ಸಂದರ್ಭದಲ್ಲಿ ಜನರು ನೀವು ಮುಂದಿನ 4 ವರ್ಷ ಇರುತ್ತೀರಿ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎನ್ನುವ ಮಾತುಗಳು ಜನರಿಂದ ಕೇಳಿಬಂತು.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಇನ್ನೊಂದೆಡೆ ಅವಧಿಗೂ ಮೊದಲೇ ಜನಗಣತಿ ನಿಲ್ಲಿಸಲು ಅಮೆರಿಕ ಸುಪ್ರೀಂಕೋರ್ಟ್ ಟ್ರಂಪ್ ಸರ್ಕಾರಕ್ಕೆ ಒಪ್ಪಿಗೆ ನೀಡಿದೆ. ಇದು ಟ್ರಂಪ್ ಬಣಕ್ಕೆ ದೊಡ್ಡ ಗೆಲುವು ತಂದುಕೊಟಿದ್ದು, ಬಹುದಿನಗಳ ತಿಕ್ಕಾಟ ಕೊನೆಗೊಂಡಿದೆ.

ದೇಶಕ್ಕೆ ಎದುರಾಗುತ್ತಿದ್ದ ಸಂಕಷ್ಟಗಳನ್ನು ಹೊಂದಾಣಿಕೆ ಮೂಲಕವೇ ಬಗೆಹರಿಸಿಕೊಂಡು ಬರುತ್ತಿದ್ದ ದೊಡ್ಡಣ್ಣ ಅಮೆರಿಕದಲ್ಲೀಗ ಪ್ರತಿಯೊಂದಕ್ಕೂ ಹೋರಾಟ ಏರ್ಪಟ್ಟಿದೆ. ಒಂದುಕಡೆ ಅಂಚೆ ಮತದಾನದ ಬಡಿದಾಟವಾದ್ರೆ, ಮತ್ತೊಂದ್ಕಡೆ ಜನಗಣತಿ ವಿಚಾರವೂ ಸುಪ್ರೀಂಕೋರ್ಟ್ ಕದ ತಟ್ಟಿದೆ. ಭಾರತದಲ್ಲಿ ನಡೆದಂತೆ ಅಮೆರಿಕದಲ್ಲಿ ಕೂಡ 10 ವರ್ಷಗಳಿಗೆ ಒಮ್ಮೆ ಸೆನ್ಸಸ್ ಅಥವಾ ಜನಗಣತಿ ನಡೆಸಲಾಗುತ್ತದೆ.

English summary
US President Donald Trump has described his presidential challenger Joe Biden as “the single worst candidate in the history of America”, referring to a few recent gaffes of the Democratic leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X