ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಆಡಳಿತದ ವಿರುದ್ಧ ಕಾನೂನು ಸಮರ ಆರಂಭಿಸಿದ ಟಿಕ್‌ಟಾಕ್‌

|
Google Oneindia Kannada News

ವಾಷಿಂಗ್ಟನ್, ಆ. 25: ವಿಡಿಯೋ ಹಂಚಿಕೆ ಆ್ಯಪ್ ಟಿಕ್‌ಟಾಕ್‌ ನಿಷೇಧಿಸುವುದಾಗಿ ಬೆದರಿಕೆ ಒಡ್ಡಿರುವ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಹೋರಾಟಕ್ಕೆ ಟಿಕ್‌ ಟಾಕ್ ಒಡೆತನದ ಬೈಟ್ ಡ್ಯಾನ್ಸ್ ಕಂಪನಿ ಮುಂದಾಗಿದೆ.

Recommended Video

Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್‌(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕ ಕೈಗೊಂಡ ಕ್ರಮದ ಕುರಿತು ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕಾ ದಮನಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾ ಆರೋಪಿಸಿತ್ತು. ಇದರ ಬೆನ್ನಲ್ಲೇ ಟಿಕ್ ಟಾಕ್ ನಿಷೇಧಕ್ಕೆ ಅಮೆರಿಕದಲ್ಲಿ ಗಡುವು ನೀಡಿದ ಸುದ್ದಿ ಬಂದಿತ್ತು.

ಚೀನಾದ ಟಿಕ್ ಟಾಕ್- ಟ್ವಿಟ್ಟರ್ ವಿಲೀನದ ಬಗ್ಗೆ ಸುದ್ದಿ ಏನಿದೆ?ಚೀನಾದ ಟಿಕ್ ಟಾಕ್- ಟ್ವಿಟ್ಟರ್ ವಿಲೀನದ ಬಗ್ಗೆ ಸುದ್ದಿ ಏನಿದೆ?

ಇದಾದ ಬಳಿಕ, ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿಯದೆ ಬೇರೆ ದಾರಿ ನಮಗೆ ಕಾಣಿಸಿಲ್ಲ, ನಮ್ಮ ಹಕ್ಕು, ನಮ್ಮ ಸಮುದಾಯ ಹಾಗೂ ಉದ್ಯೋಗಿಗಳ ಹಿತದೃಷ್ಟಿಯಿಂದ ಈ ನಡೆ ಇಡಲಾಗಿದೆ ಎಂದು ಬೈಟ್ ಡ್ಯಾನ್ಸ್ ಪತ್ರಿಕಾ ಹೇಳಿಕೆ ನೀಡಿದೆ ಎಂದು ಸ್ಪುಟ್ನಿಕ್ ತಿಳಿಸಿದೆ.

ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ

ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಭದ್ರತಾ ಹಿತದೃಷ್ಟಿಯ ಹಿನ್ನಲೆಯಲ್ಲಿ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು, ಟಿಕ್‌ಟಾಕ್ ಬ್ಯಾನ್ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್ ಸೇವೆಯನ್ನು ಖರೀದಿಸಲು ಮೈಕ್ರೋಸಾಫ್ಟ್ ಎದುರು ನೋಡುತ್ತಿದೆ ಎಂಬ ಸುದ್ದಿ ಬಂದಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ ಟಾಕ್ ಕಂಪನಿಯನ್ನು ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು ಇಲ್ಲವೆ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ.

ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್

ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್

ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್ ಅನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿದ ಬೆನ್ನಲ್ಲೇ ಟಿಕ್‌ಟಾಕ್ ಖರೀದಿಗೆ ಅಮೆರಿಕದ ಐಟಿ ಕಂಪನಿಗಳು ಮುಂದಾಗಿರುವ ಸುದ್ದಿ ಬಂದಿತ್ತು. ಟಿಕ್ ಟಾಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮೈಕ್ರೋಸಾಫ್ಟ್ ಮಾತುಕತೆ ನಡೆಸುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಟ್ವಿಟ್ಟರ್ ಹಾಗೂ ಟಿಕ್ ಟಾಕ್ ವಿಲೀನದ ಬಗ್ಗೆ ಪೂರ್ವಭಾವಿ ಮಾತುಕತೆ ಬಗ್ಗೆ ವರದಿ ಬಂದಿದೆ.

