ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಅಭಿವೃದ್ಧಿಗೆ ಭಾರತೀಯರ ಶ್ರಮ ಅಪಾರ: ಬಿಡೆನ್

|
Google Oneindia Kannada News

ಭಾರತ ಮೂಲದ ಅಮೆರಿಕನ್ನರು ಈ ದೇಶದ ಅಭಿವೃದ್ಧಿಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬಿಡೆನ್ ಹೇಳಿದ್ದಾರೆ. ಭಾರತ ಮೂಲದ ಅಮೆರಿಕನ್ನರು ಆಯೋಜಿಸಿದ್ದ ವರ್ಚುವಲ್ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಬಿಡೆನ್ ಮಾತನಾಡಿದರು. ಈ ವೇಳೆ ಭಾರತೀಯರನ್ನು ಕೊಂಡಾಡಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಡೊನಾಲ್ಡ್ ಟ್ರಂಪ್ ಪ್ರತಿಸ್ಪರ್ಧಿ ಬಿಡೆನ್, ಭಾರತೀಯರ ಕೊಡುಗೆ ಸ್ಮರಿಸಿದರು.

ಅಮೆರಿಕ ಒಂದು ವಲಸಿಗರ ದೇಶವಾಗಿದೆ. ನಾವೆಲ್ಲರೂ ಈ ವಲಸಿಗರ ದೇಶದ ಪ್ರಜೆಗಳು. ಹಾಗೇ ಭಾರತದಿಂದ ಅಮೆರಿಕ ಕಡೆಗೆ ವಲಸೆ ಬಂದು, ಅಮೆರಿಕದ ಅಭಿವೃದ್ಧಿಗೆ ಶ್ರಮಿಸಿರುವ ಎಲ್ಲಾ ಭಾರತೀಯರಿಗೂ ನನ್ನ ಧನ್ಯವಾದಗಳು ಎಂದರು. ಈ ಮೂಲಕ ಬಿಡೆನ್ ಟ್ರಂಪ್‌ಗೆ ಮತ್ತೆ ಶಾಕ್ ಕೊಟ್ಟಿದ್ದಾರೆ. ಏಕೆಂದರೆ ಅತ್ತ ಟ್ರಂಪ್ ಅಮೆರಿಕ ಬಿಳಿಯರ ಸ್ವತ್ತು ಎನ್ನುವ ರೀತಿ ಬಿಂಬಿಸುತ್ತಿದ್ದರೆ, ಇತ್ತ ಬಿಡೆನ್ 'ಸರ್ವ ಜನಾಂಗದ ಶಾಂತಿಯ ತೋಟ' ಎನ್ನುತ್ತಾ ಶಾಂತಿಯ ಮಂತ್ರವನ್ನು ಜಪಿಸುತ್ತಿದ್ದಾರೆ. ಇದು ಡೆಮಾಕ್ರಟಿಕ್ ಪಕ್ಷದ ಪರ ಭಾರತೀಯರ ಮತ ಸೆಳೆಯುವಲ್ಲಿ ಸಹಕಾರಿಯಾಗುತ್ತಿದೆ.

ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ ಟ್ರಂಪ್‌ಗೆ ಸೋಲುವ ಆತಂಕ, ವೋಟಿಂಗ್ ಮೇಲೆ ಅನುಮಾನ

H1B Visa ಹಿಂದಿನ ಸ್ಥಿತಿಗೆ ಮರಳಲಿದೆ..!

H1B Visa ಹಿಂದಿನ ಸ್ಥಿತಿಗೆ ಮರಳಲಿದೆ..!

