ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಟ್ಲರ್ ಪಾಲಿನ ಶತ್ರು, ಅಮೆರಿಕ ವಾಯುಪಡೆ ಹೀರೋ ಇನ್ನಿಲ್ಲ

|
Google Oneindia Kannada News

ವಿಶ್ವಯುದ್ಧದ ಸಂದರ್ಭದಲ್ಲಿ ಲೋಹದ ಹಕ್ಕಿ ಏರಿ ಶಬ್ದದ ಬೇಲಿ ಮುರಿದಿದ್ದ, ಅಮೆರಿಕ ವಾಯಪಡೆ ಪಾಲಿನ ರಿಯಲ್ ಹೀರೋ ಚಕ್ ಯೇಗರ್ ವಿಧಿವಶರಾಗಿದ್ದಾರೆ. 1947ರಲ್ಲಿ ಈ ಜಗತ್ತಿನ ಮೊಟ್ಟಮೊದಲ ಸೂಪರ್‌ ಸಾನಿಕ್ ವಿಮಾನ ಏರಿ ಶಬ್ದದ ಗೋಡೆ ಸೀಳಿದ್ದವರು ಚಕ್ ಯೇಗರ್. 1923ರಲ್ಲಿ ಪಶ್ಚಿಮ ವರ್ಜೀನಿಯಾದಲ್ಲಿ ಜನಿಸಿದ್ದ ಚಕ್ ಯೇಗರ್ 1941ರಲ್ಲಿ ಅಂದರೆ ತಮ್ಮ 18ನೇ ವಯಸ್ಸಿಗೆ ಅಮೆರಿಕ ಸೇನೆ ಸೇರಿದ್ದರು. ಆಗಿನ್ನೂ ಹಿಟ್ಲರ್ ಆರ್ಭಟಿಸುತ್ತಿದ್ದ ಸಮಯ. 2ನೇ ಮಹಾಯುದ್ಧ ಗೆಲ್ಲಲು ಇಡೀ ಜಗತ್ತು ಬಡಿದಾಡುತ್ತಿತ್ತು.

ಮಿತ್ರ ಪಡೆ ಹಾಗೂ ಶತ್ರು ಪಡೆ ಕಾಳಗದಲ್ಲಿ ಕೋಟ್ಯಂತ ಜನ ಮೃತಪಟ್ಟಿದ್ದರು. ಅದರಲ್ಲೂ ಸೇನೆ ಸೇರಿಕೊಂಡವ ವಾಪಸ್ ಬರುವುದೇ ಇಲ್ಲವೇನೋ ಎಂಬಂತಹ ಭಯ ಆವರಿಸಿತ್ತು. ಅಂತಹ ಸಂದರ್ಭದಲ್ಲೂ ಚಕ್ ಯೇಗರ್ ದೇಶ ಸೇವೆಗೆ ಮುನ್ನುಗ್ಗಿದ್ದರು. 18 ವರ್ಷದ ಯುವಕ ಆಗಸದಲ್ಲಿ ಲೋಹದ ಹಕ್ಕಿಯನ್ನು ಏರಿ ಸದ್ದು ಮಾಡುತ್ತಿದ್ದಾಗ ಹಿರಿಯ ಅಧಿಕಾರಿಗಳಿಗೆ ಹೆಮ್ಮೆ ಎನಿಸುತ್ತಿತ್ತು. ಚಕ್ ಯೇಗರ್ ಸಾಮರ್ಥ್ಯವನ್ನು ಅರಿತ ಅಮೆರಿಕ ವಾಯುಪಡೆ ಅಧಿಕಾರಿಗಳು ಮಹತ್ವದ ಜವಾಬ್ದಾರಿ ನೀಡಿದ್ದರು. ಹಿಟ್ಲರ್ ಸೇನೆಯ ವಿರುದ್ಧ ಒಟ್ಟು 64 ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಯೇಗರ್, ಜರ್ಮನ್‌ನ 13 ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದ್ದರು.

photo credit: Wikimedia Commons

ಹಿಟ್ಲರ್ ಪಡೆಗಳಿಗೆ ಇವರೇ ಶತ್ರು..!

