• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವಸಂಸ್ಥೆಯನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರ ತರಲು ಇದೊಂದೇ ದಾರಿ

|

ವಾಷಿಂಗ್ಟನ್, ಅಕ್ಟೋಬರ್ 9: ವಿಶ್ವಸಂಸ್ಥೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಸದಸ್ಯ ರಾಷ್ಟ್ರಗಳು ಒಂದೊಮ್ಮೆ ಹಣ ಪಾವತಿಸದಿದ್ದರೆ ಮುಂದಿನ ತಿಂಗಳ ಸಂಬಳಕ್ಕೂ ತತ್ವಾರ ಎದುರಾಗಲಿದೆ.

ಹಾಗಾದರೆ ವಿಶ್ವಸಂಸ್ಥೆಯನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತರಲು ದಾರಿ ಯಾವುದಿದೆ ಎನ್ನುವದರ ಕುರಿತು ಆಲೋಚಿಸಬೇಕಿದೆ.

ಈಗಾಗಲೇ ವಿಶ್ವಸಂಸ್ಥೆಯು 16,326 ಸಾವಿರ ಕೋಟಿ ರೂ. ಕೊರತೆಯನ್ನು ಎದುರಿಸುತ್ತದ್ದು,ಅಕ್ಟೋಬರ್ ಅಂತ್ಯದ ವೇಳೆ ಖಜಾನೆ ಸಂಪೂರ್ಣವಾಗಿ ಖಾಲಿಯಾಗಲಿದೆ. ಅಲ್ಪಸ್ವಲ್ಪ ಉಳಿದಿರುವ ಮೊತ್ತ ಕೂಡ ಇದೇ ತಿಂಗಳು ಖಾಲಿಯಾಗಲಿದೆ.

ಅಕ್ಟೋಬರ್ ಕೊನೆ ಹೊತ್ತಿಗೆ ವಿಶ್ವಸಂಸ್ಥೆಯ ಬಳಿ ಖರ್ಚಿಗೂ ಹಣವಿಲ್ಲ

ಹೀಗಾಗಿ ವೆಚ್ಚವನ್ನು ಕಡಿಮೆಗೊಳಿಸಲು ಸಮ್ಮೇಳನ, ಸಭೆ ನಡೆಸುವುದನ್ನು ಮುಂದೂಡಿದ್ದೇವೆ, ಅಧಿಕಾರಿಗಳ ಪ್ರವಾಸವನ್ನು ಸಹ ತಡೆ ಹಿಡಿಯಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ತಿಳಿಸಿದ್ದಾರೆ.

ಸದಸ್ಯ ರಾಷ್ಟ್ರಗಳಲ್ಲಿ ಹಣಕ್ಕೋಸ್ಕರ ಬೇಡಿಕೆ ಸಲ್ಲಿಸಿದ್ದರೂ ಯಾರೂ ನೆರವು ನೀಡಲು ಮುಂದಾಗಿಲ್ಲ ಎನ್ನುವುದು ವಿಶ್ವಸಂಸ್ಥೆಯ ಅಸಮಾಧಾನವಾಗಿದೆ.

ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ

ಜುಲೈ ತಿಂಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಅಗತ್ಯವುಳ್ಳ ಬಜೆಟ್‌ನ್ನು ಮಂಡಿಸಲಾಗಿತ್ತು. ಆ ಪ್ರಕಾರ 2019ರ ಜುಲೈ 1ರಿಂದ , 2020ರ ಜೂನ್ 30ರವರೆಗೆ ಸುಮಾರು 46,140 ಕೋಟಿ ಅವಶ್ಯಕತೆ ಎಂದು ತಿಳಿಸಲಾಗಿತ್ತು.

ಹಾಗಿದ್ದರೂ ಈ ಮೊತ್ತ ವಿಶ್ವಸಂಸ್ಥೆಯ 14 ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ , 12ಕ್ಕಷ್ಟೇ ಸಾಲುತ್ತದೆ.

ಹಣಕಾಸಿನ ನೆರವು ಸದಸ್ಯ ರಾಷ್ಟ್ರಗಳ ಜವಾಬ್ದಾರಿಯಾಗಿದೆ

ಹಣಕಾಸಿನ ನೆರವು ಸದಸ್ಯ ರಾಷ್ಟ್ರಗಳ ಜವಾಬ್ದಾರಿಯಾಗಿದೆ

ಶಾಂತಿಪಾಲನಾ ಕಾರ್ಯಾಚರಣೆಯನ್ನು ಸ್ಥಾಪಿಸುವುದು, ನಿರ್ವಹಿಸುವುದು, ಅಥವಾ ವಿಸ್ತರಿಸುವ ಬಗ್ಗೆ ನಿರ್ಧಾರಗಳನ್ನು ಭದ್ರತಾ ಮಂಡಳಿ ತೆಗೆದುಕೊಳ್ಳುತ್ತದೆ.ಆದರೆ ಶಾಂತಿ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯವುಳ್ಳ ಹಣಕಾಸಿನ ನೆರವನ್ನು ಒದಗಿಸುವುದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಜವಾಬ್ದಾರಿಯಾಗಿದೆ.

ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ, ಇಂಗ್ಲೆಂಡ್ ಮಾತ್ರ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ನಿರ್ವಹಣೆಗೆ ಹೆಚ್ಚಿನ ಪಾಲನ್ನು ಪಾವತಿಸುತ್ತದೆ.

ವಿಶ್ವಸಂಸ್ಥೆಯ ಟಾಪ್ 10 ಪಾವತಿದಾರರು ಯಾರು?

ವಿಶ್ವಸಂಸ್ಥೆಯ ಟಾಪ್ 10 ಪಾವತಿದಾರರು ಯಾರು?

-ಅಮೆರಿಕ-ಶೇ.27.89

-ಚೀನಾ-ಶೇ.15.21

-ಜಪಾನ್- ಶೇ.8.56

-ಜರ್ಮನಿ-ಶೇ.6.9

-ಇಂಗ್ಲೆಂಡ್-ಶೇ.5.79

-ಫ್ರಾನ್ಸ್-ಶೇ.5.61

-ಇಟಲಿ-ಶೇ.3.30

-ರಷ್ಯಾ-ಶೇ.3.04

-ಕೆನಡಾ-ಶೇ.2.73

-ಕೊರಿಯಾ-ಶೇ.2.26

ಸಂಪನ್ಮೂಲ ವಿಂಗಡಣೆ ಹೇಗೆ?

ಸಂಪನ್ಮೂಲ ವಿಂಗಡಣೆ ಹೇಗೆ?

ಯುದ್ಧ ದೇಶ ದೇಶಗಳ ಜಗಳ, ಭಯೋತ್ಪಾದನಾ ಚಟುವಟಿಕೆಗಳ ಹತ್ತಿಕ್ಕುವಿಕೆ, ಸೇರಿದಂತೆ ಜಗತ್ತಿನೆಲ್ಲೆಡೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಯೋಗ ನೋಡಿಕೊಳ್ಳುತ್ತದೆ. ಪ್ರತಿ ಶಾಂತಿ ಕಾರ್ಯಾಚರಣೆಗೆ ಅದರದ್ದೇ ಆದ ಬಜೆಟ್‌ನ್ನು ತಯಾರಿಸುತ್ತಾರೆ. ಅದರಲ್ಲಿ ಕಾರ್ಯಾಚರಣೆಯ ವೆಚ್ಚ, ವಾಹನ ಸಾರಿಗೆ, ಸಿಬ್ಬಂದಿಗಳ ಸಂಬಳ ಕೂಡ ಸೇರಿರುತ್ತದೆ. ಪ್ರತಿ ಬಾರಿ ಬಜೆಟ್‌ನಲ್ಲಿ ಈ ವರ್ಷದ ಜುಲೈ 1ರಿಂದ ಮುಂದಿನ ವರ್ಷದ ಜೂನ್ 30ರ ಒಳಗೆ ತಗುಲುವ ಖರ್ಚು ವೆಚ್ಚಗಳನ್ನು ಒಳಗೊಂಡಿರುತ್ತದೆ.

ಸಿಬ್ಬಂದಿಗಳ ಖರ್ಚು-ವೆಚ್ಚ ಹೇಗಿದೆ?

ಸಿಬ್ಬಂದಿಗಳ ಖರ್ಚು-ವೆಚ್ಚ ಹೇಗಿದೆ?

ವಿಶ್ವಸಂಸ್ಥೆ ತನ್ನದೇ ಆದ ಮಿಲಿಟರಿ ಪಡೆಗಳನ್ನು ಹೊಂದಿಲ್ಲ. ಹೀಗಾಗಿ ಸದಸ್ಯ ರಾಷ್ಟ್ರಗಳು ಕಾರ್ಯಾಚರಣೆಗೆ ಅಗತ್ಯವುಳ್ಳ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಒದಗಿಸುತ್ತವೆ. ಆದರೆ ಕಾರ್ಯಾಚರಣೆಯಲ್ಲಿ ಭಾಗುಯಾಗುವ ಸೈನಿಕರಿಗೆ ಹಾಗೂ ಪೊಲೀಸರಿಗೆ ರಾಷ್ಟ್ರೀಯ ಶ್ರೇಣಿಗೆ ಅನುಗುಣವಾಗಿ ಸಂಬಳವನ್ನು ಆಯಾ ದೇಶದ ಸರ್ಕಾರವೇ ಪಾವತಿಸುತ್ತದೆ.

English summary
The Financial Crisis For The United Nations , The United Nations (UN) may run out of money for operations by the end of October said Secretary-General of the global body Antonio Guterres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X