ಟ್ರಂಪ್ ತಮ್ಮ ಆಡಳಿತಾವಧಿಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು H1B Visa ಮೇಲಿನ ನಿರ್ಬಂಧ ಹಾಗೂ ವೀಸಾ ವಿತರಣೆಯಲ್ಲಿ ಕೈಗೊಂಡ ಬದಲಾವಣೆಗಳಿಂದ. ಆದರೆ ಇದೀಗ ಜೋ ಬಿಡೆನ್ ಇದೇ ಜುಟ್ಟು ಹಿಡಿದು ಟ್ರಂಪ್‌ಗೆ ಟಾಂಗ್ ಕೊಡುತ್ತಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಹುಡುಕುವವರು ಹಾಗೂ ನೆಲೆ ಕಂಡಕೊಳ್ಳುವ ಪ್ರತಿಭಾವಂತರಲ್ಲಿ ಭಾರತೀಯರದ್ದೇ ಮೇಲುಗೈ. H1B Visa ಬಳಸಿಕೊಂಡು ಭಾರತದ ಪ್ರತಿಭಾವಂತರು ಆ ದೇಶಕ್ಕೆ ವಲಸೆ ಹೋಗುತ್ತಾರೆ. ಆದರೆ ಟ್ರಂಪ್ ತಂದ ಬದಲಾವಣೆಯಿಂದ ಭಾರತೀಯರ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹೀಗಾಗಿ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ H1B Visa ನಿಯಮವನ್ನು ಈ ಹಿಂದಿನ ಸ್ಥಿತಿಗೆ ಮರಳಿಸುವ ಬಗ್ಗೆ ಬಿಡೆನ್ ಭರವಸೆ ನೀಡಿದ್ದಾರೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಟ್ರಂಪ್ ಮಾಡಿದ ಡ್ಯಾಮೇಜ್ ಸರಿ ಮಾಡುವೆ

ಟ್ರಂಪ್ ಮಾಡಿದ ಡ್ಯಾಮೇಜ್ ಸರಿ ಮಾಡುವೆ

ತಮ್ಮ ಭಾಷಣದ ಉದ್ದಕ್ಕೂ ಅಮೆರಿಕದ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟುಗಳನ್ನೇ ಬಿಡೆನ್ ಪ್ರಸ್ತಾಪಿಸಿದರು. ತಮ್ಮ ಪ್ರತಿಸ್ಪರ್ಧಿಯ ವೀಕ್ನೆಸ್ ಬಗ್ಗೆ ಸರಿಯಾಗೇ ಅರಿತಿರುವ ಬಿಡೆನ್, ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಮೂಲದ ಅಮೆರಿಕನ್ ಪ್ರಜೆಗಳ ಮನ ಗೆದ್ದರು. ಟ್ರಂಪ್ ಅಮೆರಿಕದ ಸ್ನೇಹಿತ ರಾಷ್ಟ್ರಗಳ ಜೊತೆ ಮಾಡಿರುವ ಡ್ಯಾಮೇಜ್ ಹಾಗೂ ಅಮೆರಿಕದ ಬಗ್ಗೆ ಮೂಡಿಸಿರುವ ದ್ವಂಧ್ವ ಅಭಿಪ್ರಾಯ ಸರಿಮಾಡುವೆ ಎಂಬ ಭರವಸೆಯನ್ನೂ ಜೋ ಬಿಡೆನ್ ನೀಡಿದ್ದಾರೆ. ಈ ಮೂಲಕ ಟ್ರಂಪ್ ವೋಟ್‌ ಬ್ಯಾಂಕ್‌ನ ಜೇನುಗೂಡಿಗೆ ಬಿಡೆನ್ ಕಲ್ಲು ಎಸೆದಿದ್ದಾರೆ.

ನಂಬಿಕೆ ಕಳೆದುಕೊಳ್ಳುತ್ತಿರುವ ಟ್ರಂಪ್..?

ನಂಬಿಕೆ ಕಳೆದುಕೊಳ್ಳುತ್ತಿರುವ ಟ್ರಂಪ್..?

ಕೊರೊನಾ ವೈರಸ್ ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಟ್ರಂಪ್ ಫ್ಲಾಪ್ ಆಗಿದ್ದಾರೆ ಅಂತಾ ಇತ್ತೀಚೆಗೆ ಸಮೀಕ್ಷೆಯೊಂದರ ವರದಿ ಹೇಳಿದೆ. ಅಮೆರಿಕ ಮಿತ್ರ ರಾಷ್ಟ್ರಗಳಲ್ಲಿ ನಡೆಸಿರುವ ಸಮೀಕ್ಷೆ ಆಧರಿಸಿ ಈ ವರದಿ ನೀಡಲಾಗಿತ್ತು. ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ಗಿಂತಲೂ ಟ್ರಂಪ್ ಹಿಂದೆ ಉಳಿದಿದ್ದಾರೆ. ಈ ವಿಚಾರದಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಮೇಲೆ ಜನರಿಗೆ ನಂಬಿಕೆ ಇಲ್ಲವಾಗಿದೆ ಎಂಬ ವರದಿ ಟ್ರಂಪ್ ವಿರುದ್ಧದ ಅಸಮಾಧಾನವನ್ನು ಬಿಂಬಿಸುವಂತಿತ್ತು. ಇದರ ನಡುವೆ ಬಿಡೆನ್ ಕೂಡ ಟ್ರಂಪ್ ವೋಟ್‌ ಬ್ಯಾಂಕ್‌ಗೆ ಲಗ್ಗೆ ಹಾಕುತ್ತಿದ್ದಾರೆ.

