• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಪ್ರತಿಮೆಗೆ ಹಾನಿ ಮಾಡಿದವರು ಕೊಲೆಗಡುಕರು: ಟ್ರಂಪ್

|

ವಾಷಿಂಗ್ಟನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ ಮಾಡಿದವರು ಕೊಲೆಗಡುಕರು ಅಂತಾ ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪ್ಪು ವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಕಿಡಿಕಾರುವಾಗ, ಗಾಂಧಿ ಪ್ರತಿಮೆ ಹಾಳು ಮಾಡಿದವರ ವಿರುದ್ಧ ಟ್ರಂಪ್ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಟ್ರಂಪ್ 2ನೇ ಅವಧಿಗೆ ಅಮೆರಿಕ ಅಧ್ಯಕ್ಷ ಪಟ್ಟಕ್ಕೇರಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕ್ಯಾಂಪೇನ್‌ನಲ್ಲಿ ಟ್ರಂಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಹೀಗೆ ಮಿನ್ನೆಸೊಟಾ ಪ್ರಾಂತ್ಯದಲ್ಲಿ ನಿಗದಿಯಾಗಿದ್ದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಟ್ರಂಪ್ ಮಾತನಾಡಿದರು, ಈ ಸಂದರ್ಭದಲ್ಲಿ ಟ್ರಂಪ್ ಫ್ಲಾಯ್ಡ್‌ ಹತ್ಯೆ ವಿಚಾರ ಪ್ರಸ್ತಾಪಿಸಿದರು. ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯನ್ನೇ ತಮ್ಮ ಭಾಷಣದ ವಿಷಯವಾಗಿಸಿಕೊಂಡ ಟ್ರಂಪ್, ಉದ್ರಿಕ್ತರ ಗುಂಪು ಅಬ್ರಾಹಂ ಲಿಂಕನ್ ಪ್ರತಿಮೆ ಕೆಡವಲು ಮುಂದಾಯಿತು.

ಗಾಂಧಿ ಕನ್ನಡಕ ಮೂಲಬೆಲೆಗೂ 26 ಪಟ್ಟು ಅಧಿಕ ಮೊತ್ತಕ್ಕೆ ಸೇಲ್

ಆಗ ತಾಳ್ಮೆಯಿಂದ ಇರಿ ಅಂತಾ ನಾನು ಮನವಿ ಮಾಡಿದ್ದೆ. ಆದರೆ ಅದಕ್ಕೆ ಕಿವಿಗೊಡದೇ ಥಾಮಸ್‌ ಜೆಫರ್‌ಸನ್‌ ಸೇರಿದಂತೆ ಎಲ್ಲರ ಪ್ರತಿಮೆಗಳನ್ನೂ ಉರುಳಿಸಿದರು ಎಂದರು. ಇಷ್ಟಕ್ಕೇ ಸುಮ್ಮನಾಗದೆ ಅವರೆಲ್ಲರೂ ವಾಷಿಂಗ್ಟನ್‌ನ ಮಹಾತ್ಮ ಗಾಂಧಿ ಪ್ರತಿಮೆಗೂ ಹಾನಿ ಮಾಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರೆಲ್ಲಾ ಕೊಲೆಗಡುಕರು ಅಂತಾ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.

ಮಹಾತ್ಮ ಗಾಂಧೀಜಿ ಶಾಂತಿದೂತ

ಮಹಾತ್ಮ ಗಾಂಧೀಜಿ ಶಾಂತಿದೂತ

ತಮ್ಮ ಭಾಷಣದುದ್ದಕ್ಕೂ ಗಾಂಧೀಜಿಯನ್ನು ಹೊಗಳಿದ ಟ್ರಂಪ್, ಗಾಂಧೀಜಿ ಶಾಂತಿದೂತ. ಜೀವನದುದ್ದಕ್ಕೂ ಹಿಂಸಾಚಾರ ವಿರೋಧಿಸಲೇ ಬಂದಿದ್ದರು. ಆದರೆ ಅಂತಹ ಮಹಾತ್ಮನ ಪ್ರತಿಮೆಯನ್ನೂ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಏನು ಮಾಡುತ್ತಿದ್ದೇವೆ ಎಂಬುದರ ಅರಿವು ಇರಲಿಲ್ಲ ಎನ್ನುವ ಮೂಲಕ ಅಮೆರಿಕ ಚುನಾವಣಾ ಅಖಾಡದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇಷ್ಟು ದಿನ ಬರೀ ವಿವಾದಗಳಿಂದ ಸದ್ದು ಮಾಡಿದ್ದ ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸುವ ಮೂಲಕ ಪ್ರಬುದ್ಧ ಮತದಾರರ ವೋಟ್ ಬ್ಯಾಂಕ್ ಸೆಳೆಯುವತ್ತ ದಾಪುಗಾಲು ಇಟ್ಟಿದ್ದಾರೆ.

ಭಾರತೀಯರ ಮತ ಸೆಳೆಯುವ ತಂತ್ರ..?

ಭಾರತೀಯರ ಮತ ಸೆಳೆಯುವ ತಂತ್ರ..?

