ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾ

|
Google Oneindia Kannada News

ಟೆಕ್ಸಾಸ್, ಸೆಪ್ಟೆಂಬರ್ 17: ಅಮಿಬಾವೊಂದು ಈಜಲು ಹೋಗಿದ್ದ ಬಾಲಕಿಯ ಮೆದುಳನ್ನೇ ತಿಂದಿರುವ ವಿಚಿತ್ರ ಘಟನೆ ಅಮೆರಿಕದ ಬ್ರಾಜೋಸ್ ನದಿಯಲ್ಲಿ ನಡೆದಿದೆ.

ಟೆಕ್ಸಾಸ್‌ನ 10 ವರ್ಷದ ಬಾಲಕಿ ಕಾರ್ಮಿಕರ ದಿನಾಚರಣೆ ವಾರಾಂತ್ಯದಲ್ಲಿ ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು, ವಾಕೋ ಸಮೀಪ ಇರುವ ಬ್ರಾಜೋಸ್ ನದಿಯಲ್ಲಿ ಈಜಲು ಹೋಗಿದ್ದಳು.

ಈ ಅಮಿಬಾ ಅಥವಾ ಅದರಿಂದ ಉತ್ಪತ್ತಿಯಾಗುವ ರೋಗಾಣು ಮೂಗಿನ ಮೂಲಕ ದೇಹದೊಳಗೆ ಪ್ರವೇಶಿಸುತ್ತದೆ. ಹಾಗೆಯೇ ಅದು ಮೆದುಳಿಗೆ ಪ್ರವೇಶಿಸಿ ಬ್ರೇನ್ ಟಿಶ್ಯೂವನ್ನು ನಿಷ್ಕ್ರಿಯಗೊಳಿಸಿಬಿಡುತ್ತದೆ.

Texas Girl Dies Brain-Eating Amoeba After Swimming

ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರದ ಮಾಹಿತಿ ಪ್ರಕಾರ ಸಾಮಾನ್ಯವಾಗಿ ಈ ಅಮಿಬಾ ಬೆಚ್ಚನೆಯ ತಿಳಿ ನೀರಿರುವ ಕೆರೆ, ನದಿಯಲ್ಲಿ ಜೀವಿಸುತ್ತದೆ.

ಬಾಲಕಿ ಲಿಲಿ, ವ್ಯಾಲಿ ಮಿಲ್ಸ್ ಎಲಿಮೆಂಟರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು, ಬಾಲಕಿ ಸಾವು ಕುಟುಂಬ ಹಾಗೂ ಶಾಲೆಗೆ ತುಂಬಲಾರದ ನಷ್ಟವಾಗಿದೆ. ಆಕೆ ಓದುವುದರಲ್ಲೂ ತುಂಬಾ ಚುರುಕಾಗಿದ್ದಳು. ಎಲ್ಲರ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಳು.

2009-18ರವರೆಗೆ 34 ಇಂತಹ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದೆ. 1962-2018ರವರೆಗೆ 145 ಇಂಥದ್ದೇ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಬದುಕುಳಿದಿದ್ದಾರೆ ಎನ್ನುವುದೇ ವಿಪರ್ಯಾಸ.

ನೆಗ್ಲೀರಿಯಾ ಫೌಲೆರಿ ಅಮಿಬಾ ಕುರಿತು ಮಾಹಿತಿ: ಬೆಚ್ಚಗಿನ ಸಿಹಿನೀರಿನಲ್ಲಿ (ಉದಾಹರಣೆಗೆ, ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳು) ಮತ್ತು ಮಣ್ಣಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಅಮಿಬಾ (ಏಕಕೋಶೀಯ ಜೀವಂತ ಜೀವಿ).ಇದು ಸೋಂಕುಂಟು ಮಾಡುತ್ತದೆ. ಶಾಖ-ಪ್ರೀತಿಯ (ಥರ್ಮೋಫಿಲಿಕ್) ಜೀವಿ. ಇದು 115 ° F (46 ° C) ವರೆಗಿನ ಹೆಚ್ಚಿನ ತಾಪಮಾನದಲ್ಲಿ ಜೀವಿಸುತ್ತದೆ. ಹೆಚ್ಚಿನ ತಾಪಮಾನದಲ್ಲಿ ಅಲ್ಪಾವಧಿಗೆ ಬದುಕಬಲ್ಲದು. ತಾಪಮಾನ ಕಡಿಮೆಯಾದಂತೆ ಇದು ನೀರಿನಲ್ಲಿ ಕಂಡುಬರುವ ಸಾಧ್ಯತೆ ಕಡಿಮೆ.

ಸೋಂಕು ವಿರಳವಾಗಿದ್ದರೂ, ಅವು ಮುಖ್ಯವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಬೇಸಿಗೆಯ ತಿಂಗಳುಗಳಲ್ಲಿ ಕಂಡುಬರುತ್ತವೆ. ದೀರ್ಘಕಾಲದವರೆಗೆ ಬಿಸಿಯಾಗಿರುವ ಪ್ರದೇಶದಲ್ಲಿ ಸೋಂಕುಗಳು ಸಾಮಾನ್ಯವಾಗಿ ಸಂಭವಿಸುತ್ತವೆ, ಇದು ಹೆಚ್ಚಿನ ನೀರಿನ ತಾಪಮಾನ ಮತ್ತು ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುವುದಿಲ್ಲ ಎಂದು ಸಾಬೀತಾಗಿದೆ.

ಡೈವಿಂಗ್ ಅಥವಾ ನೀರಿಗೆ ಹಾರಿ, ತಲೆಯನ್ನು ನೀರಿನ ಅಡಿಯಲ್ಲಿ ಮುಳುಗಿಸುವುದು ಅಥವಾ ನೀರಿನ ಸಂಬಂಧಿತ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನೀರು ಮೂಗಿನ ಮೇಲಕ್ಕೆ ಹೋಗಲು ಕಾರಣವಾಗುತ್ತದೆ.

English summary
Texas Girl Dies Brain-Eating Amoeba After Swimming , Naegleria fowleri is found around the world. In the United States, the majority of infections have been caused by Naegleria fowleri from freshwater located in southern-tier states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X