App Ban: ಭಾರತದ ಹಾದಿ ತುಳಿಯುತ್ತಾ ಅಮೆರಿಕ..?App Ban: ಭಾರತದ ಹಾದಿ ತುಳಿಯುತ್ತಾ ಅಮೆರಿಕ..?

ಅಮೆರಿಕದ ಉದ್ಯೋಗಿಗಳಿಗೆ ಕುತ್ತು

ಅಮೆರಿಕದ ಉದ್ಯೋಗಿಗಳಿಗೆ ಕುತ್ತು

ಅಮೆರಿಕದಲ್ಲಿ 1500 ಉದ್ಯೋಗಿಗಳಿದ್ದಾರೆ. ಅಮೆರಿಕದಲ್ಲೂ ಟಿಕ್ ಟಾಕ್ ಉತ್ತಮ ಮಾರುಕಟ್ಟೆ ಹೊಂದಿದೆ. ನಮ್ಮ ಸಂಸ್ಥೆ ಮೇಲೆ ಹೊರೆಸಿರುವ ಆರೋಪಗಳ ವಿರುದ್ಧ ಕಾನೂನು ಹೋರಾಟಕ್ಕಿಳಿಯಲಾಗಿದೆ. ಅಮೆರಿಕದ ವಿವಿಧ ಸಂಸ್ಥೆಗಳು ನಮ್ಮ ಸಂಸ್ಥೆ ಜೊತೆ ಒಪ್ಪಂದ ಹೊಂದಲು ಮುಂದಾಗಿದ್ದರೂ ಯಾವುದೇ ಒಪ್ಪಂದ ಇನ್ನೂ ಸಫಲವಾಗಿಲ್ಲ ಎಂದು ಬೈಟ್ ಡ್ಯಾನ್ಸ್ ಹೇಳಿದೆ.

ಮಾಹಿತಿ ವರ್ಗಾವಣೆ ಮಾಡದಂತೆ ಕಡಿವಾಣ

ಮಾಹಿತಿ ವರ್ಗಾವಣೆ ಮಾಡದಂತೆ ಕಡಿವಾಣ

2017 ರಲ್ಲಿ ಬೈಟ್ ಡ್ಯಾನ್ಸ್ ಜನಪ್ರಿಯ ಸಂಗೀತ ಅಪ್ಲಿಕೇಶನ್ ಅನ್ನು ಸ್ವಾಧೀನಪಡಿಸಿಕೊಂಡಿತು. ಮಾಹಿತಿಯನ್ನು ತೆಗೆದುಹಾಕಿದ ನಂತರ ವಿದೇಶಿ ಹೂಡಿಕೆ ಸಮಿತಿಯ ಮುಂದೆ ಹಾಜರಾಗುವಂತೆ ಯುನೈಟೆಡ್ ಸ್ಟೇಟ್ಸ್ ಬೈಟ್ ಡ್ಯಾನ್ಸ್ ಅನ್ನು ಕೇಳಿದೆ. ಟಿಕ್ ಟಾಕ್ ಪ್ರಸ್ತುತ ಅಮೆರಿಕಾದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ ಹೊಂದಿರುವ ಅಮೆರಿಕನ್ ಬಳಕೆದಾರರ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕ ಮೂಲದ ಸಂಸ್ಥೆಗಳು ಯತ್ನಿಸುತ್ತಿವೆ.

English summary
Bytedance, Owner of popular video sharing app TikTok has filed a lawsuit against Trump administration challenging US ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X