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಡೆಯಲಿರುವ ಮತದಾನದಲ್ಲಿ ಭಾರತೀಯರ ಮತಗಳೇ ನಿರ್ಣಾಯಕ. ಹೀಗಾಗಿ ಟ್ರಂಪ್ ಭಾರತೀಯರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಡೆಮಾಕ್ರಟಿಕ್ ಪಕ್ಷ ತನ್ನ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದೆ. ಇದು ಟ್ರಂಪ್ ಎದುರಾಳಿ ಬಿಡೆನ್ ಪರವಾಗಿ ಭಾರತೀಯರ ಮತಗಳನ್ನು ಒಗ್ಗೂಡಿಸುವ ಜೊತೆಗೆ, ಆಫ್ರಿಕನ್-ಅಮೆರಿಕನ್ ಮತಗಳನ್ನೂ ಕೊಳ್ಳೆಹೊಡೆಯುವ ಮುನ್ಸೂಚನೆ ನೀಡಿದೆ. ಇಂತಹ ಹೊತ್ತಲ್ಲೇ ಭಾರತೀಯರ ಗಮನ ಸೆಳೆಯಲು ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸಿದ್ದಾರೆ ಎಂಬುದು ವಿಪಕ್ಷ ನಾಯಕರ ಆರೋಪ.

'ಮಹಾತ್ಮ ಗಾಂಧಿ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಕ್ಕೆ ಕ್ಷಮೆ ಇರಲಿ'

ಫ್ಲಾಯ್ಡ್ ಹತ್ಯೆ ಕಿಚ್ಚು ಹೊತ್ತಿಸಿತ್ತು

ಫ್ಲಾಯ್ಡ್ ಹತ್ಯೆ ಕಿಚ್ಚು ಹೊತ್ತಿಸಿತ್ತು

ತಣ್ಣಗಿದ್ದ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷದ ಬಿರುಗಾಳಿ ಎಬ್ಬಿಸಿದ್ದು ಜಾರ್ಜ್ ಫ್ಲಾಯ್ಡ್ ಹತ್ಯೆ. ಮೇ 25ರಂದು ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್ ಎಂಬಾತನ ಕುತ್ತಿಗೆ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಫ್ಲಾಯ್ಡ್ ಹತ್ಯೆಯ ವೀಡಿಯೋ ಇಡೀ ಅಮೆರಿಕದಲ್ಲಿ ಹಿಂಸೆಯ ಬೆಂಕಿ ಹೊತ್ತಿಸಿತ್ತು. ವರ್ಣಬೇಧ ನೀತಿ ವಿರೋಧಿಸಿ ಕರಿಯರು, ಬಿಳಿಯರು ಒಟ್ಟಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಡಿಬರಹದಲ್ಲಿ ಈ ಹೋರಾಟ ಈಗಲೂ ನಡೆಯುತ್ತಿದೆ. ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ಹೋರಾಟವಾಗಿದೆ.

''ಟ್ರಂಪ್ ನನ್ನ ಮೈ ಮುಟ್ಟಿ, ಬಲವಂತವಾಗಿ ಮುತ್ತುಕೊಟ್ಟಿದ್ದರು''

ಸೋತ ಜಾಗದಲ್ಲೇ ಗೆಲುವು ಹುಡುಕುತ್ತಾರಾ..?

ಸೋತ ಜಾಗದಲ್ಲೇ ಗೆಲುವು ಹುಡುಕುತ್ತಾರಾ..?

ಟ್ರಂಪ್ ಗಾಂಧೀಜಿ ವಿಷಯ ಪ್ರಸ್ತಾಪಿಸಿರುವ ಮಿನ್ನೆಸೊಟಾ ಪ್ರಾಂತ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡಿದ್ದರು. 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ ಪ್ರಾಂತ್ಯದಲ್ಲಿ ಟ್ರಂಪ್‌ 44,000ಕ್ಕೂ ಅಧಿಕ ಮತಗಳಿಂದ ಸೋತು ಸುಣ್ಣವಾಗಿದ್ದರು. ಈ ಬಾರಿ ಫ್ಲಾಯ್ಡ್ ಹತ್ಯೆ ನಂತರ ಮಿನ್ನೆಸೊಟಾ ಪ್ರಾಂತ್ಯದಲ್ಲಿ ಮತ್ತೆ ಟ್ರಂಪ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಆದರೆ ಡ್ಯಾಮೇಜ್‌ಗೆ ತೇಪೆ ಹಾಕಲು ಖುದ್ದು ಟ್ರಂಪ್ ಮಿನ್ನೆಸೊಟಾ ಪ್ರಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಂಪೇನ್ ವೇಳೆ ಅಹಿಂಸೆಯ ಪಾಠ ಮಾಡಿದ್ದಾರೆ.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಅಮೆರಿಕದಲ್ಲಿ ನೆಮ್ಮದಿಯೇ ಇಲ್ವಾ..?

ಕೆಲ ತಿಂಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೊದಲೇ ಕೊರೊನಾ ಕುಲುಮೆಯಲ್ಲಿ ಬೆಂದಿರುವ ವಿಶ್ವದ ದೊಡ್ಡಣ್ಣನಿಗೆ, ಜನಾಂಗೀಯ ಸಂಘರ್ಷ ದೊಡ್ಡ ತಲೆನೋವಾಗಿದೆ. ಅದರಲ್ಲೂ ಟ್ರಂಪ್ ಆಡಳಿತ ಸಂಘರ್ಷ ಹಾಗೂ ಗಲಭೆಗಳನ್ನು ನಿಭಾಯಿಸುತ್ತಿರುವ ರೀತಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಟ್ರಂಪ್ ಶಾಂತಿ ಮಂತ್ರದ ದಾಳ ಉರುಳಿಸಿದ್ದು, ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

English summary
American President Donald Trump said, those who ruined the Gandhi statue were thugs. And also, he described that Gandhiji is a peacemaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X