ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆಯ ಖಾತ್ರಿ ಇಲ್ಲ ಎಂದ ಅಮೆರಿಕದ ಖ್ಯಾತ ವಿಜ್ಞಾನಿಗಳು

|
Google Oneindia Kannada News

ವಾಷಿಂಗ್ಟನ್, ಮೇ 22: ಕೊರೊನಾವೈರಸ್ ಲಸಿಕೆ ಖಾತ್ರಿ ಇಲ್ಲ ಎಂದು ಅಮೆರಿಕದ ಖ್ಯಾತ ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ವೈರಸ್ ವಿಶ್ವದಾದ್ಯಂತ 50 ಲಕ್ಷಕ್ಕೂ ಹೆಚ್ಚು ಮಂದಿಗೆ ಹರಡಿದೆ. ಸಂಶೋದಕರು ಲಸಿಕೆ ಕಂಡು ಹಿಡಿಯಲು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ಆದರೆ ಲಸಿಕೆಯನ್ನು ಕಂಡುಹಿಡಿಯುತ್ತೇವೆ ಎನ್ನುವ ಖಾತ್ರಿ ಇಲ್ಲ ಎಂದಿದ್ದಾರೆ.

Recommended Video

ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

ಕ್ಯಾನ್ಸರ್, ಎಚ್‌ಐವಿ/ಏಡ್ಸ್ ಸಂಶೋಧಕರಾಗಿರುವ ವಿಲಿಯಮ್ ಮಾತನಾಡಿ, ಲಾಕ್‌ಡೌನ್ ಸಡಿಲಗೊಳಿಸುವ ಮುನ್ನ ಸರ್ಕಾರ ಸಾಕಷ್ಟು ಬಾರಿ ಆಲೋಚನೆ ಮಾಡಬೇಕಿದೆ.

ಕೊವಿಡ್ 19 ಮತ್ತೊಂದು ಹಂತ ಎದುರಾದರೂ ಲಾಕ್‌ಡೌನ್ ಇಲ್ಲ: ಟ್ರಂಪ್ಕೊವಿಡ್ 19 ಮತ್ತೊಂದು ಹಂತ ಎದುರಾದರೂ ಲಾಕ್‌ಡೌನ್ ಇಲ್ಲ: ಟ್ರಂಪ್

ಕೊರೊನಾ ಪ್ರಕರಣಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ನಾವು ಲಸಿಕೆ ಕಂಡುಹಿಡಿಯುವುದು ಕೂಡ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಲಸಿಕೆ ಪ್ರಯೋಗ ಯಶಸ್ವಿಯಾಗಿಲ್ಲ

ಲಸಿಕೆ ಪ್ರಯೋಗ ಯಶಸ್ವಿಯಾಗಿಲ್ಲ

ಕೊರೊನಾವೈರಸ್‌ಗೆ ಈ ಹಿಂದೆ ಅಭಿವೃದ್ಧಿಪಡಿಸಿದ ಅನೇಕ ಬಗೆಯ ಲಸಿಕೆಗಳು ಮೂಗಿನ ಲೋಳೆಯ ಪೊರೆಯನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಇದು ವೈರಸ್ ದೇಹಕ್ಕೆ ಪ್ರವೇಶಿಸುವ ಮಾರ್ಗವಾಗಿದೆ ವಿಲಿಯಮ್ ಹೇಳಿದ್ದಾರೆ.

ಲಸಿಕೆ ಇಲ್ಲದೆ ಹಾಗೆಯೇ ಗುಣಪಡಿಸಬಹುದು

ಲಸಿಕೆ ಇಲ್ಲದೆ ಹಾಗೆಯೇ ಗುಣಪಡಿಸಬಹುದು

ಚೀನಾ ಹಾಗೂ ಇತರೆ ಏಷ್ಯನ್ ರಾಷ್ಟ್ರಗಳನ್ನು ನೋಡುವುದಾದರೆ ಲಸಿಕೆ ಇಲ್ಲದೆಯೇ ಕೊರೊನಾವನ್ನು ಗುಣಪಡಿಸಬಹುದು ಎಂಬುದು ಸ್ಪಷ್ಟವಾಗಿದೆ. ಜನರು ಮಾಸ್ಕ್, ಕೈವಸುಗಳನ್ನು ಧರಿಸಿ, ನಿಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೊರೊನಾದಿಂದ ದೂರವಿರಿ ಎಂದಿದ್ದಾರೆ.

ರಾಜಕಾರಣಿಗಳ ಮಾತು ನಂಬಬೇಡಿ

ರಾಜಕಾರಣಿಗಳ ಮಾತು ನಂಬಬೇಡಿ

ರಾಜಕಾರಣಿಗಳ ಮಾತನ್ನು ಎಂದೂ ನಂಬಬೇಡಿ, ಚುನಾವಣೆ ಬರುವ ಹೊತ್ತಿಗಾಗಲೇ ಲಸಿಕೆ ಬಂದುಬಿಡುತ್ತದೆ ಎಂದು ಹೇಳಲಾಗುತ್ತಿದೆ. ಅದು ಚುನಾವಣೆಯ ತಂತ್ರವಷ್ಟೇ , ಆದರೆ ವಿಜ್ಞಾನಿಗಳು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೇ ವೇಳೆಯಲ್ಲಿ ಲಸಿಕೆ ಕಂಡುಹಿಡಿಯಲಾಗುತ್ತದೆ ಎನ್ನುವುದು ಸುಳ್ಳು ಎಂದು ವಿಲಿಯಮ್ ತಿಳಿಸಿದ್ದಾರೆ.

100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ

100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ

ಈಗಾಗಲೇ 100 ಬಗೆಯ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಸಂಪೂರ್ಣವಾಗಿ ಅದು ಜನರಿಗೆ ಲಭ್ಯವಾಗುವಂತೆ ಮಾಡಲು 12-18 ತಿಂಗಳು ಬೇಕಾಗುತ್ತದೆ. ಇದುವರೆಗೆ 3,32,000 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

English summary
As the number of COVID-19 cases steadily surges past the 5 million mark globally, and health experts across the world work frantically towards finding a cure, a top US scientist has warned that a vaccine may not be developed in the near future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X