ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್, ಕಮಲಾ ಹ್ಯಾರಿಸ್ 'ವರ್ಷದ ವ್ಯಕ್ತಿ': ಟೈಮ್ ನಿಯತಕಾಲಿಕೆ ಘೋಷಣೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 11: ಅಮೆರಿಕದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಟೈಮ್ಸ್ ನಿಯತಕಾಲಿಕೆಯ 2020ರ 'ವರ್ಷದ ವ್ಯಕ್ತಿ' ಎಂದು ಆಯ್ಕೆ ಮಾಡಲಾಗಿದೆ.

ಜಗತ್ತಿನಾದ್ಯಂತ ಈ ವರ್ಷ ಮಾಡಲಾದ ಟ್ವೀಟ್‌ಗಳಲ್ಲಿ ಅತಿ ಹೆಚ್ಚುಬಾರಿ ಕಾಣಿಸಿಕೊಂಡ ಟಾಪ್ 10 ವ್ಯಕ್ತಿಗಳಲ್ಲಿ ಮಾಜಿ ಉಪಾಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಎರಡನೆಯ ಸ್ಥಾನದಲ್ಲಿದ್ದಾರೆ. ಅವರ ನಂತರದಲ್ಲಿ ಡೊನಾಲ್ಡ್ ಟ್ರಂಪ್ ಇದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಇರುವ ಏಕೈಕ ಮಹಿಳೆ ಅವರು. ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಸ್ಥಾನದಲ್ಲಿದ್ದಾರೆ.

ಅಧಿಕಾರರೂಢ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನಕ್ಕೆ ಪ್ರವೇಶಿಸುವ ಸ್ಪರ್ಧೆಯಲ್ಲಿ ಸೋಲಿಸಿ ನವೆಂಬರ್ 7ರಂದು ಪೆನ್ಸಿಲ್ವೇನಿಯಾವನ್ನು ಬೈಡನ್ ತಮ್ಮ ವಶಪಡಿಸಿಕೊಳ್ಳುವ ಮೂಲಕ ಅಗತ್ಯವಾದ 270 ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಪಡೆದು ಇಬ್ಬರೂ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಸಿಎನ್ಎನ್ ಹೇಳಿದೆ. ಮುಂದೆ ಓದಿ.

ಅಮೆರಿಕಕ್ಕೆ ಹೊಸ ಭರವಸೆ

ಅಮೆರಿಕಕ್ಕೆ ಹೊಸ ಭರವಸೆ

'ಅಮೆರಿಕದ ಕಥೆಯನ್ನು ಬದಲಿಸಿರುವುದಕ್ಕಾಗಿ, ವಿಭಜನೆಯ ಆಕ್ರೋಶಕ್ಕಿಂತ ಸಹಾನುಭೂತಿಯ ಶಕ್ತಿ ದೊಡ್ಡದು ಎಂದು ತೋರಿಸಿರುವುದಕ್ಕಾಗಿ, ಶೋಕಿಸುತ್ತಿರುವ ಜಗತ್ತಿಗೆ ಗುಣಮುಖವಾಗುವ ಭರವಸೆ ನೀಡಿದ್ದಕ್ಕಾಗಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಟೈಮ್ಸ್‌ 2020ರ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಲಾಗಿದೆ' ಎಂದು ಟೈಮ್ ಸಂಪಾದಕ ಎಡ್ವರ್ಡ್ ಫೆಲ್ಸೆಂಥಲ್ ತಿಳಿಸಿದ್ದಾರೆ.

