ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18ರ ಯುವಕರಿಗೆ ಅಂಗಡಿಯಲ್ಲಿ ಹೇಗೆ ಸಿಗುತ್ತೆ ಬಂದೂಕು?: ಹೀಗಿದೆ ಬೈಡೆನ್ ಮಾತು

|
Google Oneindia Kannada News

ವಾಶಿಂಗ್ಟನ್, ಮೇ 25: ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 19 ವಿದ್ಯಾರ್ಥಿಗಳು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಗನ್ ಲಾಬಿ ಕಾರಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಹತ್ಯಾಕಾಂಡದ ಕೆಲವು ಗಂಟೆಗಳ ನಂತರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೊಸ ಬಂದೂಕು ನಿರ್ಬಂಧಗಳಿಗೆ ಕರೆ ನೀಡಿದರು. ಯುನೈಟೆಡ್ ಸ್ಟೇಟ್ಸ್ ನಲ್ಲಿ ಗನ್ ಲಾಬಿ ವಿರುದ್ಧ ಸಂವೇದನಾಶೀಲ ಕಾನೂನು ಜಾರಿಗೊಳಿಸುವುದಕ್ಕೆ ಸೂಕ್ತ ಸಮಯವಾಗಿದೆ ಎಂದು ಹೇಳಿದರು.

Breaking; ಟೆಕ್ಸಾಸ್‌ನಲ್ಲಿ ದಾಳಿ, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ Breaking; ಟೆಕ್ಸಾಸ್‌ನಲ್ಲಿ ದಾಳಿ, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ

"ಒಂದು ರಾಷ್ಟ್ರವಾಗಿ ನಾವು ಕೇಳಬೇಕು, ನಾವು ಯಾವಾಗ ಗನ್ ಲಾಬಿ ನಿಲ್ಲಿಸುತ್ತೇವೆ?. ನಾವು ಮಾಡಬೇಕಾದುದನ್ನು ದೇವರ ಹೆಸರಿನಲ್ಲಿ ಯಾವಾಗ ಮಾಡುತ್ತೇವೆ?, ಈ ಹತ್ಯಾಕಾಂಡದೊಂದಿಗೆ ಬದುಕಲು ಏಕೆ ಸಿದ್ಧರಿದ್ದೀರಾ?" ಎಂದು ಬೈಡೆನ್ ಪ್ರಶ್ನೆ ಮಾಡಿದ್ದಾರೆ.

ಮೂರು ಪಟ್ಟು ಹೆಚ್ಚಾದವು ಶೂಟಿಂಗ್ ಪ್ರಕರಣಗಳು

ಮೂರು ಪಟ್ಟು ಹೆಚ್ಚಾದವು ಶೂಟಿಂಗ್ ಪ್ರಕರಣಗಳು

ಕಳೆದ 1994ರಲ್ಲಿ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸುವ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿತ್ತು. ಆದರೆ 2004ರಲ್ಲಿ ಈ ಕಾಯ್ದೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ಗುಂಡಿನ ದಾಳಿ ಪ್ರಕರಣಗಳು ಮೂರು ಪಟ್ಟು ಹೆಚ್ಚಳವಾಗಿವೆ. ಕೇವಲ 18 ವರ್ಷದ ಯುವಕನೊಬ್ಬ ಗನ್ ಅಂಗಡಿಗೆ ಹೋಗಿ ಸುಲಭವಾಗಿ ಬಂದೂಕು ಖರೀದಿಸುತ್ತಾನೆ ಎಂದರೆ, ಇದು ತುಂಬಾ ಅಪಾಯಕಾರಿ ಎನಿಸುತ್ತದೆ," ಎಂದು ಜೋ ಬೈಡೆನ್ ಹೇಳಿದ್ದಾರೆ.