ಹಿಟ್ಲರ್ ಪಡೆಗಳಿಗೆ ಇವರೇ ಶತ್ರು..!

ಯುರೋಪಿಯನ್ ದೇಶಗಳ ಪಾಲಿನ ಶತ್ರು ಹಾಗೂ ರಷ್ಯಾ ಪಾಲಿನ ಬದ್ಧ ವೈರಿ ಹಿಟ್ಲರ್ ಎಷ್ಟು ಬಲಿಷ್ಠ ಸೇನೆ ಕಟ್ಟಿದ್ದನೆಂದರೆ, ಅಂದಿನ ಕಾಲದಲ್ಲಿ ಅಮೆರಿಕ ಕೂಡ ಹಿಟ್ಲರ್ ವಾಯುಪಡೆ ಕಂಡು ಬೆದರುತ್ತಿತ್ತು. ಇದೆಲ್ಲವನ್ನೂ ಅಮೆರಿಕದ ವಾಯುಪಡೆ ಅಧಿಕಾರಿಗಳು ಧೈರ್ಯದಿಂದ ಎದುರಿಸಿದ್ದರು. ಚಕ್ ಯೇಗರ್ ರೀತಿಯ ಯುವಕ ಹಾಗೂ ಸಾಮರ್ಥ್ಯವಿರುವ ಜನರನ್ನು ಸೇನೆಗೆ ಸೇರಿಸಿ, ತರಬೇತಿ ನೀಡುತ್ತಿದ್ದರು. ಅವರೆಲ್ಲರ ಪೈಕಿ ಯೇಗರ್‌ರ ಸಾಧನೆ ಬಹುದೊಡ್ಡದು.

ಯೇಗರ್‌ ನೇತೃತ್ವದಲ್ಲೂ ಹಲವು ಕಾರ್ಯಾಚರಣೆ

ಯೇಗರ್‌ ನೇತೃತ್ವದಲ್ಲೂ ಹಲವು ಕಾರ್ಯಾಚರಣೆ

ಒಂದು ಕಡೆ ಹಿಟ್ಲರ್ & ಗ್ಯಾಂಗ್ ಕತ್ತು ಮುರಿಯಲು ಸಾಗರ ಸಮರ ನಡೆಯುತ್ತಿದ್ದ ಸಂದರ್ಭದಲ್ಲೇ, ವಾಯು ಪಡೆ ಮೂಲಕವೂ ಮಿತ್ರ ಪಡೆಗಳು ದಾಳಿ ಆರಂಭಿಸಿದ್ದವು. ಒಂದೆಡೆ ರಷ್ಯಾ ಸೇನೆ ನುಗ್ಗುತ್ತಿದ್ದರೆ, ಮತ್ತೊಂದು ಮಾರ್ಗದ ಮೂಲಕ ಅಮೆರಿಕ ಹಾಗೂ ಬ್ರಿಟನ್ ದಾಳಿ ನಡೆಯುತ್ತಿತ್ತು. ಯೇಗರ್‌ ನೇತೃತ್ವದಲ್ಲೂ ಹಲವು ಕಾರ್ಯಾಚರಣೆ ನಡೆದಿದ್ದವು, ಈ ಪೈಕಿ 13 ಜರ್ಮನ್ ವಿಮಾನಗಳನ್ನ ನೆಲಕ್ಕೆ ಬೀಳಿಸಿ ಸಂಭ್ರಮಿಸಿದ್ದರು ಚಕ್ ಯೇಗರ್.

ಶಬ್ದದ ಗೋಡೆ ಮುರಿದಿದ್ದರು..!

ಶಬ್ದದ ಗೋಡೆ ಮುರಿದಿದ್ದರು..!