'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ''ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ'

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಬಿಡೆನ್ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಟ್ರಂಪ್ ಹವಾಮಾನ ವೈಪರಿತ್ಯದ ಕುರಿತು ಸಂವಾದವೊಂದರಲ್ಲಿ ನೀಡಿದ್ದ ಹೇಳಿಕೆಗೆ ಬಿಡೆನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಟ್ರಂಪ್ ಕಿಚ್ಚು ಹಚ್ಚುವ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದರು. ಅಮೆರಿಕದಲ್ಲಿ ಚುನಾವಣಾ ಕಾವು ರಂಗೇರುತ್ತಿರುವ ಸಂದರ್ಭದಲ್ಲೇ ಕ್ಯಾಲಿಫೋರ್ನಿಯ ಕಾಡ್ಗಿಚ್ಚಿನ ವಿಚಾರವೂ ಪ್ರಚಾರದ ಅಜೆಂಡಾ ಆಗಿ ಬದಲಾಗಿದೆ. ಈ ಮಧ್ಯೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದ ಟ್ರಂಪ್, ವಾತಾವರಣ ತಣ್ಣಗಾಗುತ್ತಿದೆ. ಕಾದು ನೋಡಿ, ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದರು. ಹೀಗೆ ವಿಜ್ಞಾನಿಗಳಿಗೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜ್ಞಾನ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದು ಟ್ರಂಪ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.

Recommended Video

Dasara ಉದ್ಘಾಟನೆಯಲ್ಲಿ ಈ ಬಾರಿ 200 ಮಂದಿಗೆ ಮಾತ್ರ ಅವಕಾಶ | Oneindia Kannada
ಫಲಿತಾಂಶದ ದಿಕ್ಕು ಬದಲಿಸುತ್ತಾರಾ ಕಮಲಾ..?

ಫಲಿತಾಂಶದ ದಿಕ್ಕು ಬದಲಿಸುತ್ತಾರಾ ಕಮಲಾ..?

ಅಮೆರಿಕ ರಾಜಕಾರಣದಲ್ಲಿ ಮುಖ್ಯಪಾತ್ರವಹಿಸುವ ಕ್ಯಾಲಿಫೋರ್ನಿಯ ರಾಜ್ಯವನ್ನು ಸೆನೆಟ್‌ನಲ್ಲಿ ಪ್ರತಿನಿಧಿಸುವ ಕಮಲಾ ಹ್ಯಾರಿಸ್ ಪರ ಜನ ಬೆಂಬಲ ವ್ಯಕ್ತವಾಗುತ್ತಿದೆ. ಹೀಗೆ ಕಮಲಾ ಹ್ಯಾರಿಸ್ ಮತಬೇಟೆಯಲ್ಲಿ ಮತ್ತಷ್ಟು ಯಶಸ್ವಿಯಾದರೆ ಫಲಿತಾಂಶದ ದಿಕ್ಕು ಬದಲಾಗಲಿದೆ. ನವೆಂಬರ್ 3ರ ಚುನಾವಣೆಯಲ್ಲಿ ಸುಮಾರು 1.3 ಕೋಟಿ ಭಾರತ ಮೂಲದ ಅಮೆರಿಕನ್ನರು ಹಕ್ಕು ಚಲಾಯಿಸಲಿದ್ದಾರೆ. ಹೀಗಾಗಿ ಭಾರತೀಯರ ವಿಶ್ವಾಸ ಗಿಟ್ಟಿಸಲು ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಜಿದ್ದಿಗೆ ಬಿದ್ದಿದ್ದಾರೆ. ಆದರೆ ಭಾರತ ಮೂಲದ ಮತದಾರರ ಯಾರ ಪರ ಮತ ಚಲಾಯಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

English summary
Joe Biden Said the Indians efforts for American development were immense. Also, he promised to make changes in H1B Visa law, which will be helpful for Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X