ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನ ಮುಂದೆ ಎಚ್‌-1ಬಿ ವೀಸಾ ಚೆಂಡು: ಭಾರತೀಯರಲ್ಲಿ ತಳಮಳ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 22: ಎಚ್-1ಬಿ ವಿದೇಶಿ ಉದ್ಯೋಗ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ನೌಕರಿ ಮಾಡಲು ಅವಕಾಶ ನೀಡುವ ನಿಯಮದಲ್ಲಿ ಬದಲಾವಣೆ ತರುವ ಪ್ರಸ್ತಾವವನ್ನು ಶ್ವೇತಭವನ ಸ್ವೀಕರಿಸಿದೆ.

ಅಮೆರಿಕದ ಈ ನಿರ್ಧಾರದಿಂದ ಎಚ್‌-1ಬಿ ವೀಸಾ ಹೊಂದಿರುವ ಸುಮಾರು 90,000 ಮಂದಿಯ ಸಂಗಾತಿಗಳಿಗೆ ಸಂಕಷ್ಟ ಎದುರಾಗಲಿದ್ದು, ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಈ ಪ್ರಸ್ತಾವವನ್ನು ಶ್ವೇತಭವನದ ಬಜೆಟ್ ನಿರ್ವಹಣಾ ಕಚೇರಿಗೆ ರವಾನಿಸಿದೆ.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಆಯ್ಕೆ ಶ್ವೇತಭವನದ ಮುಂದಿದೆ. ಈ ಪ್ರಸ್ತಾವವನ್ನು ಶ್ವೇತಭವನ ಪರಾಮರ್ಶೆಗೆ ಒಳಪಡಿಸಲಿದ್ದು, ವಿವಿಧ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದೆ. ಇಡೀ ಪ್ರಕ್ರಿಯೆಗೆ ಕೆಲವು ವಾರಗಳಿಂದ ಹಲವು ತಿಂಗಳುಗಳು ಬೇಕಾಗಬಹುದು.

The White House Donald Trump H-1B visa work permits to the spouses department of homeland security

ಪರಾಮರ್ಶೆ ಮತ್ತು ಅಭಿಪ್ರಾಯ ಸಂಗ್ರಹಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಈ ಪ್ರಸ್ತಾವಿತ ನಿಯಮವು ಅಂತಿಮಗೊಳ್ಳುವುದಿಲ್ಲ. ಈಗಿರುವ ಪ್ರಕ್ರಿಯೆಯ ಅನ್ವಯ ಒಮ್ಮೆ ಶ್ವೇತಭವನ ಅದಕ್ಕೆ ಅನುಮೋದನೆ ನೀಡಿದರೆ, 30 ದಿನಗಳ ಸಲಹಾ ಅವಧಿಯೊಂದಿಗೆ ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಿಸಲಾಗುತ್ತದೆ.

ಎಚ್1 ಬಿ ವೀಸಾ ವಂಚನೆ, ಇಂಡೋ -ಅಮೆರಿಕನ್ ಸಿಇಒ ಬಂಧನ ಎಚ್1 ಬಿ ವೀಸಾ ವಂಚನೆ, ಇಂಡೋ -ಅಮೆರಿಕನ್ ಸಿಇಒ ಬಂಧನ

ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಸೇರಿದಂತೆ ಅಮೆರಿಕದ ಅನೇಕ ಸಂಸದರು ನೂತನ ವೀಸಾ ನೀತಿಯನ್ನು ವಿರೋಧಿಸಿದ್ದಾರೆ. ಅಲ್ಲದೆ, ಸಿಲಿಕಾನ್ ವ್ಯಾಲಿ ಕಂಪೆನಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿವೆ. ಇದು ಮಹಿಳಾ ವಿರೋಧಿ ಮಾತ್ರವಲ್ಲ, ಎಚ್‌1ಬಿ ವೀಸಾ ಹೊಂದಿರುವವರ ಪ್ರತಿಭಾವಂತ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡುವುದನ್ನು ತಡೆಯುತ್ತದೆ ಎಂದು ಹೇಳಿವೆ.

English summary
Donald Trump government will take a final call on H-1B Visa rules. Department of Homeland Security sent the proposed changes in the existing regulations. The movie could jeopardize over 90,000 spouses of H-1B holders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X