• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ವಿಷ ಹಾಕಲು ಯತ್ನ..?

|

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ವೈಟ್‌ಹೌಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರಿನಲ್ಲಿ ಕಾರ್ಕೋಟಕ ವಿಷ 'ರೈಸಿನ್' ಲೇಪನ ಮಾಡಿದ್ದ ಪತ್ರವೊಂದು ಶ್ವೇತಭವನಕ್ಕೆ ಬಂದಿದ್ದು, ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಪತ್ರವನ್ನು ಪರಿಶೀಲನೆ ನಡೆಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

   White Houseಗೆ ವಿಷದ ಅಂಚೆ ರವಾನೆ | Oneindia Kannada

   ಇದೇ ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ 43 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹೊತ್ತಲ್ಲೇ ಅಮೆರಿಕದ ಶಕ್ತಿಸೌಧದಲ್ಲಿ ಇಂತಹ ಆಘಾತಕಾರಿ ಘಟನೆ ನಡೆದಿರುವುದು ಸಂಚಲನ ಸೃಷ್ಟಿಸಿದೆ. ಈಗಾಗಲೇ ಅಮೆರಿಕದಲ್ಲಿ ನೆಮ್ಮದಿ ಹಾಳಾಗಿ ಹೋಗಿದೆ. ಒಂದು ಕಡೆ ಜನಾಂಗೀಯ ಸಂಘರ್ಷ, ಮತ್ತೊಂದ್ಕಡೆ ಕೊರೊನಾ ಸಂಕಷ್ಟ, ಇದರ ಜೊತೆಗೆ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ವಿಶ್ವದ ದೊಡ್ಡಣ್ಣನನ್ನು ಬೆಚ್ಚಿಬೀಳಿಸಿದೆ. ಪರಿಸ್ಥಿತಿ ಹೀಗಿರುವಾಗಲೇ ವಿಷ ಪತ್ರ ವೈಟ್‌ಹೌಸ್‌ಗೆ ಅಂಚೆ ಮೂಲಕ ರವಾನೆ ಆಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಅಲ್ಲದೆ 2ನೇ ಬಾರಿಗೆ ಅಧ್ಯಕ್ಷರಾಗುವ ಕನಸು ಹೊತ್ತಿರುವ ಡೊನಾಲ್ಡ್ ಟ್ರಂಪ್‌ಗೂ ಕಸಿವಿಸಿ ಉಂಟುಮಾಡಿದೆ.

   ಒಬಾಮಾ ಇದ್ದಾಗಲೂ ವಿಷ ಪತ್ರ ಬಂದಿತ್ತು

   ಒಬಾಮಾ ಇದ್ದಾಗಲೂ ವಿಷ ಪತ್ರ ಬಂದಿತ್ತು

   ಅಮೆರಿಕದ ಶಕ್ತಿಸೌಧ ಹಾಗೂ ಅಲ್ಲಿನ ಆಡಳಿತ ಯಂತ್ರದ ಜೀವನಾಡಿ ವೈಟ್‌ಹೌಸ್‌ಗೆ ಈ ರೀತಿ ವಿಷ ಪತ್ರ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬರಾಕ್ ಒಬಾಮಾ ಅಧಿಕಾರದಲ್ಲಿ ಇದ್ದಾಗಲೂ ಇದೇ ರೀತಿ ವಿಷ ಲೇಪನ ಮಾಡಿದ್ದ ಪತ್ರ ಅಂಚೆ ಮೂಲಕ ಬಂದಿತ್ತು. 2014ರಲ್ಲಿ ಅಂದಿನ ಅಧ್ಯಕ್ಷ ಒಬಾಮಾ ಹೆಸರಿನಲ್ಲಿ ‘ರೈಸಿನ್' ವಿಷಲೇಪಿತ ಪತ್ರಗಳನ್ನು ರವಾನಿಸಿದ್ದ ಆರೋಪದಡಿ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು. ಆಗಲೂ ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತಲ್ಲದೆ, ಅಮೆರಿಕ ಅಧ್ಯಕ್ಷರ ಭದ್ರತೆ ಬಗ್ಗೆ ಆತಂಕ ವ್ಯಕ್ತವಾಗಿತ್ತು.

   ಟಿಕ್ ಟಾಕ್ Oracle, ವಾಲ್ಮಾರ್ಟ್ ಡೀಲ್ ಓಕೆ ಎಂದ ಅಧ್ಯಕ್ಷ ಟ್ರಂಪ್

    72 ಗಂಟೆ ಬದುಕಬಹುದು ಅಷ್ಟೇ..!

   72 ಗಂಟೆ ಬದುಕಬಹುದು ಅಷ್ಟೇ..!