ಅದು ಅಕ್ಟೋಬರ್ 14, 1947, ಆ ಸಂದರ್ಭದಲ್ಲಿ ಚಕ್ ಯೇಗರ್ ಜಗತ್ತನ್ನ ನಿಬ್ಬೆರಗಾಗಿಸಿದ್ದರು. ಸುಮಾರು 1200 ಕಿಲೋಮೀಟರ್ ವೇಗದಲ್ಲಿ ಸೂಪರ್ ಸಾನಿಕ್ ವಿಮಾನವನ್ನು ಚಲಾಯಿಸಿದ್ದರು. 'ಬೆಲ್ X-1'ನ್ನು ಅಮೆರಿಕ ಗುಟ್ಟಾಗಿ ತಯಾರಿಸಿತ್ತು. ರಾಕೆಟ್ ಎಂಜಿನ್ ಸಾಮರ್ಥ್ಯದ ಬೆಲ್ X-1 ಜಗತ್ತಿನ ಮೊಟ್ಟಮೊದಲ ಸೂಪರ್ ಸಾನಿಕ್ ವಿಮಾನ. ಈ ವಿಮಾನವನ್ನು ಯೇಗರ್ ಸುಮಾರು 1200 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸಿದ್ದರು. ಅಕ್ಟೋಬರ್ 14, 1947 ಯೇಗರ್ ಈ ಸಾಧನೆ ಮಾಡಿದ್ದರೂ, ಅದನ್ನ ಜಗತ್ತಿಗೆ ತಿಳಿಸಿದ್ದು ಮಾತ್ರ 1948ರಲ್ಲಿ. ಭದ್ರತಾ ಕಾರಣಗಳಿಂದ ಈ ವಿಚಾರವನ್ನು ಅಮೆರಿಕ ಗುಟ್ಟಾಗಿಯೇ ಇಟ್ಟಿತ್ತು.

89ನೇ ವಯಸ್ಸಲ್ಲಿ ಫೈಟರ್ ಜೆಟ್ ಏರಿದ್ದರು..!

89ನೇ ವಯಸ್ಸಲ್ಲಿ ಫೈಟರ್ ಜೆಟ್ ಏರಿದ್ದರು..!

ತಮ್ಮ 18ನೇ ವಯಸ್ಸಿಂದಲೂ ಅಮೆರಿಕ ವಾಯುಪಡೆಗೆ ಸೇವೆ ಸಲ್ಲಿಸಿದ್ದ ಚಕ್ ಯೇಗರ್ 89ನೇ ವಯಸ್ಸಲ್ಲೂ ಫೈಟರ್ ಜೆಟ್ ಏರಿದ್ದರು. 2012ಕ್ಕೆ ಚಕ್ ಯೇಗರ್ ಮೊಟ್ಟಮೊದಲ ಸೂಪರ್ ಸಾನಿಕ್ ವಿಮಾನ ಹಾರಿಸಿ 65 ವರ್ಷ ತುಂಬಿತ್ತು. ಈ ಸವಿ ನೆನಪಿಗೆ ಮತ್ತೊಮ್ಮೆ ಫೈಟರ್ ಜೆಟ್ ಹಾರಿಸಿದ್ದರು. ಅಮೆರಿಕ ವಾಯುಪಡೆಯ F-15 ಯುದ್ಧ ವಿಮಾನದ ಮೂಲಕ ಮತ್ತೊಮ್ಮೆ ಲೋಹದ ಹಕ್ಕಿಯಲ್ಲಿ ಹಾರಾಡಿದ್ದರು. ಜೀವನದ ಕೊನೆಯ ದಿನಗಳವರೆಗೂ ಅದೇ ಹುಮ್ಮಸ್ಸಿನಲ್ಲಿದ್ದ ಚಕ್ ಯೇಗರ್ ವಿಧಿವಶರಾಗಿದ್ದು, ಈ ವಿಚಾರವನ್ನು ಯೇಗರ್ ಪತ್ನಿ ಖಚಿತಪಡಿಸಿದ್ದಾರೆ. ಕ್ಯಾಲಿಫೋರ್ನಿಯದ ಲಾಸ್ ಏಂಜಲೀಸ್‌ ನಿವಾಸದಲ್ಲಿ ಯೇಗರ್ ಮೃತಪಟ್ಟಿದ್ದಾರೆ.

English summary
Legend pilot and American air force officer Chuck Yeager died at the age of 97 in California. Chuck Yeager was the first pilot to ride world’s first supersonic aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X