ಪಟ್ಟು ಬಿಡದ ಜೋ ಬೈಡನ್

ಪಟ್ಟು ಬಿಡದ ಜೋ ಬೈಡನ್

'ಇಂದು ಪ್ರಾಯಶಃ ಅಮೆರಿಕನ್ನರು ಒಪ್ಪಿಕೊಳ್ಳುವ ಏಕೈಕ ಸಂಗತಿಯೆಂದರೆ ತಮ್ಮ ದೇಶದ ಭವಿಷ್ಯ ಉಜ್ವಲವಾಗಿದೆ ಎಂದು. ಅದು ಏಕೆ ಎಂಬದನ್ನು ಅವರು ಒಪ್ಪಿಕೊಳ್ಳದೆ ಇದ್ದರೂ ಸತ್ಯ. ಹಿಡಿತ ಕಳೆದುಕೊಂಡಿದ್ದಾರೆ ಎಂಬ ಎಡಪಂಥೀಯರಿಂದ ತಿರಸ್ಕೃತರಾಗಿ, ಸಮಾಜವಾದಿ ಎಂಬ ಬಲಪಂಥೀಯರ ತಪ್ಪು ವಿವರಣೆಯ ನಡುವೆಯೂ ಅವರು ಮಧ್ಯದಲ್ಲಿನ ನಿಲುವಿಗೆ ಅಚಲವಾಗಿ ಅಂಟಿಕೊಂಡರು. ತಮ್ಮ ಸುತ್ತಲಿನ ಸಾಮಾಜಿಕ, ಡಿಜಿಟಲ್ ಮತ್ತು ಜನಾಂಗೀಯ ಪರಿಸ್ಥಿತಿ ಬದಲಾದರೂ ತಮ್ಮ ನಿಲುವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು' ಎಂದು ಅವರು ಹೇಳಿದ್ದಾರೆ.

ಲೆಬ್ರಾನ್ ಜೇಮ್ಸ್ ವರ್ಷದ ಅಥ್ಲೀಟ್

ಲೆಬ್ರಾನ್ ಜೇಮ್ಸ್ ವರ್ಷದ ಅಥ್ಲೀಟ್

ಕಳೆದ ವರ್ಷ 16 ವರ್ಷದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರನ್ನು ವರ್ಷದ ವ್ಯಕ್ತಿ ಎಂದು ಟೈಮ್ ಆಯ್ಕೆ ಮಾಡಿತ್ತು. ಬಾಸ್ಕೆಟ್ ಬಾಲ್ ದಿಗ್ಗಜ ಲೆಬ್ರಾನ್ ಜೇಮ್ಸ್ ಅವರನ್ನು ಟೈಮ್ 2020ಯ ಅಥ್ಲೀಟ್ ಆಫ್ ದಿ ಇಯರ್ ಎಂದು ಆಯ್ಕೆಮಾಡಲಾಗಿದೆ.

ಜೂಮ್ ವಿಡಿಯೋದ ಎರಿಕ್ ಯುವಾನ್

ಜೂಮ್ ವಿಡಿಯೋದ ಎರಿಕ್ ಯುವಾನ್

ಇನ್ನೊಂದೆಡೆ ಕೋವಿಡ್ 19 ಪಿಡುಗಿನ ಸಂದರ್ಭದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಜೂಮ್ ವಿಡಿಯೋ ಸಂಭಾಷಣೆಯ ಆಪ್‌ನ ಸಿಇಒ ಎರಿಕ್ ಯುವಾನ್ ಅವರನ್ನು ವರ್ಷದ ಉದ್ಯಮ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು, ಡಾ. ಆಂಟೋನಿ ಫೌಸಿ, ಸಾಮಾಜಿಕ ಕಾರ್ಯಕರ್ತರಾದ ಅಸ್ಸಾ ಟ್ರಾವೊರೆ, ಪೊರ್ಷೆ ಬೆನೆಟ್ ಬೇ ಮತ್ತು ಜನಾಂಗೀಯ- ನ್ಯಾಯ ಸಂಘಟಕರನ್ನು ಗಾರ್ಡಿಯನ್ಸ್ ಆಫ್ ದಿ ಇಯರ್ ಎಂದು ಆಯ್ಕೆ ಮಾಡಲಾಗಿದೆ.

English summary
Time Magazine has named US President elect Joe Biden and Vice President Kamala Harris as 2020 Person Of The Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X