   ‘ರೈಸಿನ್' ಅದೆಷ್ಟು ಕಾರ್ಕೋಟಕ ವಿಷ ಎಂದರೆ, ಒಬ್ಬ ವ್ಯಕ್ತಿಯ ಆಯಸ್ಸನ್ನು ಕೇವಲ 72 ಗಂಟೆಗಳಲ್ಲೇ ಮುಗಿಸಿಬಿಡುವ ಶಕ್ತಿ ಈ ವಿಷಕ್ಕಿದೆ. ಈ ವಿಷದ ಸಂಪರ್ಕಕ್ಕೆ ಬಂದ ವ್ಯಕ್ತಿ 36 ರಿಂದ 72 ಗಂಟೆಗಳ ಒಳಗೆ ಸಾವಿನ ಮನೆ ಸೇರುತ್ತಾನೆ. ಈ ಹಿಂದೆಯೂ ಅಮೆರಿಕದಲ್ಲಿ ಇದೇ ‘ರೈಸಿನ್' ವಿಷ ಬಳಸಿ ಪತ್ರಗಳನ್ನ ಅಂಚೆ ಮೂಲಕ ರವಾನಿಸಿರುವ ಘಟನೆಗಳು ನಡೆದಿದ್ದವು. 2018ರಲ್ಲಿ ವಿಲಿಯಂ ಕ್ಲೈಡ್ ಅಲೆನ್ ಎಂಬ ಕಿರಾತಕ, ಟ್ರಂಪ್ ಹಾಗೂ ಎಫ್‌ಬಿಐ ನಿರ್ದೇಶಕ ಸ್ಟೋಫರ್ ವ್ರೇ ಸೇರಿದಂತೆ ಮತ್ತಿತರ ಅಧಿಕಾರಿಗಳ ಹೆಸರಲ್ಲಿ ವಿಷ ಪತ್ರ ರವಾನಿಸುವ ಬೆದರಿಕೆ ಹಾಕಿದ್ದ.

   ಜೈವಿಕ ಅಸ್ತ್ರವಾಗಿ ಬಳಕೆ..?

   ಜೈವಿಕ ಅಸ್ತ್ರವಾಗಿ ಬಳಕೆ..?

   ಈಗಾಗಲೇ ಹಲವು ವಿನಾಶಕಾರಿ ಅಸ್ತ್ರಗಳು ಮಾನವ ಜಗತ್ತನ್ನು ನಲುಗಿಸಿವೆ. ಇದೇ ರೀತಿ ‘ರೈಸಿನ್' ಕೂಡ ಜೈವಿಕ ಅಸ್ತ್ರವಾಗಿ ಬಳಕೆಯಾಗುತ್ತಿರುವ ಕುರಿತು ಅನುಮಾನಗಳು ಮೂಡಿವೆ. ಇದೀಗ ವೈಟ್‌ಹೌಸ್‌ನಲ್ಲಿ ನಡೆದಿರುವ ಘಟನೆಯನ್ನ ಗಮನಿಸಿದರೆ, ‘ರೈಸಿನ್' ವಿಷವನ್ನು ಜೈವಿಕ ಅಸ್ತ್ರವಾಗಿ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಗುಮಾನಿ ಮೂಡಿದೆ.

   ಕೊರೊನಾ ಒಳ್ಳೆಯದು ಎಂದಿದ್ದರಂತೆ ಟ್ರಂಪ್, ಯಾಕೆ ಗೊತ್ತಾ..?

   2ನೇ ಬಾರಿಗೆ ಅಧ್ಯಕ್ಷರಾಗುವ ಕನಸು

   2ನೇ ಬಾರಿಗೆ ಅಧ್ಯಕ್ಷರಾಗುವ ಕನಸು

   2ನೇ ಬಾರಿಗೆ ಅಧ್ಯಕ್ಷರಾಗುವ ಕನಸು ಹೊತ್ತಿರುವ ಡೊನಾಲ್ಡ್ ಟ್ರಂಪ್‌ಗೂ ಕಸಿವಿಸಿ ಉಂಟುಮಾಡಿದೆ. ಹೀಗಾಗಿಯೇ ಅಮೆರಿಕದ ಗುಪ್ತಚರದಳ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಇದಕ್ಕಾಗಿ ಅಂಚೆ ಇಲಾಖೆಯ ಸಹಕಾರ ಕೋರಿದ್ದು, ವಿಷ ಲೇಪಿತ ಪತ್ರ ರವಾನಿಸಿರುವ ಕ್ರಿಮಿನಲ್ ಜಾಡು ಹಿಡಿಯಲು ಬಲೆ ಬೀಸಿದ್ದಾರೆ.

   English summary
   A package addressed to President Trump that tested positive for the poison ricin was intercepted by federal authorities. a law enforcement official said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X