ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಹಿಂದಿರುವ ಪ್ರಮುಖ ಕಾರಣಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿಯವರು 3 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ.

ಅಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ತೆರಳಿದ ಬಳಿಕ ಇದೇ ಮೊದಲ ವಿದೇಶ ಪ್ರವಾಸ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆ. 24 ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದು ಜೋ ಬೈಡನ್ ಅವರು ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿಯಾಗಿದೆ.

ಮೋದಿ ಅವರು ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಪ್ರಸ್ತುತ ಪ್ರಾದೇಶಿಕ ಭದ್ರತೆಯ ಪರಿಸ್ಥಿತಿಯ ಕುರಿತು ಉಭಯ ಮುಖಂಡರು ಚರ್ಚಿಸಲಿದ್ದಾರೆ.

"ಮೂಲಭೂತವಾದ, ಉಗ್ರವಾದ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಜಾಗತಿಕ ಭಯೋತ್ಪಾದಕರ ಜಾಲವನ್ನು ಕಿತ್ತುಹಾಕುವ ಅಗತ್ಯವನ್ನು ಉಭಯ ಮುಖಂಡರೂ ಚರ್ಚಿಸಲಿದ್ದಾರೆ" ಎಂದು ಶೃಂಗ್ಲಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿ ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಯುಎಸ್ ಪ್ರವಾಸದ ಸಂಪೂರ್ಣ ಮಾಹಿತಿ

ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಕ್ವಾಡ್ ಸಭೆ ನಡೆಯಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹೈದೆ ಸುಗಾ ಜೊತೆಗೆ ಮೋದಿ ಮತ್ತು ಬೈಡೆನ್ ಭಾಗವಹಿಸಲಿದ್ದಾರೆ.

ಕ್ವಾಡ್ ಸಭೆಯಲ್ಲಿ ಭಾಗವಹಿಸಲಿರುವ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಪ್ರಧಾನಿಯವರು ಅಮೆರಿಕಾಗೆ ಭೇಟಿ ನೀಡುತ್ತಿರುವ ಸಮಯದಲ್ಲಿ, ಆ ದೇಶದ ಪರಿಸ್ಥಿತಿ ಮತ್ತು ಪ್ರದೇಶದ ಮೇಲಿನ ಅದರ ಪ್ರಭಾವ ಕುರಿತಾದ ಮಾತುಕತೆ ಕಾರ್ಯಸೂಚಿಯಲ್ಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

 ಮೋದಿ ಅಮೆರಿಕ ಭೇಟಿಯ ಪ್ರಮುಖ ಕಾರಣಗಳು

ಮೋದಿ ಅಮೆರಿಕ ಭೇಟಿಯ ಪ್ರಮುಖ ಕಾರಣಗಳು

ಒಟ್ಟು ನಾಲ್ಕು ದೇಶಗಳ ನಾಯಕರ ಜತೆ ಸಭೆ ನಡೆಯಲಿದೆ, ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ನಡುವೆ ಮಾತುಕತೆ ನಡೆಯಲಿದೆ. ಇಂಡೋ ಪೆಸಿಫಿಕ್ ದೇಶಗಳಿಗೆ ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿದ ಬಳಿಕ ಮಾರ್ಚ್ 12ರಂದು ವರ್ಚ್ಯುವಲ್ ಸಭೆ ನಡೆದಿತ್ತು.

 ಕಮಲಾ ಹ್ಯಾರಿಸ್‌ ಅವರೊಂದಿಗೆ ಮಾತುಕತೆ

ಕಮಲಾ ಹ್ಯಾರಿಸ್‌ ಅವರೊಂದಿಗೆ ಮಾತುಕತೆ

ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಆ್ಯಪಲ್ ಸಿಇಓ ಟೀಮ್ ಕುಕ್ ಸೇರಿದಂತೆ ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳ ಸಿಇಓಗಳನ್ನು ಆಹ್ವಾನಿಸುವರು. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು. ಬಳಿಕ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಕಮಲಾ ಹ್ಯಾರಿಸ್, ಭಾರತ ಮೂಲದವರು. ಹೀಗಾಗಿ ತಮ್ಮ ಆಡಳಿತಾವಧಿಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳನ್ನು ಜಾರಿಗೆ ತರಬೇಕೆಂದು ಕಮಲಾ ಹ್ಯಾರಿಸ್ ಜೊತೆಗೆ ನರೇಂದ್ರ ಮೋದಿ ಚರ್ಚೆ ನಡೆಸುವರು.

 ಕ್ವಾಡ್ ಸಭೆ

ಕ್ವಾಡ್ ಸಭೆ

ಸೆ. 24ರಂದು ಕ್ವಾಡ್‌ ಸಭೆ ನೇಪಥ್ಯದಲ್ಲಿ ಪ್ರಧಾನಿ ಮೋದಿ - ಜೋ ಬೈಡನ್‌ ದ್ವಿಪಕ್ಷೀಯ ಸಭೆ ನಿಗದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಅರಾಜಕತೆ, ಭಾರತದಲ್ಲಿ ಹೂಡಿಕೆ, ರಕ್ಷಣಾ ಸಹಯೋಗ ವೃದ್ಧಿ, ಭಯೋತ್ಪಾದನೆ ನಿಗ್ರಹ, ಸ್ವಚ್ಛ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮೂಲದ ಅಮೆರಿಕ ಉಪಾಧ್ಯಕೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

 ಸೆ.25ರಂದು ಪ್ರಧಾನಿ ಮೋದಿ ಭಾಷಣ

ಸೆ.25ರಂದು ಪ್ರಧಾನಿ ಮೋದಿ ಭಾಷಣ

ಸೆಪ್ಟಂಬರ್ 25ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವರು. ಸೆೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರು. 2019ರಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಖುದ್ದಾಗಿ ಹೋಗಿ ಭಾಗವಹಿಸಿದ್ದರು. 2020ರಲ್ಲಿ ಕೊರೊನಾದ ಕಾರಣದಿಂದ ವರ್ಚುವಲ್ ಆಗಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದಿಂದಲೇ ಮಾತನಾಡಿದ್ದರು. ಈಗ ಖುದ್ದಾಗಿ ಹೋಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವರು.

 ಶಿತಲ ಸಮರಕ್ಕೆ ಗುಡ್‌ಬೈ

ಶಿತಲ ಸಮರಕ್ಕೆ ಗುಡ್‌ಬೈ

ಚೀನ ಸೇರಿದಂತೆ ಜಗತ್ತಿನ ಯಾವುದೇ ರಾಷ್ಟ್ರದ ವಿರುದ್ಧ ಅಮೆರಿಕ ಶೀತಲ ಸಮರ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸದ್ಯದಲ್ಲೇ ಘೋಷಿಸುವ ಸಾಧ್ಯತೆ ಇದೆ. ಸೆ.25ರಂದು ವಿಶ್ವಸಂಸ್ಥೆ 76ನೇ ಮಹಾಧಿವೇಶನ ನಡೆಯಲಿದೆ. ಅದರಲ್ಲಿ ಜೋ ಬೈಡನ್ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಈ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

English summary
Prime Minister Narendra Modi leaves for the US on a three-day visit on Wednesday, with stops in Washington and New York. This is his first foreign trip since March last year when he visited Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X