ಬಂದೂಕು ನಿರ್ಬಂಧ ಕಾಯ್ದೆಯ ಬಗ್ಗೆ ಬೈಡೆನ್ ಉಲ್ಲೇಖ

ಬಂದೂಕು ನಿರ್ಬಂಧ ಕಾಯ್ದೆಯ ಬಗ್ಗೆ ಬೈಡೆನ್ ಉಲ್ಲೇಖ

ಅಮೆರಿಕಾದಲ್ಲಿ ದಾಳಿಯ ಶಸ್ತ್ರಾಸ್ತ್ರಗಳ ನಿರ್ಬಂಧ ಕಾಯ್ದೆ ಅಥವಾ ಇತರೆ ಸಾಮಾನ್ಯ ಬಂದೂಕು ಕಾನೂನುಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ. ಈ ಸಂಬಂಧ ಕಾಂಗ್ರೆಸ್ ಸದಸ್ಯರನ್ನು ಉಲ್ಲೇಖಿಸಿ ಮಾತನಾಡಿರುವ ಬೈಡೆನ್, ನಾವು ಕಟ್ಟುನಿಟ್ಟಿನ ಕಾಯ್ದೆಯನ್ನು ಹೊಂದಿರಬೇಕು ಎಂದರು. ಈ ಹಂತದಲ್ಲಿ ಬಂದೂಕಿಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ತಟಸ್ಥ, ವಿಳಂಬ ಹಾಗೂ ನಿಷಿದ್ಧ ನಿಲುವು ಹೊಂದಿರುವವರು ಈ ಘಟನೆಯಿಂದ ಪಾಠ ಕಲಿತುಕೊಳ್ಳಬೇಕು," ಎಂದರು.

ಪೋಷಕರಿಗೆ ಮಕ್ಕಳ ಅಗಲಿಕೆ ನೋವು ಭರಿಸುವ ಶಕ್ತಿ ನೀಡಲಿ

ಪೋಷಕರಿಗೆ ಮಕ್ಕಳ ಅಗಲಿಕೆ ನೋವು ಭರಿಸುವ ಶಕ್ತಿ ನೀಡಲಿ

ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ 19 ವಿದ್ಯಾರ್ಥಿಗಳು ಸೇರಿದಂತೆ 23 ಮಂದಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವಂತೆ ಬೈಡೆನ್ ಮನವಿ ಮಾಡಿಕೊಂಡಿದ್ದಾರೆ. ಇನ್ನು, ಗುಂಡಿನ ದಾಳಿಯಲ್ಲಿ ಸಾವಿನ ಮನೆ ಸೇರಿದ ಪುಟ್ಟ ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೈಡೆನ್ ಹೇಳಿದ್ದಾರೆ.

900 ಯುಎಸ್ ಶಾಲೆಗಳಲ್ಲಿ ಗುಂಡಿನ ದಾಳಿಯ ಘಟನೆಗಳು ವರದಿ

900 ಯುಎಸ್ ಶಾಲೆಗಳಲ್ಲಿ ಗುಂಡಿನ ದಾಳಿಯ ಘಟನೆಗಳು ವರದಿ

ಕಳೆದ 2018ರಲ್ಲಿ ಫ್ಲೋರಿಯಾದ ಪಾರ್ಕಲೆಂಡ್ ನಲ್ಲಿರುವ ಮರ್ಜೊರಿ ಸ್ಟೋನ್ ಮನ್ ಡೌಗ್ಲೆಸ್ ಹೈಸ್ಕೂಲಿನಲ್ಲಿ ನಡೆದ ಗುಂಡಿನ ದಾಳಿಯನ್ನು ಉಲ್ಲೇಖಿಸಿ ಬೈಡೆನ್ ಮಾತನಾಡಿದರು. 2018ರಿಂದ ಈವರೆಗೆ 900ಕ್ಕೂ ಹೆಚ್ಚು ಶಾಲೆಗಳಲ್ಲಿ ಗುಂಡಿನ ದಾಳಿ ನಡೆದಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಬೈಡೆನ್ ಹೇಳಿದರು. 10 ದಿನಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ನಡೆದಿದ್ದು, ಅದರಲ್ಲೂ 18 ವರ್ಷದ ಯುವಕನ ಕೈಗೆ ಸುಲಭವಾಗಿ ಬಂದೂಕು ಸಿಕ್ಕಿತ್ತು ಎಂದು ಬೈಡೆನ್ ಹೇಳಿದ್ದಾರೆ.

English summary
Texas school shooting: US President Biden blames on 'gun lobby,' demands for 'gun laws'. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X