ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಟೆಕ್ಸಾಸ್ ಶಾಲೆಯಲ್ಲಿ ಬಂದೂಕುಧಾರಿ ವಿದ್ಯಾರ್ಥಿ ಬಂಧನ

|
Google Oneindia Kannada News

ವಾಷಿಂಗ್ಟನ್, ಮೇ 26; ಟೆಕ್ಸಾಸ್‌ನ ರಿಚರ್ಡ್‌ ಸನ್ ಶಾಲೆಗೆ ಬಂದೂಕಿನ ಜೊತೆ ಆಗಮಿಸುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಉವಾಲ್ಡೆ ಶಾಲೆಯಲ್ಲಿ ಭೀಕರ ಗುಂಡಿನ ದಾಳಿಯಲ್ಲಿ 19 ವಿದ್ಯಾರ್ಥಿಗಳು ಸೇರಿ 23 ಜನರು ಮೃತಪಟ್ಟಿದ್ದರು.

ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಬಳಿಕ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈ ಘಟನೆ ಬಳಿಕ ಟೆಕ್ಸಾಸ್‌ನ ರಿಚರ್ಡ್‌ ಸನ್ ಪ್ರೌಢ ಶಾಲೆಗೆ ಬಂದೂಕಿನ ಸಮೇತ ಆಗಮಿಸುತ್ತಿದ್ದ ವಿದ್ಯಾರ್ಥಿ ಬಂಧಿಸಲಾಗಿದೆ.

Breaking; ಟೆಕ್ಸಾಸ್‌ನಲ್ಲಿ ದಾಳಿ, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ Breaking; ಟೆಕ್ಸಾಸ್‌ನಲ್ಲಿ ದಾಳಿ, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ

ವಿದ್ಯಾರ್ಥಿ ಶಾಲೆಗೆ ನಡೆದುಕೊಂಡು ಬರುವಾಗ ಆತನ ಬಳಿ ಬಂದೂಕು ಇರುವುದನ್ನು ಪೊಲೀಸರು ಗಮನಿಸಿದ್ದರು. ತಕ್ಷಣ ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

 ಟೆಕ್ಸಾಸ್‌ ದಾಳಿ: ಅಮೆರಿಕ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಟ ಟೆಕ್ಸಾಸ್‌ ದಾಳಿ: ಅಮೆರಿಕ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಟ

Texas High School Student Arrested For Walking School With Rifle

ಮಂಗಳವಾರ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ 2012ರಲ್ಲಿ ಕನೆಕ್ವಿಕಟ್‌ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ನಡೆದಿದ್ದ ದುರಂತದ ಬಳಿಕ ನಡೆದ ದೊಡ್ಡ ದಾಳಿ ಎಂದು ಮಾಧ್ಯಮಗಳು ಹೇಳಿದ್ದವು.

ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ sorry.. sorry..ಬರಹ: ಯುವಕರ ಹುಚ್ಚಾಟ!

ಉವಾಲ್ಡೆ ಶಾಲೆಯಲ್ಲಿನ ಭೀಕರ ಗುಂಡಿನ ದಾಳಿ ಪ್ರಕರಣದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಲು ಶನಿವಾರದ ತನಕ ಶ್ವೇತ ಭವನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲು ಅಮೆರಿಕ ಸರ್ಕಾರ ಆದೇಶ ನೀಡಿದೆ.

ಶಾಲೆಯಲ್ಲಿನ ಭೀಕರ ಗುಂಡಿನ ದಾಳಿ ಪ್ರಕರಣದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯೆ ನೀಡಿದ್ದರು. ದೇಶದಲ್ಲಿನ ಬಂದೂಕು ನಿಯಮಗಳನ್ನು ಕಠಿಣಗೊಳಿಸಲು ಸರಿಯಾದ ಸಮಯ ಇದಾಗಿದೆ ಎಂದು ಹೇಳಿದ್ದರು.

ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಗನ್ ಸಿಗುವ ಕುರಿತು ಆತಂಕ ವ್ಯಕ್ತಪಡಿಸಿದ್ದ ಅವರು, ಶಾಲೆಯಲ್ಲಿನ ಭೀಕರ ಗುಂಡಿನ ದಾಳಿ ಪ್ರಕರಣಕ್ಕೆ ಗನ್ ಲಾಬಿಯನ್ನು ದೂರಿದ್ದರು.

English summary
Police arrested a high school student after he was allegedly seen walking with a rifle to the school in Richardson, Texas. 18-year-old shooter had killed 19 students at an elementary school in Uvalde, Texas on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X