ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್ ತೀರ್ಪಿನ ವಿರುದ್ಧವೇ ಡೊನಾಲ್ಡ್ ಟ್ರಂಪ್ ಆಕ್ರೋಶ

|
Google Oneindia Kannada News

ನ್ಯಾಯಾಲಯದ ವಿರುದ್ಧ ಟ್ರಂಪ್ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಈ ಬಾರಿ ಟ್ರಂಪ್ ಸಿಟ್ಟು ಪೆನ್ಸಿಲ್ವೇನಿಯಾ ಮೇಲ್ಮನವಿ ಕೋರ್ಟ್ ಕಡೆ ತಿರುಗಿದೆ. ಸ್ಯಾಟಲೈಟ್ ಎಲೆಕ್ಷನ್ ಕಚೇರಿಗಳ ಮೇಲ್ವಿಚಾರಣೆಗಾಗಿ ಚುನಾವಣಾ ವೀಕ್ಷಕರಿಗೆ ಮಾಡಿಕೊಂಡ ಮನವಿ ತಿರಸ್ಕರಿಸಲಾಗಿದೆ. ಟ್ರಂಪ್ ಆಡಳಿತ ಸಲ್ಲಿಸಿದ್ದ ಪೆನ್ಸಿಲ್ವೇನಿಯಾ ಮೇಲ್ಮನವಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ.

ತೀರ್ಪಿನ ವಿರುದ್ಧ ಟ್ರಂಪ್ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾವು ಚುನಾವಣೆ ನ್ಯಾಯಯುತವಾಗಿ ನಡೆಯಲಿ ಎಂಬುದನ್ನು ಬಯಸುತ್ತಿದ್ದೇವೆ, ಆದರೆ ಈಗ ಹೊರಬಿದ್ದ ತೀರ್ಪಿನಿಂದ ಸಮಸ್ಯೆಗಳೇ ಹೆಚ್ಚು ಎಂದು ಕೋರ್ಟ್ ತೀರ್ಪಿನ ವಿರುದ್ಧ ಹರಿಹಾಯ್ದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯೋದೆ ಡೌಟ್..?ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯೋದೆ ಡೌಟ್..?

ಚುನಾವಣೆಯ ಬಗ್ಗೆ ಟ್ರಂಪ್ ನಾನಾ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಅಂಚೆ ಮತದಾನ ವಿರೋಧಿಸಿದ್ದರು. ಇದೀಗ ಮತ ಎಣಿಕೆ ಕೇಂದ್ರಗಳ ಬಗ್ಗೆಯೇ ಟ್ರಂಪ್‌ಗೆ ಡೌಟ್ ಹುಟ್ಟಿದೆ. ಹೀಗಾಗಿ ಸ್ಯಾಟಲೈಟ್ ಎಲೆಕ್ಷನ್ ಕಚೇರಿಗಳ ಮೇಲ್ವಿಚಾರಣೆಗೋಸ್ಕರ ಚುನಾವಣಾ ವೀಕ್ಷಕರಿಗೆ ಮನವಿ ಮಾಡಿಕೊಳ್ಳಲಾಗಿತ್ತು.

Trump Angered Over Pennsylvania Court judgement

ಆದರೆ ಟ್ರಂಪ್‌ ಆಡಳಿತದ ಮನವಿ ನ್ಯಾಯಾಲಯದಲ್ಲಿ ರಿಜೆಕ್ಟ್ ಆಗಿದ್ದು, ಅಮೆರಿಕ ಹಾಲಿ ಅಧ್ಯಕ್ಷ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗಿದೆ. ಹೀಗಾಗಿ ರೊಚ್ಚಿಗೆದ್ದು ಟ್ವಿಟ್ಟರ್‌ನಲ್ಲಿ ಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಂಚೆ ಮತದಾನಕ್ಕೆ ಭಾರಿ ವಿರೋಧ
ಕಳೆದ ತಿಂಗಳು ಅಂಚೆ ಮತದಾನದ ವಿರುದ್ಧ ಗುಡುಗಿದ್ದ ಡೊನಾಲ್ಡ್ ಟ್ರಂಪ್, ಈ ಬಾರಿಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನ ಬಹುದೊಡ್ಡ ಬೆದರಿಕೆಯಾಗಿದೆ ಎಂದಿದ್ದರು. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತೆ ಎಂದು ಟ್ರಂಪ್ ಆರೋಪಿಸಿದ್ದರು.

ಟ್ರಂಪ್ ಸೋತರೆ ಗಂಡಾಂತರ: ಜೈಲು ಸೇರಬಹುದು ಇಲ್ಲ ದೇಶ ಬಿಡಬಹುದು..!?ಟ್ರಂಪ್ ಸೋತರೆ ಗಂಡಾಂತರ: ಜೈಲು ಸೇರಬಹುದು ಇಲ್ಲ ದೇಶ ಬಿಡಬಹುದು..!?

ಯಾರದ್ದೋ ಮತ ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರ ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಟ್ರಂಪ್‌ ಹೇಳಿಕೆಗೆ ಬೆಂಬಲವಾಗಿ ಅಮೆರಿಕದ ವಿವಿಧ ಕೋರ್ಟ್‌ಗಳಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈಗ ಸ್ವತಃ ಟ್ರಂಪ್ ಅದೇ ಅಂಚೆ ಮತದಾನ ಪದ್ಧತಿ ಆಧಾರದಲ್ಲಿ ವೋಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!
ಟ್ರಂಪ್ ಬರೀ ಮತದಾನ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ, ಬದಲಾಗಿ ಈ ಬಾರಿ ನಾನು ಸೋತರೆ ಸುಮ್ಮನೆ ಖುರ್ಚಿ ಬಿಟ್ಟು ಹೋಗಲ್ಲ ಎಂದು ಸವಾಲು ಹಾಕಿದ್ದರು. ಈ ಮೂಲಕ ಅಂಚೆ ಮತದಾನದ ವಿರುದ್ಧ ಗುಡುಗಿದ್ದರು. ಆದರೆ ಟ್ರಂಪ್ ಹೇಳಿಕೆಗೆ ಅವರದ್ದೇ ಪಕ್ಷದಲ್ಲಿ ಅಪಸ್ವರ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಎಲ್ಲಾ ಘಟನೆಗಳ ಬೆನ್ನಲ್ಲೇ ಅಮೆರಿಕದ ಮತದಾರರು ಕೂಡ ಅಂಚೆ ಮತದಾನದ ವಿರುದ್ಧವೇ ದಾವೆ ಹೂಡುತ್ತಿದ್ದಾರೆ.

ಈಗಾಗಲೇ ಅವಧಿ ಪೂರ್ವ ಮತದಾನ ಕೂಡ ಆರಂಭವಾಗಿದೆ. ಸುಮಾರು 6 ಕೋಟಿಗೂ ಹೆಚ್ಚು ಅಮೆರಿಕನ್ ವೋಟರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆ ಬಗ್ಗೆಯೇ ಅಧ್ಯಕ್ಷರಿಗೆ ಅನುಮಾನ ಮೂಡಿರುವುದು, ಮತದಾರರಲ್ಲಿ ಭಾರಿ ಗೊಂದಲ ಮೂಡಿಸಿದೆ.

English summary
Trump Angered over Pennsylvania Appeals Court judgement. Court rejects Trump Administration request for Poll Watchers to monitor satellite election offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X